Friday, August 8, 2008

royal ಸೀಮಾ

ಕುಂ. ವೀರಭದ್ರಪ್ಪ ತಾವು royal ಸೀಮೆಯಲ್ಲಿ ಪಡೆದ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕವನ್ನು ಓದುತ್ತ ಬೆಂಗಳೂರಿನ ಏಸಿ ರೂಮಿನಲ್ಲಿ ಕುಳಿತು ಕೆಲಸ ಮಾಡುವ ನಾವು ಏನು ಕಳೆದು ಕೊಂಡಿದ್ದೇವೆ ಎಂದು ತಿಳಿಯುತ್ತೆ. ಕುಂವೀಯವರ ಭಳಾರೆ ವಿಚಿತ್ರ ಶೈಲಿಯೂ ಪುಸ್ತಕವನ್ನು ಇನ್ನಷ್ಟು ಆಸಕ್ತಿಕರವಾಗಿಸುತ್ತದೆ. ಅಲ್ಲಲ್ಲಿ ಬರುವ ಕುಂವೀಯವರ ಪೂರ್ಣೋಪಮೆಗಳು ಓದಲು ಬಲು ತಮಾಷೆಯಾಗಿರುತ್ತವೆ. ಒಂದು ಉದಾಹರಣೆ ನೋಡಿ:

ಅಂಗಳದ ಅಷ್ಟ ದಿಕ್ಕುಗಳಲ್ಲಿ ಒಡಮೂಡಿರುತ್ತಿದ್ದ ಮಿಠಾಯಿ ಅಂಗಡಿಗಳ ಉಸ್ತುವಾರಿ ಸಲುವಾಗಿ ತಂಗಾಳಿ ಟೆಂಡರು ಕರೆಯುತ್ತಿದ್ದದೂ, ಅದರೆಳೆಗುಂಟ ಚತುಷ್ಪಾದಿಗಳು ಟಣಕೂ ಟಣಕೂ ಜಿಕ್ಕೋತ, ಚಾಮರ ಸದ್ರಶ ರೀತಿಯಲ್ಲಿ ಬಾಲ ಅಲ್ಲಾಡಿಸುತ್ತ ಓಡೋಡಿ ಬರುತ್ತಿದ್ದುದೂ, ನಾಯಿ, ಹಂದಿಗಳ ನಡುವೆ ವಾಗ್ ಯುದ್ಧ ನಡೆಯುತ್ತಿದೂ, ಇಬ್ಬರ ನ್ಯಾಯ ಮೂರವನೆಯವನಿಗೆ ಆಯ ಎ ಂಬಂತೆ ಕಾಕರಾಜರು ದುಬ್ಬಕ್ಕನೇ ಎಗರಿ ಇಸಿ, ಕಫವೇ ಮೊದಲಾದ ಅಷ್ಟೈಶ್ವರ್ಯವನ್ನು ಲಪಟಾಯಿಸುತ್ತಿದ್ದದೂ - ಇಂಥ ಹತ್ತು ಹಲವು ದ್ಋಶ್ಯಾವಳಿಯ ಪ್ರಭಾವಳಿಯನ್ನು ಅರುಣೋದಯ ಪೂರ್ವದ ಲಲನಾಮಣಿಯಾದ ಉಷೆ ಧರಿಸಿಕೊಂಡಿರುತ್ತಿದ್ದಳು. ಒಡಲಾಳ, ಲುಸುಮಬಾಲೆಗಳೇ ಮೊದಲಾದ ಕಋತಿಗಳು ಅವತಾರವೆತ್ತಿರುವಂಥಾ ಹಾದಿಬೀದಿಗಳಗುಂಟ ಹಂಗ ಹೋಗಿ ಹಿಂಗ ಬಂದವರು ಬ್ರಹ್ಮ ಜ್ಞಾನದಿಂದ ತತ್ತರಿಸದೇ ಇರುವುದಿಲ್ಲಾ!!”


ಇನ್ನೊಂದು ಪ್ಯಾರಾ ನೋಡಿ:

"ಎರಡು ಮೂರು ದಿನಗಳುರುಳಿದರೂ ತಮ್ಮ ಕಂದಯ್ಯ ಲ್ಯಾಟರಿನ್ನನ್ನು ಮಾಡಲಾಗದೇ ರೊಯ್ಯೋ ಎಂದು ಅಳುವುದನ್ನು ನೋಡುತ್ತಾ ತಾಯಂದಿರು ಕೈಕಟ್ಟಿ ಕೂಡುವುದಿಲ್ಲ. ಅದೆಂಗ ಇಸಿ ಮಾಡಲೊಲ್ಲೋ.. ಒಂದ್ ಕೈ ನೋಡೇ ಬುಡುತಿನಿ ಎಂದು ಘನಘೋರ ಸಪತ ಮಾಡುತ್ತಾರೆ. ನಿನ್ ಮಿಂಡನ್ಯಾಕೋ ಎಲ್ಡು ದಿನ್ದಿಂದ ಎಲ್ಡಾಕ ಮಾಡಿಲ್ಲೆಂಗೆ ಅಂತ ಮುದುಕಿಯರನ್ನು ಕೂಗಿ ಕರೆಯುತ್ತಾರೆ. ಅವರಿವರೆಲ್ಲ ಸೇರಿ ಕಂದಯ್ಯನ ಗುದದ್ವಾರದಲ್ಲಿ ಹುಣುಸೆ ಬೋಟನ್ನು ತೂರಿಸುತ್ತಾರೆ. ಪ್ರಪಂಚ ಅಂಡಾವರನವಾಗುವ ರೀತಿಯಲ್ಲಿ ಅಳಲಾರಂಭಿಸುವ ಕಂದಯ್ಯನನ್ನು ಕಿರುಬೆರಳಿಂದ ಎತ್ತೊಯ್ದು ತಮ್ಮ ಅಂಗಾಲ ಇಕ್ಕಳದ ನಡುವೆ ಕೂಡ್ರಿಸಿಕೊಂಡು ಮಾಡಲೋ ಮಾಡು ಎಂದು ಚತುರೋಪಾಯಗಳನ್ನು ಉಪಯೋಗಿಸುತ್ತಾರೆ. ಹೆತ್ತ ತಾಯಿ ಜುಳ್ಳಿ ಝಳಪಿಸಿದೊಡನೆ ...

ಕಂದಯ್ಯನ ಪ್ರಸವ ವೇದನೆ ಪರಾಕಾಷ್ಠೆ ತಲುಪಿ ಬಿಡುತ್ತದೆ. ಆ ವೇದನೆಯನ್ನೇ ಆಮಂತ್ರಣವೆಂದು ಪರಿಗಣಿಸಿ ಶುನಕಗಳು ಅಷ್ಟದಿಕ್ಕುಗಳಿಂದಾಗಮಿಸಿ ಅಚಂದ್ರಾಕ್ಋತಿಯಲ್ಲಿ ಕೂತಿ ಇಸಿಯ ಆಗಮನದ ನೋಂಪಿಯನ್ನಾಚರಿಸುತ್ತವೆ. ಕೆಲ ನಿಮಿಷಗಳಲ್ಲಿ ಪಟಾಕಿ ಸ್ಫೋಟಿಸಿದಂತೆ... ಸಿಕ್ಕವರಿಗೆ ಸಿವಲಿಂಗವೆಂಬಂತೆ, ಕ್ಷಣಾರ್ಧದಲ್ಲಿ.. ಒಳಗೆ ಹೋಗಿ ನೀರು ತರುವಷ್ಟರಲ್ಲಿ ತನ್ನ ಕಂದಯ್ಯನ ಮೇಲೆರಗಿ ಶುನಕಗಳು ತಮ್ಮ ಶತಮಾನದ ಹಸಿವು ತೀರಿಸಿಕೊಂಡಾವೆಂಬ ಭಯದಿಂದ ಆ ಮಾತ್ು ನೀರುನಿಡಿ ಹುಡುಕಿಕೊಂಡು ಒಳಗಡೆ ಹೋಗುವುದಿಲ್ಲ. ಬದಲಿಗೆ ತನ್ನ ಫೆವರೇತ್ ಶುನಕದ ಬಾಯಿ ಎದುರು ತನ್ನ ಕಂದಯ್ಯನ ತ್ಕವೆಂಬ ತಳಿಗೆ ಯನ್ನು ಒಡ್ಡಿಬಿಡುತ್ತಾಳೆ..”

ಕುಂವಿ ಬಗ್ಗೆ ನನ್ನದೊಂದು ಸಣ್ಣ ತಕರಾರು: ಅವರು ಕೆಲವೊಮ್ಮೆ ವಾಕ್ಯಗಳನ್ನು ನಡುನೀರಲ್ಲಿಯೇ ಕೈ ಬಿಡುತ್ತಾರೆ. ಅದು ನನಗೆ ಕಿರಿಕಿರಿ ಉಂಟು ಮಾಡುತ್ತದೆ. ಒಂದು ಉದಾಹರಣೆ ನೋಡಿ:

ಪುಟ ೮೯ : “ನಿಂಗಮ್ಮಜ್ಜಿ ಹಲವು ತಿಂಗಳುಗಳ ಕಾಲ ಗೊಣಗುಟ್ಟುತ್ತಲೇ ಇತ್ತು. ಮುಂದೊಂದು ದಿನ ಬಂದ ಮಲ್ಲೇಪುರಂ ವೆಂಕಟೇಶ್ ಅವರನ್ನಂತೂ... “

ಎಂದು ಅಲ್ಲಿಗೆ ಅಧ್ಯಾಯ ಮುಗಿಸಿಬಿಡುತ್ತಾರೆ. ನಿಂಗಮ್ಮಜ್ಜಿ ವೆಂಕಟೇಶರನ್ನು ನುಂಗಿ ನೀರು ಕುಡಿತಾ ? ಏನು ಕುತ್ತಿಗಿ ಹಿಚುಗಿ ಹಾಕಿತಾ ? ಎಂದು ಓದುಗ ತಲೆ ಚಚ್ಚಿಕೊಳ್ಳುತ್ತಲೆ ಇರಬೇಕಾಗುತ್ತದೆ !!



1 comment:

Chamaraj Savadi said...

ನಿಜ. ಕುಂವೀಗೆ ಕುಂವೀಯೇ ಸಾಟಿ.