ಮಳಗಾವಕರರ ಕಥನ ಶೈಲಿಯ ಬಗ್ಗೆ, ಬೆಳೆಗೆರೆಯ ಭಾಷಾಂತರದ ಬಗ್ಗೆ ಎರಡು ಮಾತಿಲ್ಲ. ಇತಿಹಾಸದ ಬಗ್ಗೆ ವಿಶೇಷ ಆಸಕ್ತಿ ಇಲ್ಲದವರೂ ಇದನ್ನು ಓದಿ ಆನಂದಿಸಬಹುದು.
ಕೆಲವು ಅನಿಸಿಕೆಗಳು:
- ಅಜೀಜ್ ಎನ್ನುವ ನಾನಾಸಾಹೇಬನ ಆಪ್ತ ಕಾರ್ಯದರ್ಶಿಗೆ ಆಂಗ್ಲರ ಬಗೆಗೆ ಒಂದು ಅಂಧಾಭಿಮಾನವಿರುತ್ತದೆ. ಉಡುಗೆ- ತೊಡುಗೆ, ನಡೆ-ನುಡಿಗಳಲ್ಲಿ ಅವರನ್ನು ಅನುಕರಣೆ ಮಾಡುತ್ತಿರುತ್ತಾನೆ. ಒಮ್ಮೆ ನಾನಾಸಾಹೇಬ ಅಜೀಜನನ್ನು ಕೆಲಸ್ನಿಮಿತ್ತವಾಗಿಇಂಗ್ಲಂಡಿಗೆ ಕಳುಹಿಸುತ್ತಾನೆ. ಮರಳಿ ಬಂದ ಅಜೀಜ ಸಂಪೂರ್ಣ ಬದಲಾಗಿರುತ್ತಾನೆ ! ಆಂಗ್ಲರನ್ನು ಅವರನಾಡಲ್ಲಿಯೇ ಕಂಡಅಜೀಜ ಬ್ರಮನಿರಸನಗೊಂಡು, ನಮ್ಮೂರ ನಮಗ ಪಾಡ ಎಂದು ಬದಲಾಗುತ್ತಾನೆ.
=> ನನಗೊಂದು ವಿಚಾರ ಬರುತ್ತಿದೆ. ನಮ್ಮಲ್ಲಿ ಕೆಲ ಜನ ಕರ್ನಾಟಕದಲ್ಲಿಯೇ ಹುಟ್ಟಿ, ಕರ್ನಾಟಕದಲ್ಲಿಯೇ ಬೆಳೆದು ಹಿಂದಿಯ ಬಗೆಗೆ ಒಂದು ಮೂಢಾರಾಧನೆ ಹೊಂದಿರುತ್ತಾರೆ. ಅವರನ್ನು ಯಾವುದಾದರೂ ಬಿಮಾರು ( BiMaRU – ಬಿಹಾರ್, ಮಧ್ಯಪ್ರದೇಶ,ರಾಜಸ್ಥಾನ, ಯುಪಿ) ರಾಜ್ಯಗಳಿಗೆ ಹೊತ್ತುಹಾಕಿದರೆ, ಆವಾಗಲಾದರೂ ಅವರಿಗೆ ಬುದ್ಧಿ ಬರಬಹುದಾ ಅಂತ..
- ಕಾನ್ಪುರ ನಗರವನ್ನು ನಾನಾನ ನೇತ್ರತ್ವದ ಪಡೆಗಳು ವಶಪಡಿಸಿಕೊಂಡು ಕೆಲವೇ ದಿನಗಳಾಗಿರುತ್ತವೆ. ದಿಲ್ಲಿಯಿಂದ ಹೊರಟಬ್ರಿಟಿಷ್ಪಡೆಗಳು ಶೀಘ್ರಗತಿಯಿಂದ ಕಾನ್ಪುರದ ಕಡೆಗೆ ನುಗ್ಗುವ ಸುದ್ದಿ ಬರುತ್ತದೆ. ಅದಕ್ಕೆ ನಾನಾ ಅಂದುಕೊಳ್ಳುತಾನೆ - ಇನ್ನುಕೆಲವೇಕೆಲವು ಭಾರತೀಯರು ಬ್ರಿಟಿಷರ ಪರವಾಗಿ ಕೆಲಸಮಾಡದಿದ್ದರೂ - ನಾವಿಕರು ಇಂಗ್ಲೀಷ್ ಸೈನ್ಯ ವನ್ನು ನದಿ ದಾಟಲುಸಹಾಯಮಾಡದಿದ್ದರೆ, ಕೂಲಿಗಳು ಸೈನ್ಯದ ಸರಂಜಾಮನ್ನು ಹೊತ್ತು ಸಾಗಿಸಲು ನಿರಾಕರಿಸಿದ್ದರೆ - ಬ್ರಿಟಿಷರಿಗೆ ಜಯಸಾಧ್ಯವಾಗುತ್ತಿರಲಿಲ್ಲ.
=> ಇದನ್ನು ನನ್ನ 'ಎಡ'ಚ ಸ್ನೇಹಿತನಿಗೆ ಹೇಳಿದಾಗ ಅವನು “ಎಮ್ಮೆನ್ಸಿಗಳಲ್ಲಿ ಕೆಲಸ ಮಾಡುವ ನಾವು ಸಹ ಅಂದಿನ ಅಂಬಿಗ, ಕೂಲಿಗಳಂತೆ ಸಣ್ಣ ಸ್ವಂತ ಲಾಭಕ್ಕೆ ದೇಶದ ಹಿತವನ್ನು ಬಲಿಕೊಡುವವರೆ..” ಎಂದ. ಹೌದಾ ? ಮುಂದಿನ ಇತಿಹಾಸ ನಮ್ಮನ್ನೂ ದೇಶಹಿತಕ್ಕೆ ದ್ರೋಹವೆಸಗಿದ ಸ್ವಾರ್ಥಿಗಳೆಂದೆ ನೆನಪಿಸಿಕೊಳ್ಳುತ್ತದಾ ? ನಾನು ಚಿಂತಿತನಾಗಿದ್ದೇನೆ ..
- ಅಂದಿನ ಭಾರತೀಯರ ಮೇಲಾದ ಹಿಂಸೆಯಲ್ಲಿ ಬ್ರಿಟಿಷ್ ಪಡೆಗಳಲ್ಲಿದ್ದ ಬ್ರಿಟಿಷರಷ್ಟೇ ಕ್ರೂರರಾಗಿ ವರ್ತಿಸಿದವರು ಸಿಕ್ಖರು ! ಕೆಲವೇವರುಷಗಳ ಹಿಂದೆ ಬ್ರಿಟಿಷರ ವಿರುದ್ಧ ಹೋರಾಡಿದ್ದ ಸಿಕ್ಖರು ತಮ್ಮ ಹೊಸ ಯಜಮಾನರಿಗೆ ನಿಷ್ಠೆಯನ್ನು ತೋರುವಭರದಲ್ಲಿ ತಮ್ಮಸ್ವದೇಶಿಯರ ವಿರುದ್ಧವೇ ಅತ್ಯಾಚಾರವೆಸಗಿದ್ದರು !
=> ಇದೇ ರೀತಿಯ ಹಲವು ಘಟನೆಗಳನ್ನು ಇಂದಿನ ಕಾಲದಲ್ಲಿಯೂ ನೋಡಬಹುದು - ತಮಿಳುನಾಡಲ್ಲಿ ನೆಲೆ ಕಂಡುಕೊಂಡಿರುವ ಜೈಲಲಿತಾ/ರಜನಿ ಕನ್ನಡಿಗರ ವಿರುದ್ಧ ಘೋಷಣೆ ಹಾಕುವುದರಲ್ಲಿ ತಮಿಳರಿಗಿಂತ ಜೋರು, ನವ-ಕ್ರಿಸ್ತುವರು ಹಿಂದು ಧರ್ಮವನ್ನು ತೆಗಳುವುದರಲ್ಲಿ ಉಳಿದವರಿಗಿಂತ ಒಂದು ಕೈ ಮೇಲು, ಹಾಗೆಯೇ ಸಿದ್ದರಾಮಯ್ಯ, ಪ್ರಕಾಶು ತಮ್ಮ ಹಿಂದಿನ ಧಣಿ ಗೌಡರನ್ನು ಹಣಿಯುವುದರಲ್ಲಿ ಮೂಲ ಕಾಂಗ್ರೆಸ್ಸಿಗರಿಗಿಂತ ಒಂದು ತೂಕ ಹೆಚ್ಚಿಗೆಯೇ !!
('ಪುಸ್ತಕದ ಹುಳು(ಕು)' ಎಂಬುದು ನಾ ಓದಿದ ಪುಸ್ತಕದ ಬಗ್ಗೆ ಬರೆಯುವ ಕಿರು ಬರಹಗಳ ಸರಣಿ.)
2 comments:
ಮನೋಹರ ಮಾಳಗಾವಕರ ಬರೆದ ಒಂದು ಕೃತಿಯನ್ನು "ಸುಂಟರಗಾಳಿ" ಎಂದು ಅನುವಾದಿಸಲಾಗಿದೆ. ಅದು ಇದೇ ಕೃತಿಯೊ ಅಥವಾ ಬೇರೆಯದೊ ತಿಳಿಯದು.ಸೀಖರ ತಪ್ಪಿನಿಂದಾಗಿ ಮೊದಲ ಸ್ವಾತಂತ್ರ್ಯಸಂಗ್ರಾಮ ಭಂಗವಾಯಿತೆನ್ನುವದು ಸರಿಯೇ; ಆದರೆ ೧೯೪೭ರ ಪೂರ್ವದ ಭಾರತದ ರಾಜಕೀಯದಲ್ಲಿ ಸಾಕಷ್ಟು ಗೊಂದಲಗಳಿದ್ದವು.ಯಾರನ್ನೂ ನಾವು ಬೈಯುವಂತಿಲ್ಲ!
ಸುನಾಥರು ತಿಳಿಸಿದ ಸುಂಟರಗಾಳಿ ಹಾಗು ರವಿ ಬೆಳಗೆರೆಯ ದಂಗೆಯ ದಿನಗಳು, ಈ ಎರಡೂ ಕೃತಿಗಳ ಮೂಲ Devils Wind. ಆದರೆ ರವಿ ಬೆಳಗೆರೆ ತಮ್ಮ ದಂಗೆಯ ದಿನಗಳು ಕೃತಿಯಲ್ಲಿ Devils Wind ಕೃತಿಯ ಹೆಸರೆ ಎತ್ತದಿರುವುದು ನಿಜಕ್ಕೂ ಸೋಜಿಗದ ವಿಷಯ! ಇದು ಒಂದು ಬಗೆಯಲ್ಲಿ ಮೂಲ ಕೃತಿಗೆ ಅಪಚಾರವೆಂದೆ ನನ್ನ ಅನಿಸಿಕೆ.
Post a Comment