Saturday, June 25, 2022

ದನಿಪಯಣ: ವನಿತಾ ಸೇವಾ ಸಮಾಜದ ಮಾಯಿ - ಭಾಗೀರಥಿಬಾಯಿ

ಬಹಳ ದಿನಗಳ ನಂತರ ಒಂದು #ದನಿಪಯಣ ಸಂಚಿಕೆ ಮಾಡಿದ್ದೇವೆ. ಈ ಸಲ ಧಾರವಾಡದ ವನಿತಾ ಸೇವಾ ಸಮಾಜಕ್ಕೆ ಹೋಗಿ, ಅದರ ಸ್ಥಾಪಕಿ ಶ್ರೀಮತಿ ಭಾಗೀರಥಿಬಾಯಿ ಪುರಾಣಿಕರ ಸ್ಫೂರ್ತಿ ತುಂಬುವ ಜೀವನದ ಬಗ್ಗೆ ಮಾತನಾಡಿದ್ದೇವೆ. 

ನಿಮಗೆ ಗೊತ್ತಾ?
🔶 ಬಾಲವಿಧವೆಯಾಗಿದ್ದ ಶ್ರೀಮತಿ ಭಾಗೀರಥಿಬಾಯಿ ಪುರಾಣಿಕ ವನಿತಾ ಸೇವಾ ಸಮಾಜ ಸ್ಥಾಪಿಸಿ ಅದರ ಮೂಲಕ ಸಾವಿರಾರು ಹೆಣ್ಣುಮಕ್ಕಳಿಗೆ ಜೀವನ ಮಾರ್ಗ ತೋರಿಸಿದ್ದರು.
🔶 ಸಮಾಜದ ಎಲ್ಲರೂ ಶ್ರೀಮತಿ ಭಾಗೀರಥಿಬಾಯಿ ಅವರಿಗೆ ಪ್ರೀತಿ-ಗೌರವದಿಂದ 'ಮಾಯಿ' ಅಂತಲೇ ಕರೆಯುತ್ತಿದ್ದರು.
🔶 ೧೯೨೮ರಲ್ಲಿ ಮಾಯಿಯಿಂದ ಸ್ಥಾಪಿತವಾದ ವನಿತಾ ಸೇವಾ ಸಮಾಜದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹೈಸ್ಕೂಲ್‌ವರೆಗೆ, ನಂತರ ನೇಯ್ಗೆ-ಹೊಲಿಗೆ-ಕಸೂತಿ ಇತ್ಯಾದಿ ವೃತ್ತಿ ಶಿಕ್ಷಣವೂ, ಶಿಕ್ಷಕರ ತರಬೇತಿ ಸಂಸ್ಥೆಯೂ ನಡೆಯುತ್ತಿದ್ದವು.
🔶 ಹೆರಿಗೆ ಮನೆ, ನಿಸರ್ಗ ಚಿಕಿತ್ಸಾಲಯ, ಆಯುರ್ವೇದ ಔಷಧಾಲಯ ಎಲ್ಲ ಇದೇ ಜಾಗದಲ್ಲಿ ನಡೆಯುತ್ತಿದ್ದವು.
🔶 ಇಂದಿನ ಪದ್ಮಪ್ರಶಸ್ತಿಗಳಂತೆ ಆವಾಗಿನ ಆಂಗ್ಲ ಸರಕಾರ ಕೊಡುತ್ತಿದ್ದ ಕೈ‌ಸರ್-ಎ-ಹಿಂದ್ ಪ್ರಶಸ್ತಿ ಪಡೆದ ಮೊದಲ ಕನ್ನಡತಿ ಮಾಯಿ.

ಬನ್ನಿ ನಮ್ಮ #ದನಿಪಯಣ ಸಂಚಿಕೆ ಕೇಳಿ.
https://www.google.com/podcasts?feed=aHR0cHM6Ly9hbmNob3IuZm0vcy8xMTAwMTAyMC9wb2RjYXN0L3Jzcw==

ಮಾಯಿ ಸ್ಥಾಪಿಸಿದ ಸಂಸ್ಥೆಗೆ ನೀವೂ ಸಹಾಯ ಮಾಡಿ, ವಿವರಗಳು ಇಲ್ಲಿವೆ 👉 http://www.vanitasevasamajdharwad.org/appeal.html

ಈ ದನಿಪಯಣದ ಸಂಚಿಕೆಯಲ್ಲಿ ಉಲ್ಲೇಖಿಸಿದ ಫೋಟೋಗಳು, ಚಿತ್ರಗಳು ಈ ಬ್ಲಾಗ್ ಪೋಸ್ಟ್‌ನಲ್ಲಿವೆ. (ಚಿತ್ರಕೃಪೆ: ವನಿತಾ ಸೇವಾ ಸಮಾಜ)


ನಿಮಗೆ ಗೊತ್ತಿದ್ದದ್ದೇ ವಿಷಯ -ದನಿಪಯಣ ಪಾಡ್‌ಕಾಸ್ಟ್‌ ಕಾರ್ಯಕ್ರಮದ ಉದ್ದೇಶ ಶಾಲೆಯಲ್ಲಿ ಕಲಿಸದ, ಪಠ್ಯ ಪುಸ್ತಕಗಳಲ್ಲಿ ಇರದ ನಮ್ಮ ಊರು-ನಾಡುಗಳ ಕತೆ-ಇತಿಹಾಸ ತಿಳಿದುಕೊಳ್ಳೋದು ಮತ್ತು ಮಕ್ಕಳಿಗೆ ತಿಳಿಸುವುದು.
ಈ ಪಾಡ್‌ಕಾಸ್ಟ್‌ ಸಂಚಿಕೆಗಳು ರೇಡಿಯೋ-ಗಿರ್ಮಿಟ್ನಲ್ಲಿ (radiogirmit.com) ಆಗಾಗ ಪ್ರಸಾರ ಆಗುತ್ತವೆ.








Thursday, December 31, 2020

ಬೆಂಗಳೂರಿನ ನರಹರಿರಾಯರ ಗುಡ್ಡಕ್ಕೆ ದನಿಪಯಣ

ಈ #ದನಿಪಯಣ ಸಂಚಿಕೆಯಲ್ಲಿ ಬೆಂಗಳೂರಿನ ಹನುಮಂತ ನಗರದಲ್ಲಿರುವ ನರಹರಿರಾಯರ ಗುಡ್ಡಕ್ಕೆ ಹೋಗಿ, ಅದು ನೆನಪಿಸುವ ವಿಷಯಗಳ ಬಗ್ಗೆ ಮಾತನಾಡುತ್ತ ನಡೆಯಲಿದ್ದೇವೆ.


🔶 ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ಶಿವಾಲಯವಾಗಿದ್ದ ಇಲ್ಲಿನ ದೇವಸ್ಥಾನ ಈಗ ಕುಮಾರಸ್ವಾಮಿ ಗುಡಿಯಾಗಿ ಪ್ರಸಿದ್ಧವಾಗಿದೆ.



🔶 ಕಳೆದ ಶತಮಾನದ ಶುರುವಿನಲ್ಲಿ ಹೈಕೋರ್ಟ್ ಜಜ್ ಆಗಿದ್ದ ಶ್ರೀ ನರಹರಿರಾಯರು ಇಲ್ಲಿನ ಗುಡಿಯನ್ನು ನವೀಕರಿಸಿದ್ದರಿಂದ ಈ ಬೆಟ್ಟಕ್ಕೆ ನರಹರಿರಾಯರ ಗುಡ್ಡ ಎಂದೇ ಹೆಸರಾಗಿದೆ.



🔶 ಮೌಂಟ್ ಜಾಯ್ ಎಂದು ಅಧಿಕೃತ ಹೆಸರಿರುವ ಇದಕ್ಕೆ, ಕೆಲವು ತಮಿಳರು ಪೊನ್ನುಮಲೈ ಎಂದು ಹೆಸರು ಬದಲಿಸಲು ಸಂಚುಮಾಡಿದ್ದರು.

🔶 ಖ್ಯಾತ ಕರ್ನಾಟಕ ಸಂಗೀತ ವಿದುಷಿ ಬೆಂಗಳೂರು ನಾಗರತ್ನಮ್ಮನವರಿಗೂ ಈ ಬೆಟ್ಟಕ್ಕೂ ಏನು ಸಂಬಂಧ ಗೊತ್ತಾ?



🔶 ಸ್ತ್ರೀವಾದಿಯಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಬೆಂಬಲಿಗರಾಗಿ, ಸಂಘಟನಕಾರ್ತಿಯಾಗಿ ನಾಗರತ್ನಮ್ಮನವರ ಹೋರಾಟ, ಸಾಧನೆಗಳ ಬಗ್ಗೆ ನಿಮಗೆ ಗೊತ್ತಾ?


ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ:
  
https://anchor.fm/gururaj-kulkarni/episodes/ep-eodo1a

ಈ ಸಂಚಿಕೆ ಈಗ ವಿಡಿಯೋ ರೂಪದಲ್ಲಿಯೂ ಲಭ್ಯವಿದೆ: https://youtu.be/uRpm7qcleHk


ನಿಮಗೆ ಗೊತ್ತಿರೊ ಹಾಗೆ : *ದನಿಪಯಣ* ಪಾಡ್‌ಕಾಸ್ಟ್‌ ಕಾರ್ಯಕ್ರಮದ ಉದ್ದೇಶ ಶಾಲೆಯಲ್ಲಿ ಕಲಿಸದ, ಪಠ್ಯ ಪುಸ್ತಕಗಳಲ್ಲಿ ಇರದ ನಮ್ಮ ಊರು-ನಾಡುಗಳ ಕತೆ-ಇತಿಹಾಸ ತಿಳಿದುಕೊಳ್ಳೋದು ಮತ್ತು ಮಕ್ಕಳಿಗೆ ತಿಳಿಸುವುದು.
ಈ ಪಾಡ್‌ಕಾಸ್ಟ್‌ ಸಂಚಿಕೆಗಳು ರೇಡಿಯೋ-ಗಿರ್ಮಿಟ್ನಲ್ಲಿ (radiogirmit.com)  ಆಗಾಗ ಪ್ರಸಾರ ಆಗುತ್ತವೆ.

ದನಿಪಯಣ ದ ಹಿಂದಿನ ಸಂಚಿಕೆಗಳು ಗೂಗಲ್‌ಪಾಡ್‌ಕಾಸ್ಟ್ ನಲ್ಲಿ ಲಭ್ಯವಿವೆ: https://www.google.com/podcasts?feed=aHR0cHM6Ly9hbmNob3IuZm0vcy8xMTAwMTAyMC9wb2RjYXN0L3Jzcw==

ನಮ್ಮ ದನಿಪಯಣದ  ಸಂಚಿಕೆಗಳನ್ನು ಇತರ ಆಸಕ್ತರಿಗೆ ಫಾರ್ವರ್ಡ್ ಮಾಡಿ. 

Sunday, September 6, 2020

ದನಿಪಯಣದಲ್ಲಿ ಹುಬ್ಬಳ್ಳಿಯ ಸ್ವಾತಂತ್ರ್ಯ ಸಮರ

ಸ್ವಾತಂತ್ರ್ಯ ದಿನದ ತಡವಾದ ಶುಭಾಶಯಗಳು. ಅಗಸ್ಟ್ ೧೬ರ ಈ #ದನಿಪಯಣ ಸಂಚಿಕೆಯಲ್ಲಿ ಗಂಡುಮೆಟ್ಟಿನ ನೆಲ ಹುಬ್ಬಳ್ಳಿಯಲ್ಲಿ ಸ್ವಾತಂತ್ರ್ಯ ಸಮರದ ನೆನಪುಗಳ ಬಗ್ಗೆ ಮಾತನಾಡುತ್ತ ನಡೆಯಲಿದ್ದೇವೆ. 

#ದನಿಪಯಣ ದ ಈ ಸಂಚಿಕೆಯನ್ನು ಇಲ್ಲಿ ಕೇಳಿ:
https://anchor.fm/gururaj-kulkarni/episodes/ep-ej76km


🔶 ಹುಬ್ಬಳ್ಳಿಯನ್ನು ಕರ್ಮಭೂಮಿಯಾಗಿಸಿಕೊಂಡಿದ್ದ ಧೈರ್ಯಶಾಲಿ ಮಹಿಳೆ ಶ್ರೀಮತಿ ಉಮಾಬಾಯಿ ಕುಂದಾಪುರರು ಭಗಿನಿ ಮಂಡಳದ ಮೂಲಕ ಸ್ವಾತಂತ್ರ್ಯದ ಸ್ವಯಂಸೇವಕಿಯರನ್ನು ಸಜ್ಜುಗೊಳಿಸುತಿದ್ದರು.

🔷 ನಿಮಗೆ ಗೊತ್ತಾ ? ಈಗ ಹುಬ್ಬಳ್ಳಿ-ಬೆಂಗಳೂರಿನಲ್ಲಿ ಮುಖ್ಯ ನೆಲೆ ಕಂಡುಕೊಂಡಿರುವ 'ಸಂಯುಕ್ತ ಕರ್ನಾಟಕ' ಶುರುವಾಗಿದ್ದು ಬೆಳಗಾವಿಯಲ್ಲಿ, ಅದೂ ವಾರಪತ್ರಿಕೆಯಾಗಿ..

🔶 ಧಾರವಾಡದ ವಿದ್ಯಾರಣ್ಯ ಶಾಲೆಯಲ್ಲಿ ಸಹೋದ್ಯೋಗಿಗಳಾಗಿದ್ದ ಸರ್ವಶ್ರೀ ರಂಗನಾಥ ದಿವಾಕರ, ಮಧ್ವರಾವ್ ಕಬ್ಬೂರ ಮತ್ತು ರಾಮರಾವ ಹುಕ್ಕೇರಿಕರರು ಶುರುಮಾಡಿದ್ದ "ಕರ್ಮವೀರ" ಪತ್ರಿಕೆಗೆ ಆ ಹೆಸರು ಕೊಡಲು ಕಾರಣವೇನು ಗೊತ್ತಾ?

🔷 ಬಡತನದಲ್ಲಿಯೇ ಹುಟ್ಟಿ, ಕಷ್ಟ ಪಟ್ಟು ಬೆಳದ ಸರ್ ಸಿದ್ದಪ್ಪ ಕಂಬಳಿಯವರು ಅಂದಿನ ಬಾಂಬೆ ಸರಕಾರದಲ್ಲಿ ಶಿಕ್ಷಣ, ಕೃಷಿ, ಅಬಕಾರಿ ಸಚಿವರಾಗಿ ದುಡಿದವರು. ಅಂದಿನ ಬಹುತೇಕ ನಾಯಕರಂತೆ ಗಾಂಧಿ ಬೆಂಬಲಿಗರಾಗದೇ , ಕಾಂಗ್ರೆಸ್‌ಗೆ ಸ್ಪರ್ಧಿಯಾಗಿದ್ದವರು.

🔶 ಹಿಂದುಸ್ಥಾನ ಸೇವಾದಳವನ್ನು ಸ್ಥಾಪಿಸಿದ ಡಾ.ನಾ.ಸು.ಹರ್ಡಿಕರರು ಹುಬ್ಬಳ್ಳಿಯವರು. ದಳದ ಕೇಂದ್ರ ಕಚೇರಿ ಹುಬ್ಬಳ್ಳಿಯೇ ಆಗಿತ್ತು.

🔷 ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಹದಿಮೂರು ವರ್ಷದ ಬಾಲಕ ನಾರಾಯಣ ಡೋಣಿ ಹುಬ್ಬಳ್ಳಿಯಲ್ಲಿ ಹುತಾತ್ಮನಾಗಿದ್ದ.

ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.

ಇದನ್ನು ಗೂಗಲ್ ಪಾಡಕಾಸ್ಟ್‌ನಲ್ಲಿ ಕೇಳಲು ಇಲ್ಲಿ ಕ್ಲಿಕ್ಕಿಸಿ


ಈ ಪಯಣಕ್ಕೆ ನಾವು ಸವೆಸಿದ ಹಾದಿ:



ಮೊದಲು ಕಿತ್ತೂರು ರಾಣಿ ಚನ್ನಮನಿಗೆ ನಮಿಸಿ,
ಆಮೇಲೆ ಕಿತ್ತೂರಿನ ಕಲಿ ರಾಯಣ್ಣನಿಗೆ ವಂದಿಸಿ ಪಯಣ ಶುರುಮಾಡಿದೆವು.
ಮೊದಲು ನೆನಪಿಸಿಕೊಂಡಿದ್ದು ಮಹಾ ಧೈರ್ಯವಂತ ಹೆಣ್ಣು ಮಗಳು ಶ್ರೀಮತಿ ಉಮಾಬಾಯಿ ಕುಂದಾಪುರರನ್ನು:
ಆಮೇಲೆ ಸರ್ ಸಿದ್ದಪ್ಪ ಕಂಬಳಿಯವರ ಮೂರ್ತಿಗೆ ನಮಿಸಿ, ಅವರು ತುಳಿದ ಭಿನ್ನ ಹಾದಿಯ ಬಗ್ಗೆ ಮಾತನಾಡಿದ್ದೇವೆ.
೧೯೪೨ರ ಹುತಾತ್ಮರ ವೀರಗಲ್ಲಿಗೆ ನಮಿಸಿ ಪಯಣ ಮುಂದುವರಿಸಿದ್ದೆವು.
ಸಂಯುಕ್ತ ಕರ್ನಾಟಕ ಕಟ್ಟಡ ನೋಡಿ, ಶ್ರೀ ದಿವಾಕರರನ್ನು ನೆನೆಸಿಕೊಂಡು, ಲೋಕಶಿಕ್ಷಣ ಟ್ರಸ್ಟ್‌ನ ಪತ್ರಿಕೆಗಳ ಇತಿಹಾಸ ಚರ್ಚಿಸಿದ್ದೇವೆ:
ಆಮೇಲೆ ಡಾ. ನ.ಸು.ಹರ್ಡಿಕರರನ್ನು ನೆನೆಸಿಕೊಂಡು, ಅವರ ಹಿಂದುಸ್ಥಾನ ಸೇವಾದಳದ ಬಗ್ಗೆ ಮಾತನಾಡಿದ್ದೇವೆ.
ಕೊನೆಗೆ ೧೯೪೨ರ ಬಾಲ-ಹುತಾತ್ಮ ನಾರಾಯಣನ ಮೂರ್ತಿಗೆ ನಮಿಸಿ ನಮ್ಮ ದನಿಪಯಣ ಮುಗಿಸಿದ್ದೇವೆ.


Sunday, June 28, 2020

ದನಿಪಯಣದಲ್ಲಿ ಧಾರವಾಡದ ಕೆಇಬೋರ್ಡ್ ಸಂಸ್ಥೆ

ಧಾರವಾಡದ ಬಗ್ಗೆ ನಾವು ಈಗಾಗಲೇ ಎರಡು #ದನಿಪಯಣ ಸಂಚಿಕೆ ಮಾಡಿದ್ದೇವೆ.
೧. ಕವಿದಿನದಂದು "ಗಾರುಡಿಗನ ಧಾರವಾಡ" ಎಂಬ ಬೇಂದ್ರೆ ಅಜ್ಜನ ಕವನಗಳೊಳಗೆ ಬರುವ ಧಾರವಾಡದ ಜಾಗಗಳ ಬಗೆಗೆ ಮಾಡಿದ ಪಾಡ್‌ಕಾಸ್ಟ್ - https://anchor.fm/gururaj-kulkarni/episodes/--ean3ea

೨. ಧಾರವಾಡ ಸಮ್ಮೇಳನದ ಸಂದರ್ಭದಲ್ಲಿ ಮಾಡಿದ "ಧಾರವಾಡ ದರ್ಶನ" - https://anchor.fm/gururaj-kulkarni/episodes/--e99sfb


ಈ ಸಲದ #ದನಿಪಯಣ ಪಾಡ್‌ಕಾಸ್ಟ್‌ ಸಂಚಿಕೆ  ಶಾಲೆಯಲ್ಲಿ ಕಲಿಸದ, ಶಾಲೆಯ ಇತಿಹಾಸದ ಬಗೆಗೆ ಇರಲಿದೆ. ಹೌದು, ಈ ಸಲ ನಾವು ನಮ್ಮ ಧಾರವಾಡದ "ರ್‍ಯಾಂಕುಗಳ ಬ್ಯಾಂಕು" ಕೆಇಬೋರ್ಡ ಸಂಸ್ಥೆಯ ಶಾಲೆಗಳಿಗೆ ಪಯಣ ಹೊರಟಿದ್ದೇವೆ. 

ಕೆಲ ತಿಂಗಳ ಹಿಂದೆಯೇ  ಈ ಸಂಸ್ಥೆ ಶತಮಾನ ಆಚರಿಸಿದೆ:


ಈ ಪಯಣದ ಹಾದಿ:


ಈಗ ಕೆಇಬೋರ್ಡ ಅಡಿ ಇರುವ ವಿದ್ಯಾರಣ್ಯ ಶಾಲೆ,  ೧೮೮೨ರಲ್ಲಿ ಶುರುವಾಗಿದ್ದು, ಶಾಲೆಗೆ ಶ್ರೀ ವಿಷ್ಣು ಕಾಶಿನಾಥ್ ಲೀಲೆಯವರು ಮೊದಲ ಮುಖ್ಯಸ್ಥರು.


ಈ ಶಾಲೆಯ ಹಳೆಯ ವಿದ್ಯಾರ್ಥಿ ಶ್ರೀ ಶ್ರೀನಿವಾಸ ದಲಾಲರು ಗಣೀತಶಾಸ್ತ್ರದ ವಿದ್ವಾಂಸರು, ಅಮೇರಿಕೆಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು.  ತಮ್ಮ ಜೀವವಿಮೆಗೆ ಶಾಲೆಯನ್ನು ನಾಮನಿರ್ದೇಶನ ಮಾಡಿದ್ದರು. ಅವರ ನಿಧನದ ನಂತರ ಬಂದ ಮೊತ್ತದಿಂದ ಈ ಶಾಲೆಯ ಒಂದು ಭವನವನ್ನು ಕಟ್ಟಲಾಗಿದೆ.


ಈಗ ಜೆಎಸ್‌ಎಸ್ ಕಾಲೇಜೆಂದು ಪ್ರಸಿದ್ಧವಾಗಿರುವ ಕಾಲೇಜು, ಈಗ ವಿದ್ಯಾರಣ್ಯ ಶಾಲೆ ಇರುವ ಜಾಗದಲ್ಲೇ ಶುರುವಾಗಿತ್ತು. ಖ್ಯಾತ #ಕನ್ನಡ ಕವಿ, #ಕನ್ನಡದ ಕಣ್ವ ಶ್ರೀ ಯವರು ಅದರ ಮೊದಲ ಪ್ರಾಂಶುಪಾಲರು.

ಹಾಗೆಯೇ, ನಿಮಗೊತ್ತಾ ?


ಧಾರವಾಡದ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾಗಿ, ಕರ್ನಾಟಕ ಕಾಲೇಜಿನ ಸ್ಥಾಪಕರಾಗಿ, ಧಾರವಾಡವನ್ನು ವಿದ್ಯಾಕಾಶಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ರಾವ್ ಬಹಾದ್ದೂರ್ ಶ್ರೀ ರೊದ್ಧ ಶ್ರೀನಿವಾಸರಾಯರೇ ಕರ್ನಾಟಕ ಪ್ರೌಢಶಾಲೆಯ, ಕೆಇಬೋರ್ಡ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು.


ಈ ಸಂಸ್ಥೆಯ ಶಾಲೆಗಳು ಶ್ರೀ ಸಾಲಿ ರಾಮಚಂದ್ರ ರಾಯರು ಸಾಲಿ ಕಲಿಸಿದ, ಸಾಲಿಗೆ ಪ್ರಾರ್ಥನಾ ಪದ್ಯ ಬರೆದ ಸಾಲಿಗಳು.



"ರ್‍ಯಾಂಕುಗಳ ಬ್ಯಾಂಕು" ಎಂದೇ ಪ್ರಸಿದ್ಧ ಈ ಸಂಸ್ಥೆಯ ಶಾಲೆಗಳು.


ಕೆಇಬೋರ್ಡ ಸಂಸ್ಥೆ ಸ್ವಾತಂತ್ರ್ಯ ಹೋರಾಟಗಾರರ ತವರು ಇದ್ದಂತೆ.

ಇಲ್ಲಿಯ ಡಾ.ಕಬ್ಬೂರ, ಶ್ರೀ ಕರಮರಕರ, ಶ್ರೀ ಕೆ.ಜಿ. ಜೋಷಿ ಕರನಿರಾಕರಣೆ/ಕಾನೂನು ಭಂಗ ಚಳುವಳಿಗಳಲ್ಲಿ ಮುಂದಾಳತ್ವ ವಹಿಸಿದ್ದರು.  ಉತ್ತರ ಕನ್ನಡ ಜಿಲ್ಲೆಯ ಚಳುವಳಿಯ ಬಗೆಗಿನ ನಮ್ಮ #ದನಿಪಯಣ ಸಂಚಿಕೆಯಲ್ಲಿ ಆ ಬಗ್ಗೆ ಮಾತಾಡಿದ್ದೆವು :https://anchor.fm/gururaj-kulkarni/episodes/ep-e9due2
ಕರ್ನಾಟಕ ಫ್ರೌಢಶಾಲೆಯ ಮುಖ್ಯೋಪಾಧ್ಯಯರಾಗಿದ್ದ ಶ್ರೀ ಶನೋಲಕರರು ಶ್ರೀ ಎಸ್‌ಜಿ ನಾಡಗೇರರು ಭೂಗತ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.

ಈ ಸಂಸ್ಥೆಯ ಶ್ರೀ ಮುಧೋಳಕರ, ಶ್ರೀ ಶೆಟ್ಟಿ ಶ್ರೀ ಬಡಿಗೇರರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ್ದರು.

ಕಾಂಗ್ರೆಸ್ ಕರಪತ್ರಗಳು ಆಗಾಗ ಕರ್ನಾಟಕ ಹೈಸ್ಕೂಲಿನಲ್ಲಿ ಅಚ್ಚಾಗುತ್ತಿದ್ದವು.


ಅವರು ಕರ್ನಾಟಕ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾಯಕತ್ವ ವಹಿಸಿ ಜೈಲು ಅನುಭವಿಸಿದವರು. ಆದರೆ ವೃತ್ತಿಯಿಂದ ವೈದ್ಯರು, ಹೀಗಾಗಿ ಜೈಲಿನಲ್ಲಿ ಸೋಂಕುರೋಗ ಕಾಲಿಟ್ಟಾಗ, ತಾವೇ ಸ್ವತಃ ರೋಗಿ ಕೈದಿಗಳ ಶುಶ್ರೂಷೆ ಮಾಡಿದವರು.


ಕೆ.ಇ. ಬೋರ್ಡ್ ಸಂಸ್ಥೆಗಾಗಿ ಅರ್ಧಶತಮಾನ ದುಡಿದ ಡಾ. ನಾ.ಭೀ.ಕಬ್ಬೂರರಿಗೆ ನಮ್ಮ #ದನಿಪಯಣ ಸಂಚಿಕೆಯಲ್ಲಿ  ನಮನ ಸಲ್ಲಿಸಲಿದ್ದೇವೆ.


ಈ #ದನಿಪಯಣ ಸಂಚಿಕೆಯ ಗ್ರಂಥ ಋಣ:



Saturday, May 30, 2020

ಕುಮಾರಸ್ವಾಮಿ ಬಡಾವಣೆ ದರ್ಶನ

ಲಾಕ್ಡೌನ್ ನಡುವೆ ದೂರ ಪಯಣ ಹೋಗದೆ ನಾವು ನಮ್ಮ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಇತಿಹಾಸವನ್ನು ಈ ಸಲದ #ದನಿಪಯಣ ಸಂಚಿಕೆಯಲ್ಲಿ ತಿಳಿಯಲಿದ್ದೇವೆ. ಬನ್ನಿ  ಕೇಳಿ

https://anchor.fm/gururaj-kulkarni/episodes/--eeph2d

 ನಾವು ಸುತ್ತುವ ದಾರಿ :








ನಮ್ಮ ಮೊದಲ ನಿಲ್ದಾಣ ಶ್ರೀ ಖಾನೆ ಮುನೇಶ್ವರ ದೇವಸ್ಥಾನ:



ನಮ್ಮ ಎರಡನೇ ನಿಲ್ದಾಣ ವಿಜಯನಗರ ಕಾಲದ ಶಾಸನವಿರುವ ಶ್ರೀ ಯಲ್ಲಮ್ಮ ದೇವಸ್ಥಾನ



ಮುಂದಿನ ನಿಲ್ದಾಣ ಉದ್ಭವ ಕುಮಾರಸ್ವಾಮಿ ದೇವಸ್ಥಾನ

ಕೊನೆಯ ನಿಲ್ದಾಣ ಶಾವಿಗೆ ಮಲ್ಲೇಶ್ವರ ದೇವಸ್ಥಾನ






ಕೊನೆಗೆ ಆಭಾರಮನ್ನಣೆ: