Sunday, March 8, 2020

ದನಿಪಯಣ - ಕೃತಪುರ ದರ್ಶನ ೨


" ದೇಶ ಸುತ್ತು, ಇಲ್ಲವೇ ಕೋಶ ಓದು" ಎನ್ನುವುದು ದೊಡ್ಡವರ ಮಾತು. ನಾವು ಕೋಶ ಓದಿಕೊಂಡು ಈ ಸಲ ಹೊರಟಿರುವುದು ಬೆಟಗೇರಿ-ಗದುಗಿನ ಕೆಲ ಸ್ಥಳಗಳನ್ನು ಸುತ್ತಲು.. ನೀವೂ ನಂ ಜೊತೆ ಬನ್ನಿ!




ಈ ಪಯಣದಲ್ಲಿ ನಾವು ಹೋಗುವ ದಾರಿ ಇಲ್ಲಿದೆ:





ನಾವು ಮೊದಲು ಬೆಟಗೇರಿಯ ಬ್ರಹ್ಮನಿಗೆ ನಮಿಸಿ ಪಯಣ ಶುರು ಮಾಡೋಣ:




ಮುಂದೆ ಹತ್ತಿರದಲ್ಲೇ ಜಗಲಿಯ ಮೇಲೆ ಕುಳಿತ ಜಗದೊಡೆಯ ಬ್ರಹ್ಮನಿಗೆ ಹಾಯ್‌ ಹೇಳಿ ಮುಂದುವರಿಯೋಣ.

ಮುಂದೆ ಬರೋದೆ ಕಲ್ಮೇಶ್ವರ ಗುಡಿ:


ಕಲ್ಮೇಶ್ವರ ಗುಡಿಯ ದೀಪಮಾಲಿ ಕಂಬ ಮತ್ತು ಅಲಕ್ಷಿತ ಶಾಸನ:




ನಂತರ ನಾವು ಹೆಜ್ಜೆ ಹಾಕೋದು ಮಲ್ಲರಾಯನಕಟ್ಟೆಗೆ:
ಮಲ್ಲರಾಯನಕಟ್ಟೆಯಲ್ಲಿ ೧೬ ರಾಷ್ಟ್ರಕೂಟರ ಕಾಲದ ದೈತ್ಯಾಕಾರದ ವೀರಗಲ್ಲುಗಳು ಒಂದೇ ಕಡೆ ಇವೆ. ಅವುಗಳು ಕನಿಷ್ಠ ೧೧೦೦ ವರ್ಷ ಹಳೆಯವು.


ನಿಮಗೆ ಸವ್ಯ ಲಲಿತಾಸನ ಅಂದರೆ ಗೊತ್ತಾ ? ಅದೇ ನಾವು ಟೀವಿ ನೋಡುವಾಗ ಸೋಫಾದ ಮೇಲೆ ಕೂತಿರತೇವಲ್ಲ, ಅದೇ ಭಂಗಿ. ಈ ವೀರನೂ ಅದೇ ಭಂಗಿಯಲ್ಲಿ ಕೂತಿದ್ದಾನೆ ನೋಡಿ




ನಿಮಗೆ ಗೊತ್ತಲ್ಲ ?
ಸೀರೆ ನೇಯ್ಗೆಗೆ ಹೆಸರುವಾಸಿ ಬೆಟಗೇರಿ,
ಗದುಗು ಗೈಡುಗಳ ಊರು, ಮುದ್ರಣ ನಗರಿ.
ಇವುಗಳಲ್ಲಿ ಯಾವುದು ಕಮ್ಮಿ, ಯಾವುದು ಹೆಚ್ಚುರಿ ?
ಗದುಗಿನ ಬದನಿಕಾಯಿ ಬಜಿಗೆ ಬೆಟಗೇರಿಯ ಬುಳ್ಳ ಬೇಕ-ಬೇಕರೀ..



ನಮ್ಮ ಮುಂದಿನ ಗುರಿ  "ಸೋಹಂ ಎಂದೆನಿಸದೇ, ದಾಸೋಹಂ ಎಂದೆನಿಸಯ್ಯಾ" ಎಂದು ಸಾರುವ ತೋಂಟದಾರ್ಯ ಮಠ:



ಅದರ ಇತಿಹಾಸ ಮಾತಾಡಿ..



ಕನ್ನಡ ಜಗದ್ಗುರುಗಳ ಗದ್ದುಗೆ ನಮಿಸಿ, ನಮ್ಮ ಈ ಸಂಚಿಕೆ ಮುಗಿಯುತ್ತದೆ.


ಈ ಸಂಚಿಕೆಯಲ್ಲಿ ಉಪಯೋಗಿಸಿದ ಮಾಹಿತಿಯ ಮೂಲ:

ನಿಮಗೆ ಗೊತ್ತಲ್ಲ ?


No comments: