Saturday, June 25, 2022

ದನಿಪಯಣ: ವನಿತಾ ಸೇವಾ ಸಮಾಜದ ಮಾಯಿ - ಭಾಗೀರಥಿಬಾಯಿ

ಬಹಳ ದಿನಗಳ ನಂತರ ಒಂದು #ದನಿಪಯಣ ಸಂಚಿಕೆ ಮಾಡಿದ್ದೇವೆ. ಈ ಸಲ ಧಾರವಾಡದ ವನಿತಾ ಸೇವಾ ಸಮಾಜಕ್ಕೆ ಹೋಗಿ, ಅದರ ಸ್ಥಾಪಕಿ ಶ್ರೀಮತಿ ಭಾಗೀರಥಿಬಾಯಿ ಪುರಾಣಿಕರ ಸ್ಫೂರ್ತಿ ತುಂಬುವ ಜೀವನದ ಬಗ್ಗೆ ಮಾತನಾಡಿದ್ದೇವೆ. 

ನಿಮಗೆ ಗೊತ್ತಾ?
🔶 ಬಾಲವಿಧವೆಯಾಗಿದ್ದ ಶ್ರೀಮತಿ ಭಾಗೀರಥಿಬಾಯಿ ಪುರಾಣಿಕ ವನಿತಾ ಸೇವಾ ಸಮಾಜ ಸ್ಥಾಪಿಸಿ ಅದರ ಮೂಲಕ ಸಾವಿರಾರು ಹೆಣ್ಣುಮಕ್ಕಳಿಗೆ ಜೀವನ ಮಾರ್ಗ ತೋರಿಸಿದ್ದರು.
🔶 ಸಮಾಜದ ಎಲ್ಲರೂ ಶ್ರೀಮತಿ ಭಾಗೀರಥಿಬಾಯಿ ಅವರಿಗೆ ಪ್ರೀತಿ-ಗೌರವದಿಂದ 'ಮಾಯಿ' ಅಂತಲೇ ಕರೆಯುತ್ತಿದ್ದರು.
🔶 ೧೯೨೮ರಲ್ಲಿ ಮಾಯಿಯಿಂದ ಸ್ಥಾಪಿತವಾದ ವನಿತಾ ಸೇವಾ ಸಮಾಜದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹೈಸ್ಕೂಲ್‌ವರೆಗೆ, ನಂತರ ನೇಯ್ಗೆ-ಹೊಲಿಗೆ-ಕಸೂತಿ ಇತ್ಯಾದಿ ವೃತ್ತಿ ಶಿಕ್ಷಣವೂ, ಶಿಕ್ಷಕರ ತರಬೇತಿ ಸಂಸ್ಥೆಯೂ ನಡೆಯುತ್ತಿದ್ದವು.
🔶 ಹೆರಿಗೆ ಮನೆ, ನಿಸರ್ಗ ಚಿಕಿತ್ಸಾಲಯ, ಆಯುರ್ವೇದ ಔಷಧಾಲಯ ಎಲ್ಲ ಇದೇ ಜಾಗದಲ್ಲಿ ನಡೆಯುತ್ತಿದ್ದವು.
🔶 ಇಂದಿನ ಪದ್ಮಪ್ರಶಸ್ತಿಗಳಂತೆ ಆವಾಗಿನ ಆಂಗ್ಲ ಸರಕಾರ ಕೊಡುತ್ತಿದ್ದ ಕೈ‌ಸರ್-ಎ-ಹಿಂದ್ ಪ್ರಶಸ್ತಿ ಪಡೆದ ಮೊದಲ ಕನ್ನಡತಿ ಮಾಯಿ.

ಬನ್ನಿ ನಮ್ಮ #ದನಿಪಯಣ ಸಂಚಿಕೆ ಕೇಳಿ.
https://www.google.com/podcasts?feed=aHR0cHM6Ly9hbmNob3IuZm0vcy8xMTAwMTAyMC9wb2RjYXN0L3Jzcw==

ಮಾಯಿ ಸ್ಥಾಪಿಸಿದ ಸಂಸ್ಥೆಗೆ ನೀವೂ ಸಹಾಯ ಮಾಡಿ, ವಿವರಗಳು ಇಲ್ಲಿವೆ 👉 http://www.vanitasevasamajdharwad.org/appeal.html

ಈ ದನಿಪಯಣದ ಸಂಚಿಕೆಯಲ್ಲಿ ಉಲ್ಲೇಖಿಸಿದ ಫೋಟೋಗಳು, ಚಿತ್ರಗಳು ಈ ಬ್ಲಾಗ್ ಪೋಸ್ಟ್‌ನಲ್ಲಿವೆ. (ಚಿತ್ರಕೃಪೆ: ವನಿತಾ ಸೇವಾ ಸಮಾಜ)


ನಿಮಗೆ ಗೊತ್ತಿದ್ದದ್ದೇ ವಿಷಯ -ದನಿಪಯಣ ಪಾಡ್‌ಕಾಸ್ಟ್‌ ಕಾರ್ಯಕ್ರಮದ ಉದ್ದೇಶ ಶಾಲೆಯಲ್ಲಿ ಕಲಿಸದ, ಪಠ್ಯ ಪುಸ್ತಕಗಳಲ್ಲಿ ಇರದ ನಮ್ಮ ಊರು-ನಾಡುಗಳ ಕತೆ-ಇತಿಹಾಸ ತಿಳಿದುಕೊಳ್ಳೋದು ಮತ್ತು ಮಕ್ಕಳಿಗೆ ತಿಳಿಸುವುದು.
ಈ ಪಾಡ್‌ಕಾಸ್ಟ್‌ ಸಂಚಿಕೆಗಳು ರೇಡಿಯೋ-ಗಿರ್ಮಿಟ್ನಲ್ಲಿ (radiogirmit.com) ಆಗಾಗ ಪ್ರಸಾರ ಆಗುತ್ತವೆ.








No comments: