ಅನ್ನಪ್ಪನ ಚಿನ್ನಾಟಗಳು
ನನಗೆ ಸಿನಿಮಾ ಬಗ್ಗೆ ಆಸಕ್ತಿ ಕಮ್ಮಿ, ನಟರ ಬಗ್ಗೆ ಅಭಿಮಾನ ಅಷ್ಟಕಷ್ಟೆ. ಇನ್ನು ಬಾಲಿವುಡ್ ಮತ್ತು ಅದರ ನಟರ ಬಗ್ಗೆ ಅಭಿಮಾನ ಎಳ್ಳಷ್ಟು ಇಲ್ಲ. ಇನ್ನು ಅವರ ಎಕ್ಸ್ಟ್ರಾ ಯಾಕ್ಟಿಂಗು, ಅವುಗಳಿಗೆ ನಮ್ಮ ಪತ್ರಿಕೆಗಳು, ಚಾನಲ್ಲುಗಳು ಕೊಡುವ ಅನಗತ್ಯ ಪ್ರಚಾರದ ಬಗ್ಗೆ ನನಗೆ ಕಿರಿಕಿರಿಯೇ ಇದೆ.
ಇಂತಹ ಬಾಲಿವುಡ್ ನಟನೊಬ್ಬ ಅದೆಲ್ಲೋ ಕುಡಿದು ಮಾಡಿದ ಗಲಾಟೆಯ ಸಂಗತಿಯನ್ನು ಕನ್ನಡದ ಸುದ್ದಿ ವಾಹಿನಿಯೊಂದು ಅದೇನೋ ಮಹತ್ವದ ಸುದ್ದಿಯಂದು ತೋರಿಸಿಯೇ ತೋರಿಸುತ್ತಿತ್ತು. ಅದನ್ನು ನೋಡುತ್ತಿದ್ದ ನನಗೋ ಕಿರಿಕಿರಿಯಾಗಿ “ಆ ದರಿದ್ರ ಸೂ.. ಮಗ ಏನೋ ಒಂದ್ ಸಲ ಕುಡುದು ಗದ್ದಲಾ ಮಾಡಿದ. ಆದ್ರ ಈ ಟೀವಿ ಚಾನಲ್ಲಿನವರಿಗೆ ಏನ್ ಬ್ಯಾರೆ ಸುದ್ದಿ ಇಲ್ಲೇನ, ಬರೇ ಆ ದರಿದ್ರ ಸೂ.. ಮಗನ ತೋರಿಸಿ ತೋರಿಸಿ ಅಂವ್ಗ ಫುಕ್ಕಟೆ ಪ್ರಚಾರ ಕೊಡ್ತಾರ “. ಎಂದು ಗೊಣಗಿಕೊಂಡೆ. ನಾನು ಗೊಣಗಿ ಕೊಂಡದ್ದು ಅಲ್ಲಿಯೇ ಆಟ ಆಡಿಕೊಂಡಿದ್ದ ನನ್ನ ಮಗ ಅನ್ನಪ್ಪನ ಕಿವಿಗೆ ಬಿದ್ದಿರ ಬೇಕು. ಅವನಿಗೆ ‘ದರಿದ್ರ ಸೂ.. ಮಗ’ ಎಂಬ ಶಬ್ದ ಭಾರೀ ಆಕರ್ಷಕವಾಗಿ ಕಂಡಿತ್ತು ಅನಿಸುತ್ತೆ. ಅವನು ನನ್ನ ಹತ್ತಿರ ಬಂದು “ಅಪ್ಪಾಜಿ ಯಾರು ದರಿದ್ರ ಸೂ.. ಮಗ ?” ಎಂದ. ನಾನು ಅವನು ಆ ಬಯ್ಗಳನ್ನು ಉಪಯೋಗಿಸಿದ್ದನ್ನು ಗಮನಿಸದೇ, ಟೀವಿಯ ಕಡೆ ತೋರಿಸಿ “ಅವನ ನೋಡ್” ಎಂದಿದ್ದೆ. ಆ ನಟ ಅನ್ನಪ್ಪನಿಗೆ ಗೊತ್ತು – ಅವನು ಅನ್ನಪ್ಪನ ಮೆಚ್ಚಿನ ಕಾರಿನ ಜಾಹಿರಾತಿನಲ್ಲಿ ಬರುತ್ತಿದ್ದ. ಹೀಗಾಗಿ ಅನ್ನಪ್ಪ “ಓ ಅವ್ನಾ?” ಎಂದು ಉದ್ಘಾರ ತೆಗೆದು ಹೊರಟು ಹೋದ.
‘ಸೂ.. ಮಗ’ ಎನ್ನುವ ಪದ ಪ್ರಯೋಗ ಧಾರವಾಡ ಕನ್ನಡಿಗರಲ್ಲಿ ಅಪರೂಪವಲ್ಲವಾದರೂ, ಸುಶಿಕ್ಷಿತರು ಮನೆಗಳಲ್ಲಿ ಉಪಯೋಗಿಸುವುದು ಕಡಿಮೆ. ನಾನೂ ಕೂಡ ನನ್ನನ್ನು ಸುಶಿಕ್ಷಿತರ ಲೆಕ್ಕದಲ್ಲಿ ಹಿಡಿದುಕೊಳ್ಳುತ್ತೇನಾದ್ದರಿಂದ ಆ ಪದದ ಉಪಯೋಗ ಮಾಡುವುದು ಕಡಿಮೆ, ಅವತ್ತು ಅದ್ಯಾವುದೋ ಮಾಯೆಯಲ್ಲಿ ಮಗನಿದ್ದಾನೆಂಬ ಖಬರಿಲ್ಲದೇ ಉಪಯೋಗಿಸಿಬಿಟ್ಟಿದ್ದೆ.
ಇದಾದ ಸ್ವಲ್ಪ ದಿನಕ್ಕೆ ನಾನೂ, ಅನ್ನಪ್ಪನೂ ಕ್ಷೌರಕ್ಕೆ ಹೋಗಿದ್ದೆವು. ಅನ್ನಪ್ಪನ ಕ್ಷೌರ ಮುಗಿದಿತ್ತು, ನನ್ನದು ಇನ್ನೂ ನಡೆದಿತ್ತು. ವೇಟಿಂಗಿನಲ್ಲಿ ಕುಳಿತ ಹಿರಿಯ ಜೀವವೊಬ್ಬರನ್ನು ಅನ್ನಪ್ಪ ಇಂಪ್ರೆಸ್ ಮಾಡಿದ್ದ. ಅವರು ಹಿಡಿದಿದ್ದ ಕನ್ನಡ ಪೇಪರಿನ ಹೆಡ್ ಲೈನುಗಳನ್ನು ಓದಿದ್ದನ್ನು ನೋಡಿ, ಅವರು ನಾಲ್ಕು ವರ್ಷಕ್ಕೆ ಅಕ್ಷರ ಕಲಿತಿದ್ದಾನಲ್ಲ ಎಂದು ಅಚ್ಚರಿಗೊಡಿದ್ದರು. ಅವರೂ ಕೂಡ ಹೆಸರು ಏನು, ಯಾವ ಸ್ಕೂಲು , ಒಂದು ರೈಮ್ ಹೇಳು ಎಂದೆಲ್ಲ ಕೇಳುತ್ತಾ ಇವನನ್ನು ಎಂಗೇಜ್ ಇಟ್ಟಿದ್ದರು. ಅವರ ಕೈಯಲ್ಲಿದ್ದ ಪೇಪರಿನಲ್ಲಿ ಅನ್ನಪ್ಪನ ಮೆಚ್ಚಿನ ಕಾರಿನ ಜಾಹೀರಾತೂ ಬಂದಿರಬೇಕೆ ? ಅನ್ನಪ್ಪ ಆ ಕಾರಿನ ಕಂಪನಿ ಯಾವುದು, ಮಾಡೆಲ್ ಯಾವುದು, ಪೆಟ್ರೋಲಾ ಅಥವಾ ಡಿಜಲ್ಲಾ ಇತ್ಯಾದಿ ವಿವರಗಳೆನೆಲ್ಲಾ ಹೇಳಿ ಹಿರಿಯರನ್ನು ದಂಗುಗೊಳಿಸುತ್ತಿರ ಬೇಕಾದರೆ, ಕ್ಷೌರಿಕ ಹೊಚ್ಚಿದ ಪಾವಡದಲ್ಲಿ ನಾನು ಎದೆ ಉಬ್ಬಿಸಿ ಕುಳಿತಿದ್ದೆ. ಆದರೆ ಅನ್ನಪ್ಪ ಅಷ್ಟಕ್ಕೆ ನಿಲ್ಲದೇ, “ಆ ಅಡ್ವೈಟೈಸ್‌ನ್ಯಾಗ ಇರೂ ಯಾಕ್ಟರೂ ನನಗ ಗೊತ್ತು, ಅವಾ ದರಿದ್ರ ಸೂ.. ಮಗ” ಎಂದು ಬಿಟ್ಟ ! ಇಷ್ಟೊತ್ತು ಆಶ್ರಮದ ಗಿಳಿಯ ರೀತಿ ಮಾತನಾಡುತ್ತಿದ್ದವ ಈಗ್ಯಾಕೆ ರಿವರ್ಸ್ ಗೇರ್ ಹಾಕಿ ಕಸಾಯಿಖಾನೆಯ ಗಿಳಿಯ ರೀತಿ ಮಾತನಾಡುತ್ತಿದ್ದಾನೆ ಎಂದು ಹಿರಿಯರು ದಿಗ್ಭ್ರಾಂತರಾದರು. ಸಾವರಿಸಿಕೊಂಡು “ಅಯ್ಯೋ ಹಾಗ್ ಅನ್‌ಬಾರ್ದು. ಗುಡ್‍ಬಾಯ್‍ಗಳು ಅಂಥಾ ಬೈಗುಳದ ಮಾತು ಉಪಯೋಗಿಸೋಲ್ಲಾ” ಎಂದು ಅನ್ನಪ್ಪನಿಗೆ ಬುದ್ಧಿ ಹೇಳತೊಡಗಿದರು.
ಅಷ್ಟರಲ್ಲಾಗಲೇ ತನ್ನ ಇಂಪ್ರೆಷನ್ ಹಾಳು ಮಾಡಿಕೊಂಡಿದ್ದ ಅನ್ನಪ್ಪ ನನ್ನ ಮರ್ಯಾದಿಯನ್ನು ಮೂರುಕಾಸಿಗೆ ಹರಾಜು ಹಾಕಲು ರೆಡಿಯಾಗಿದ್ದ ಅನಿಸುತ್ತೆ. “ನಮ್ಮ ಅಪ್ಪಾಜಿ ಕೂಡ ಅವನಿಗೆ ದರಿದ್ರ ಸೂ.. ಮಗ ಎಂದೇ ಹೇಳುತ್ತಾರೆ. ಹಾಗಾದ್ರೆ ಅಪ್ಪಾಜಿ ಗುಡ್‌ಬಾಯ್ ಅಲ್ವಾ?” ಎಂದದ್ದನ್ನು ಕೇಳಿ, ಕೂದಲಾ ಕತ್ತರಿಸುವ ಕ್ಷೌರಿಕ ಕುತ್ತಿಗೆನೂ ಕತ್ತರಿಸಬಾರದೇ ಎಂದುಕೊಳ್ಳುತ್ತಾ ಕುಳಿತೆ...

No comments:
Post a Comment