ಮಡಿವಾಳದ ಟೋಟಲ್ ಮಾಲಿನಲ್ಲಿ "ಉತ್ತರಕರ್ನಾಟಕ ವಿಶೇಷ ತಿಂಡಿ/ಅಡುಗೆ"ಗಳ ಅಂಗಡಿ ಶುರುವಾಗಿದೆ. ಇದು ಚಿಕ್ಕ ಅಂಗಡಿಯಾಗಿದ್ದು, ಕಡಕ್ ರೊಟ್ಟಿ , ಚಟ್ನಿ, ವಿವಿಧ ಸಿಹಿ ತಿಂಡಿಗಳು ದೊರೆಯುತ್ತವೆ- ಬಿಸಿ ರೊಟ್ಟಿ, ಚಪಾತಿ ಇನ್ನೂ ದೊರೆಯುತ್ತಿಲ್ಲ.
ಆದರೂ, ಇದು ಜೋಳದ ರೊಟ್ಟಿ ಮ್ಯಾಕ್ ಡೋನಾಲ್ಡಿಗೆ ಸಡ್ಡು ಹೊಡೆಯುವ ದಿನಗಳಿಗೆ ಮುನ್ನುಡಿಯಾಗಲಿ ಎಂದು ಆಶಿಸೋಣ !!
1 comment:
ಜೋಳದ ರೊಟ್ಟಿ ಖಡಕ್ಕೇ ಕೊನೆಗೆ ಗೆಲ್ಲೋದು. ಜೋಳ, ನವಣೆ, ರಾಗಿ, ಸಜ್ಜೆಯಂಥ ಧಾನ್ಯಗಳು ಮನುಷ್ಯನ ಆರೋಗ್ಯಕ್ಕೆ ಉತ್ತಮ ಅಂತ ತಜ್ಞರು ಮತ್ತೊಮ್ಮೆ ಹೇಳಿದ್ದಾರೆ. ನಮ್ಮನ್ನು ಕಾಡುವ ರೋಗಗಳನ್ನು ದೂರವಿಡುವ, ಅನಾವೃಷ್ಟಿಯ ಸಮಸ್ಯೆಯನ್ನು ಎದುರಿಸುವ ಸಾಮರ್ಥ್ಯ ಇಂಥ ಧಾನ್ಯಗಳಿಗಿದೆ ಎಂಬ ವರದಿ ಖಂಡಿತ ಬಹುರಾಷ್ಟ್ರೀಯ ಕಂಪನಿಗಳ ಖಾನಾವಳಿಗಳನ್ನು ಹತೋಟಿಯಲ್ಲಿಡಲಿದೆ.
Post a Comment