ದಿನವೂ ನಾನು ಮತ್ತು
ನನ್ನ ರೂಂಮೇಟು ನಿರ್ಮಲಕುಮಾರ ಜೊತೆಯಾಗೇ ನಮ್ಮ ಕಂಪನಿ ಬಸ್ಸಿನಲ್ಲಿ ಆಫೀಸಿಗೆ ಹೋಗುವುದು ರೂಢಿ. ಅವತ್ತು ನಿರ್ಮಲಕುಮಾರ, ಬಸ್‌ಸ್ಟಾಪಿನಲ್ಲಿ
ನನ್ನನ್ನು ಬಿಟ್ಟು, ಹೊಸ ಪ್ರೇಮ ಪಯಣದಲ್ಲಿ
ಮೊದಲ ಹೆಜ್ಜೆ ಇಡಲು ಹೊರಟಿದ್ದ ನನಗೆ ಗುಡ್‌ಲಕ್ ಹೆಬ್ಬೆರಳು ತೋರಿಸಿ, ಹೊರಟು ಹೋದ. ಬಸ್‌ಸ್ಟಾಪಿನ ಬಿರುಬಿಸಿಲಿನಲ್ಲಿ, ನನ್ನ ತಂಗಾಳಿ
ಬಂದೀತೆಂದು ಕಾಯ್ತಾ ನಿಂತಿದ್ದೆ. ಸಿಟಿಬಸ್ಸು ಬಂದು ನಿಂತಿತ್ತಾದರೂ, ಇನ್ನೂ
ಸಮಯವಿದ್ದುದರಿಂದ ಅದರ ಚಾಲಕ-ಕಂಡಕ್ಟರು ಕೆಳಗಡೆ ನಿಂತುಕೊಂಡು ಸಿಗರೇಟು ಸೇದುತ್ತಿದ್ದರು. ಹತ್ತಿರದಲ್ಲೇ ಒಂದು ಕಾಲೇಜು ಕಪಲ್
ಕಿಸಿ-ಕಿಸಿ ನಗುತ್ತಾ ಜಗವನ್ನೇ ಮರೆತಿತ್ತು. ತಲೆಮೇಲಿನ ಮರದಲ್ಲಿ ಪಾರಿವಾಳ ದಂಪತಿಗಳು, ಮೈನಾ ದಂಪತಿಗಳು
ಕುಚು-ಕುಚು ಮಾಡುತ್ತಾ ಇದ್ದವು. ಒಟ್ಟಿನಲ್ಲಿ
ಜಗತ್ತೆಲ್ಲಾ ತಮ್ಮ-ತಮ್ಮ ವ್ಯವಹಾರಗಳಲ್ಲಿ ಮುಳುಗಿರುವಾಗ ನಾನೊಬ್ಬನೇ ಕೈಯಲ್ಲಿ ಜೀವಾ ಹಿಡಿದುಕೊಂಡು ಕಾಯ್ತಾ ಇದ್ದೆ. ಆಗ ಬಂತು
ನೋಡಿ ಧೂಳವೆಂಬ ಭೃಂಗದ ಬೆನ್ನೇರಿ , ಸ್ಪೀಡು ಬ್ರೆಕ್ಕರುಗಳ ಮೇಲೆ ಕುಣಿದೂ ಕುಣಿದೂ, ನನ್ನ ಕನಸಿನ
ಕನ್ಯೆಯನ್ನು ಹೊತ್ತು ಕೆಎ ಇಪ್ಪತ್ತೈದು ಎಮ್ಮೆಚ್
ಅದ್ಯಾವುದೋ ನಂಬರಿನ ಕಾರು! ಅದರಿಂದ ಇಳಿದ ಶೈಲಾಬಾನು, ಡ್ರೈವರು ಸೀಟಿನಲ್ಲಿದ್ದ ಮಧ್ಯವಯಸ್ಕ ಆಂಟಿಗೆ, ಬಹುಶಃ
ಅವಳಮ್ಮನಿರಬೇಕು, ಟಾಟಾ ಮಾಡಿದಳು. ನಂತರ ತನ್ನ ಟ್ರೇಡ್‌ಮಾರ್ಕ್
ಶೈಲಿಯಲ್ಲಿ ಹೆಡ್‌ಫೋನನ್ನು ಕಿವಿಗೆ ಹಾಕಿಕೊಂಡು ಬಸ್ಸು ಹತ್ತಿದಳು. ಹೆಡ್ಫೋನು ಹಾಕಿಕೊಳ್ಳುವಾಗ ಕರಿಯ ಬುರ್ಖಾದಿಂದ ಹೊರಬಂದ ಬಿಳಿ ಹಸ್ತ, ಬಿಳಿ ಕಿವಿಯ ಸೌಂದರ್ಯವನ್ನು ನಾನು
ಮನಸ್ಸಿನಲ್ಲಿ ತುಂಬಿ ಕೊಳ್ಳುತ್ತಾ , ಇಷ್ಟೊತ್ತು ಕಾಯ್ತಾ ನಿಂತದ್ದು ಸಾರ್ಥಕವಾಯ್ತು ಎಂದುಕೊಂಡೆ.
ಕರಿಮೋಡದ ನಡುವೆ ಇಣುಕುವ ಚಂದ್ರನ ಚೂರುಗಳಂತೆ ಕಂಡ ಅವಳ ಹಸ್ತ, ನನ್ನ ಕಲ್ಪನೆಯನ್ನು ಕೆಣಕ ತೊಡಗಿತು. ಅವಳ ಕೈಯೇ ಇಷ್ಟು ಚಂದ ಇರಬೇಕಾದರೆ, ಅವಳೆಷ್ಟು ಚಂದ ಇರಬೇಕು ? ಅವಳ ಬುರ್ಖಾದ ಮೇಲೆ ಬಿಡಿಸಿದ ಬಿಳಿ ಹೂವಿನಂತಿರಬಹುದೇ, ಅವಳ ಮುಖ ? ತುಟಿ ಹವಳದಂತಿರಬಹುದೆ ? ಮುಂಗುರುಳು ದುಂಬಿಗೇ ಚಾಲೇಂಜ್ ಮಾಡುವಂತಿರಬಹುದೇ? ನಡು ಸಿಂಹದಂತಿರದಿದ್ದರೂ, ಅಟ್‌ಲೀಸ್ಟ್, ಸಿಂಹಿಣಿಯದಂತಾದರು ಇದ್ದೀತು.. ಅವಳಿಗೆ ಕೆಎಸ್ ನ ಅವರ ನಿನ್ನೊಲುಮೆಯಿಂದಲೇ ಬಾಳು
ಬೆಳಕಾಗಿರಲು, ಚಂದ್ರಮುಖಿ ನೀನೆನಲು ತಪ್ಪೇನೇ ? ಹೆಚ್ಚಿಗೆ ಹಿಡಿಸುತ್ತೋ ಅಥವಾ ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿಯೋ ? ಅವಳಿಗೆ ಈ ಕನ್ನಡ ಕವಿತೆಗಳು ಅರ್ಥವಾಗುತ್ತವೋ ಇಲ್ಲವೋ.. ಕೆಏ ಇಪ್ಪತ್ತೈದು ಗಾಡಿ ನಂಬರು ಇರುವುದರಿಂದ, ಮೂಲ ಧಾರವಾಡದವರೇ ಇರಬೇಕು. ಅಂದರೆ ತೀರ ಕನ್ನಡ ಕವಿತೆ ತಿಳಿಯದಷ್ಟು ಸ್ವಾದಗೇಡಿ ಇರಲಿಕ್ಕಿಲ್ಲ.. ಇತ್ಯಾದಿ ನನ್ನ
ಹಗಲುಗನಸುಗಳಲ್ಲಿ ಮುಳುಗಿ ಹೋಗಿದ್ದೆ. ಬಸ್ಸಿನ ಡ್ರೈವರು ಭೌಂ ಭೌಂ ಎಂದು ಹಾರ್ನು ಬಾರಿಸಿ, ಢರ್ ಢರ್ ಎಂದು ಒದರಿಸಿ ಬಸ್ಸನ್ನು ಶುರುಮಾಡಿದ. ಹಗಲುಗನಸುಗಳನ್ನು ಬೈದುಕೊಳ್ಳುತ್ತಾ, ಶೈಲಾಬಾನೋ ಹತ್ತಿದಾಗಲೇ ಹತ್ತಿದ್ದರೆ ಅವಳ ಹಿಂದಿನ ಸೀಟಾದರೂ ಸಿಗುತ್ತಿತ್ತು ಎಂದು ಪಶ್ಚಾತಾಪ ಪಡುತ್ತಾ ಬಸ್ಸು ಹತ್ತಿದೆ.

---------------
ಬಸ್ಸಿನಲ್ಲಿ ಕುಳಿತು, ಈ ಶೈಲಾಬಾನು ಮೋಹದಲ್ಲಿ ಹ್ಯಾಗೆ ಬಿದ್ದೆ ಅಂತ ನೆನಪು ಮಾಡಿಕೊಳ್ಳತೊಡಗಿದೆ. ಒಮ್ಮೆ ನಮ್ಮ ತಮಿಳ ರೂಂಮೇಟು ನಿರ್ಮಲಕುಮಾರ ತಮಿಳು ಸಿನೇಮಾದ ಹಿರಿಮೆಯನ್ನು ಕೊಚ್ಚಿಕೊಳ್ತಾ ಇದ್ದ. ನನಗೆ ಸಿನೆಮಾದ ಬಗ್ಗೆ ಅಂತಹ ವಿಶೇಷ ಆಸಕ್ತಿ ಇಲ್ಲ. ಅದರಲ್ಲೂ ತಮಿಳು ಸಿನೆಮಾದ ಬಗ್ಗೆ ಆಸಕ್ತಿ ಅಷ್ಟೇ ಅಲ್ಲ ಗೌರವವೂ ಕಡಿಮೆ. . ತಮಿಳು ಸಿನೆಮಾಗಳಲ್ಲಿ ಭೌತಶಾಸ್ತ್ರದ ಮೂಲ ತಥ್ಯಗಳನ್ನು ಹೇಗೆ ಕಾಲಕಸ ಮಾಡಿರುತ್ತಾರೆ ಎಂದು ಯಾರೋ ಫಾರವರ್ಡ್ ಮಾಡಿದ್ದ ಈಮೇಲಿನ ಬಗ್ಗೆ ಹೇಳಿ ನಿರ್ಮಲಕುಮಾರನ ಕಾಲೆಳೆದೆ. ಆವಾಗ ಸುಮ್ಮನಾಗಿದ್ದ ನಿರ್ಮಲಕುಮಾರ ಮರುದಿನವೇ ಸೇಡು ತೀರಿಸಿಕೊಳ್ಳುವಂತೆ 'ಬಾಂಬೆ' ಎಂಬ ತಮಿಳು ಸಿನೇಮಾದ ಸೀಡಿ ತೆಗೆದುಕೊಂಡು ಬಂದ. ‘ಉಳಿದ ಸಿನೆಮಾಗಳಂತೆ ಇದು ಬಾಲಿಶ ಸಿನೆಮಾ ಅಲ್ಲ, ಇದು ಒಂದು ಸೆನ್ಸಿಬಲ್ ಸಿನೆಮಾ, ಇದಕ್ಕೆ ಇಂತಿಂಥಾ ಪ್ರಶಸ್ತಿ ಬಂದಿವೆ’ ಎಂದು ಬಾಂಬೆ ಸಿನೆಮಾದ ತುತ್ತೂರಿ ಊದಿದ. ಸೆನ್ಸಿಬಲ್ ಸಿನೆಮಾ ಅಂದರೆ, ಆಗಷ್ಟೇ ಅಲ್ಲ, ಈಗಲೂ ನನಗೆ ಗೊತ್ತಿಲ್ಲ, ಆದರೆ ನಿರ್ಮಲಕುಮಾರನ ಒತ್ತಾಯಕ್ಕೆ ಮಣಿದು ಅದನ್ನು ನೋಡಲು ಒಪ್ಪಿಕೊಂಡೆ.
ಸಿನೇಮಾದಲ್ಲಿನ ತಮಿಳೋ ನನ್ನ ಪಾಲಿಗೆ ಗಳ್ಳಂ-ಗಂಟಿ ! ಸ್ವಲ್ಪ-ಸ್ವಲ್ಪ ತಿಳಿಯ ಬಹುದಿತ್ತಾದರೂ ನಿರ್ಮಲಕುಮಾರ ನಡು-ನಡುವೆ 'ಮಣಿರತ್ನಂ ಡೈರೆಕ್ಷನ್, ರೆಹಮಾನ್ ಮ್ಯೂಸಿಕ್ ಸೂಪರ್' ಎಂದು ಜಪ ಮಾಡುತ್ತಿದ್ದರಿಂದ ಅದೂ ಸ್ವಲ್ಪ ಕಷ್ಟವೇ ಇತ್ತು. ಅದಲ್ಲದೇ ತೆರೆಯೆ ಮೇಲೆ ಮನಿಷಾ ಕೋಯಿರಾಲಾಳ ಮುಗ್ಧ ಮುಖ ಕಂಡಾಗಲೆಲ್ಲ ನನ್ನ ಮನಸ್ಸು ನನ್ನ ಹಿಡಿತದಲ್ಲಿಲ್ಲದಿರುತ್ತಿದ್ದರಿಂದ, ಅರ್ಥವಾಗುವುದು ಕಷ್ಟವೇ ಇತ್ತು. ಅಷ್ಟಾದರೂ ಸಿನೆಮಾ ನನ್ನ ಮೇಲೆ ಬಹಳ ಪ್ರಭಾವ ಬೀರಿತು. ಸಿನೇಮಾದಲ್ಲಿ ಹಿಂದು ಹುಡುಗ, ಶೈಲಾಬಾನು ಎಂಬ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿ, ಮದುವೆಯಾಗಿ, ಬಾಂಬೆಗೆ ಕರೆದುಕೊಂಡು ಹೋಗಿ ಅಲ್ಲಿ ಮತೀಯ ದಂಗೆಗಳಿಗೆ ಸಾಕ್ಷಿಯಾಗುವ ಕತೆ ಇತ್ತು. ಸಿನೇಮಾದ ಡೈರೆಕ್ಟರು ಅದರ ಮೂಲಕ ಯಾವ ಸಂದೇಶ ಕೊಡಬೇಕೆಂದಿದ್ದರೋ, ಅದನ್ನು ನೋಡಿ ಯಾರು ಉದ್ಧಾರ ಆಗುತ್ತಾರೆ ಎಂದುಕೊಂಡಿದ್ದರೋ ದೇವರಾಣೆಯಾಗಿ ನನಗೆ ಗೊತ್ತಿಲ್ಲ, ಆದರೆ ಆ ಸಿನೆಮಾ ನನ್ನ ತಲೆಯಲ್ಲಿ ಒಂದು ಹುಳು ಬಿಟ್ಟುಬಿಟ್ಟಿತು. ಅದೆಂದರೆ 'ನಮ್ಮ ಭಾರತ ಸಶಕ್ತವಾಗಬೇಕೆಂದರೆ ಸರ್ವಧರ್ಮಗಳ ಸಮನ್ವಯವಾಗಬೇಕು ಮತ್ತು ಅದಕ್ಕೆ ಅಂತರ್ಧರ್ಮೀಯ ಮದುವೆಗಳು ಅವಶ್ಯಕ!'. ಆ ಹುಳದ ಪ್ರಭಾವದಿಂದಾಗಿ ಯಾವುದಾದರೂ ಬುರ್ಖಾ ಕಂಡಕೂಡಲೇ ನನ್ನ ಕಣ್ಣುಗಳು, ನನ್ನ ಶೈಲಾಬಾನುವನ್ನು ಹುಡುಕತೊಡಗಿದವು!
ಅದೇ ದಿನಗಳಲ್ಲಿ ಈ ಶೈಲಾಬಾನು, ಅವಳ ನಿಜ ಹೆಸರು ಗೊತ್ತಿಲ್ಲ, ನಾನು ಮಾತ್ರ ಅವಳನ್ನು ಹಾಗೇ ಕರೀತೇನಿ, ನನ್ನ ಕಣ್ಣಿಗೆ ಬಿದ್ದಳು. ದಿನವೂ ನಾನು ಮತ್ತು ನನ್ನ ರೂಂಮೇಟು ನಿರ್ಮಲಕುಮಾರ ಕಂಪನಿ ಬಸ್ಸಿಗೆ ಕಾಯುತ್ತಾ ನಿಲ್ಲುತ್ತಿದ್ದ ಬಸ್‌ಸ್ಟಾಪಿಗೆ ಅವಳನ್ನು ಕೆಏ ಇಪ್ಪತ್ತೈದು ಎಮ್ಮೆಚ್ ಅದ್ಯಾವುದೋ ನಂಬರಿನ ಕಾರು ಬಂದು ಬಿಟ್ಟು ಹೋಗುತ್ತಿತ್ತು. ಅವಳು ವ್ಯಾನಿನಿಂದ ಇಳಿದು ತನ್ನ ವಿಶಿಷ್ಟ ಸ್ಟೈಲಿನಲ್ಲಿ ಕಿವಿಗೆ ಹೆಡ್‌ಫೋನು ಹಾಕಿಕೊಂಡು ಸಿಟಿಬಸ್ಸಿಗೆ ಹತ್ತಿ ಹೋಗುತ್ತಿದ್ದಳು. ಅವಳನ್ನು ನಿತ್ಯ ನೋಡುವುದು ನನಗೊಂದು ಗೀಳಾಗಿ ಹೋಯ್ತು. ಮೊದಮೊದಲು ಅಕಸ್ಮಾತ್ತಾಗಿ ನಮ್ಮ ಕಂಪನಿಯ ಬಸ್ಸು ಮೊದಲು ಬಂದು, ಶೈಲಾಬಾನುವನ್ನು ನೋಡದೇ ಆಫೀಸಿಗೆ ಹೋದರೆ ದಿನವೆಲ್ಲಾ ಏನೋ ಮನಸ್ಸಿನಲ್ಲಿ ಕಿರಿಕಿರಿ.. ಅದಕ್ಕಾಗಿಯೇ ನಂತರ ಅಂತಹ ಸಂದರ್ಭಗಳು ಬಂದಾಗಲೆಲ್ಲ, ನಾನು ಒಂದು ಉಪಾಯ ಮಾಡತೊಡಗಿದೆ. ನಾನು ನನ್ನ ರೂಂಮೇಟಿಗೆ ಸಂಡಾಸಿಗೆ ಬಂತು ಎಂದು ಸುಳ್ಳು-ಸುಳ್ಳೇ ವಿಕ್ಟರಿ ಸೈನು ತೋರಿಸಿ, ಕಂಪನಿ ಬಸ್ಸನ್ನು ತಪ್ಪಿಸಿ, ಶೈಲಾಬಾನು ಬರುವತನಕ ಕಾಯ್ದು, ಅವಳನ್ನು ಕಣ್ಣು ತುಂಬಾ ನೋಡಿ, ರಿಕ್ಷಾ ಹಿಡಿದು ಆಫೀಸಿಗೆ ಹೋಗುತ್ತಿದ್ದೆ!
ನನ್ನ ರೂಂಮೇಟುಗಳಲ್ಲಿ ನಿರ್ಮಲಕುಮಾರ ಸ್ವಲ್ಪ ಭೋಳೆ ಪ್ರಾಣಿ. ಪ್ರತಿ ನಿತ್ಯ ನನ್ನ ಈ ಶೈಲಾಬಾನು ಪ್ರಕರಣ ಅವನೆದುರಿಗೆ ನಡೆಯುತ್ತಿತ್ತಾದರೂ, ಅವನಿಗೆ ನನ್ನ ಮನಸಿನಲ್ಲಿ ನಡೆಯುತ್ತಿದ್ದುದರ ಬಗ್ಗೆ ಸ್ವಲ್ಪವೂ ಅನುಮಾನ ಬಂದಿರಲಿಲ್ಲ. ಆದರೆ ನಮ್ಮ ಇನ್ನೊಬ್ಬ ರೂಂಮೇಟು ಇದ್ದಾನಲ್ಲ ವಿನಾಯಕ, ಅವನು ಬಹಳ ಪಾಕಡಾ ಆಸಾಮಿ. ಬಹಳ ಮಾತನಾಡುವುದಿಲ್ಲವಾದರೂ, ಮಾತನಾಡಿದ್ದೆಲ್ಲ ಹಸಿಗೋಡೆಯಲ್ಲಿ ಹರಳು ಹೊಡೆದಂತೆ. ಚಿಕ್ಕಂದಿನಿಂದಲೇ ಆ ಕಡೆ ಶೇರ್ಲ್ಯಾಕ್ ಹೋಮ್‌ನಿಂದ ಈ ಕಡೆಯ ಪತ್ತೇದಾರ ಪುರುಷೋತ್ತಮನವರೆಗೆ ಎಲ್ಲರನ್ನು ಓದಿ ಮುಗಿಸಿದ್ದಾನೆ. ಪತ್ತೇದಾರಿ ಕೆಲಸದಲ್ಲಿ ಅದ್ವೀತಿಯ. ಅವನಿಗೆ ಹ್ಯಾಗೋ ನನ್ನ ಪ್ರಕರಣದ ವಾಸನೆ ಬಡಿಯಿತು. ಮತ್ತೇನು, ನನ್ನನ್ನು ಪಾಟಿಸವಾಲಿಗೆ ಗುರಿ ಪಡಿಸಿದ..
‘ನಿನ್ನ ಅಪ್ಪಾ-ಅಮ್ಮನೋ ಸಂಪ್ರದಾಯಸ್ಥರು. ಈ ಸಾಬರ ಹುಡುಗಿಯನ್ನು ಒಪ್ತಾರಾ?’ ಎಂದು ಸವಾಲಿಸಿದ. ಅದಕ್ಕೆ ‘ನಮ್ಮ ಜಗಜ್ಯೋತಿ ಬಸವಣ್ಣ ಏನು ಹೇಳಿದಾರೆ ಗೊತ್ತಾ ? ಇವನಾರವ, ಇವನಾರವ ಎಂದೆನಿಸದೇ ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯಾ ಅಂತ ಹೇಳಿದ್ದಾರೆ. ನಮ್ಮ ಅಪ್ಪಾ-ಅವ್ವಾ ಮೊದಲು ಹಾರಾಡಿದರೂ, ಬಸವಣ್ಣನವರ ಈ ಮಾತನ್ನು ಹೇಳಿದರೆ, ತೆಪ್ಪಗಾಗ್ತಾರೆ’ ಎಂದು ಹೇಳಿ, ಬೀಸುವ ದೊಣ್ಣೆಯಿಂದ ಪಾರಾದೆ. ಆದರೆ ವಿನಾಯಕ ಮತ್ತೊಂದು ದೊಣ್ಣೆಯೊಂದಿಗೆ ತಯಾರಿದ್ದ. ‘ಹಾಗಾದರೆ ಮೂರು ವರ್ಷದಿಂದ ನಿನ್ನ ಗರ್ಲ್‌ಫ್ರೆಂಡಾಗಿರುವ ಪ್ರಿಯಾಗೆ ಕೈ ಕೊಡುವುದು ಇನ್ನು ಗ್ಯಾರಂಟಿಯಾ?’ ಎಂದು ವಾದದಲ್ಲಿ ಪ್ರತಿವಾದಿಯನ್ನು ಬಗ್ಗು ಬಡಿದ ಪೋಸಿನಲ್ಲಿ ಸ್ಮೈಲ್ ಕೊಟ್ಟ ನಮ್ಮ ಪ್ರತಿವಾದಿ ಭಯಂಕರ ವಿನಾಯಕ.
ಅವನು ಹೇಳಿದ್ದರಲ್ಲಿ ಏನೇನೂ ಸುಳ್ಳಿರಲಿಲ್ಲ. ಮೂರು ವರುಷದಿಂದ ನಾನು-ಪ್ರಿಯಾ ಪ್ರೀತಿಸುತ್ತಿದ್ದೆವು, ಆದರೆ ಅವಳ ಕಾಲೇಜಿನ ಓದು ಇನ್ನೂ ಮುಗಿದಿರಲಿಲ್ಲವಾದ್ದರಿಂದ ಅವಳಿನ್ನೂ ಊರಿನಲ್ಲಿಯೇ ಇದ್ದಳು. ನನ್ನನ್ನೇ ನಂಬಿ, ನನಗಾಗಿ ಕಾಯ್ತಾ ಇದ್ದಳು. ಆದರೆ ಬಾಂಬೆ ಸಿನೆಮಾವನ್ನೂ, ಶೈಲಾಬಾನುವನ್ನೂ ನೋಡಿದ ಮೇಲೆ ನನಗೆ ಜ್ಞಾನೋದಯವಾಯಿತು. ನಮ್ಮ ಭಾರತ ಸಶಕ್ತವಾಗ ಬೇಕೆಂದರೆ ಸರ್ವಧರ್ಮಗಳ ಸಮನ್ವಯವಾಗಬೇಕು ಮತ್ತು ಅದಕ್ಕೆ ಅಂತರ್ ಧರ್ಮೀಯ ಮದುವೆಗಳು ಅವಶ್ಯಕ. ದೇಶಕ್ಕಾಗಿ ಎಷ್ಟೆಲ್ಲಾ ತ್ಯಾಗಮಾಡಿದವರಿದ್ದಾರೆ. ನಮ್ಮಂತಹವರು ಸಶಕ್ತ ಭಾರತಕ್ಕಾಗಿ, ಆಫ್ಟರ್‌ಆಲ್ ನಮ್ಮ ಪ್ರೀತಿಯನ್ನು ತ್ಯಾಗಮಾಡಲಾರೆವೇ ? ಎಂದು ಯೋಚಿಸಿ, ಪ್ರಿಯಾಳನ್ನು ಮರೆತು, ಶೈಲಾಬಾನುವನ್ನು ಮದುವೆಯಾಗುವ ನನ್ನ ನಿರ್ಧಾರವನ್ನು ಗಟ್ಟಿ ಮಾಡಿಕೊಂಡೆ.
ನಾನು ಮೌನವಾಗಿರುವುದನ್ನು ನೋಡಿ ವಿನಾಯಕ ನನ್ನ ಬಗ್ಗೆ ಕರುಣೆಗೊಂಡು “ನೋಡು ಫ್ರೆಂಡ್, ನೀನು ಪ್ರಿಯಾನ್ನಾದರೂ ಮದುವೆಯಾಗು, ಇಲ್ಲಾ ಆ ಶೈಲಾಬಾನುವನ್ನಾದರೂ ಮದುವೆಯಾಗು. ಅದರ ಬಗ್ಗೆ ನಮ್ಮದೇನು ತಕರಾರಿಲ್ಲ. ಆದರೆ ನಿರ್ಧಾರ ಮಾಡುವುದಕ್ಕಿಂತ ಮೊದಲು ಸರಿಯಾಗಿ ವಿಚಾರ ಮಾಡು. ನನ್ನ ತರ್ಕದ ಪ್ರಕಾರ, ನೀನಿನ್ನೂ ಶೈಲಾಬಾನುವನ್ನು ಮಾತಾಡಿಸಿಯೇ ಇಲ್ಲ, ಅವಳ ಮುಖವನ್ನೂ ನೋಡಿಲ್ಲ. ಬಾಂಬೆ ಸಿನೆಮಾದ ಮನಿಷಾಳಂತೆ ಅವಳು ಚಂದ ಇದ್ದಾಳೆಂದು ಮನಸಿನಲ್ಲಿಯೇ ಮಂಡಗಿ ತಿನ್ತಾ ಇದ್ದಿ. ಮೊದಲು ನಿನ್ನ ಕಲ್ಪನಾ ಲೋಕದಿಂದ ಹೊರಗೆ ಬಾ. ಆ ಶೈಲಾಬಾನುವನ್ನು ಹೋಗಿ ಮಾತನಾಡಿಸು. ಆಕೆಯ ಮುಖ ನೋಡಿದ ಮೇಲೂ ನಿನಗವಳು ಇಷ್ಟವಾಗ್ತಾಳಾ ನೋಡು, ಅದಕ್ಕಿಂತ ಮುಖ್ಯ, ಈ ನಿನ್ನ ಫೇಸ್‌ಕಟ್ಟು ಆ ಶೈಲಾಬಾನುಗೆ ಇಷ್ಟಾನೋ ತಿಳ್ಕೋ. ಆಮೇಲೆ ಮುಂದಿನ ಮಾತು” ಎಂದು ಬುದ್ಧಿ ಹೇಳಿದ. ಅವನು ಕೊಟ್ಟ ಐಡಿಯಾದಂತೆಯೇ ನಾನು ಶೈಲಾಬಾನುವನ್ನು ಬಸ್ಸಿನಲ್ಲಿ ಫಾಲೋ ಮಾಡಿಕೊಂಡು ಹೋಗಿ, ಅವಳು ಇಳಿದಲ್ಲಿಯೇ ಇಳಿದು ಅವಳಿಗೆ ಪ್ರಪೋಸ್ ಮಾಡಲು, ಆಫೀಸಿಗೆ ಅರ್ಧದಿನ ರಜ ಹಾಕಿ ಹೊರಟೆ.
ನಾನು ನನ್ನ ಫ್ಲಾಶ್‌ಬ್ಯಾಕಿನಿಂದ ಹೊರಬರುವುದಕ್ಕೂ, ಬಸ್ಸು ಟೌನ್ ಹಾಲಿನ ಹತ್ತಿರ ಬರುವುದಕ್ಕೂ ಸಮವಾಯಿತು. ನನ್ನಿಂದ ನಾಲ್ಕು ಸೀಟು ಮುಂದೆ ಕುಳಿತಿದ್ದ ಶೈಲಾಬಾನು ಅಲ್ಲಿಯೇ ಇಳಿದಳು. ನಾನು ಗಡಬಡಿಸಿ ಇಳಿದು, ನಿಧಾನವಾಗಿ ಅವಳನ್ನು ಹಿಂಬಾಲಿಸಿದೆ. ಬಸ್‌ಸ್ಟಾಪಿನ ಜನ ಸಂದಣಿಯನ್ನು ದಾಟಿ, ಸ್ವಲ್ಪ ಮುಂದೆ ಹೋದೆ. ಶೈಲಾಬಾನುಳ ಪಕ್ಕಕ್ಕೆ ಹೋಗಿ ಸ್ವಲ್ಪ ಕೆಮ್ಮಿ “ಎಸ್ಕ್ಯೂಸ್ ಮೀ, ಮ್ಯಾಡಮ್” ಎಂದಾಗ, ಬುರ್ಖಾದ ಹಿಂದಿನ ಮುಖದಲ್ಲಿ ಏನೋ ತಳಮಳಗಳು ಗೋಚರಿಸಿದವು. ನಂತರ ಬುರ್ಖಾದಿಂದ ಹೋತಗಡ್ಡದ ಎಳೆ ಮುದುಕನ ಮುಖವೊಂದು ಹೊರಬಂತು! ನನಗಾದ ಆಘಾತದಿಂದ ನಾನು ಹೊರಬರುವ ಮುನ್ನವೇ ಆ ಎಳೇ ಮುದುಕ “ಸಾಲಗಾರರಿಂದ ತಪ್ಪಿಸಿ ಕೊಳ್ಳುದಕ ಬುರ್ಖಾ ಹಕ್ಕೊಂಡು ಓಡಾಡೋಣ ಅಂದ್ರ, ನಿಮ್ಮಂತಾ ಹಲ್ಕಟ್ ಭಾಡ್ಯಾಗೋಳು ಬೆನ್ನು ಹತ್ತತೀರಿ.. ಥತ್ ನಿಮ್ಮ..” ಎಂದು ನನ್ನ ಕಡೆ ತಿರಸ್ಕಾರದ ದೃಷ್ಟಿ ಬೀರಿ, ಮತ್ತೆ ಬುರ್ಖಾದಲ್ಲಿ ಮುಖಾಮುಚ್ಚಿಕೊಂಡು ಧಡಧಡನೇ ಹೊರಟು ಹೋದ..

No comments:
Post a Comment