ಇಪ್ಪತ್ತು ಇಪ್ಪತ್ತು ..
ಇಪ್ಪತ್ತು ಇಪ್ಪತ್ತು ಇಪ್ಪತ್ತು
ಮಲ್ಯನ ಟೀಂ ಹಳ್ಳಕ್ಕೆ ಬಿತ್ತು !!
ಚಾರುವನ್ನೇ ನಂಬಿತ್ತು,
ದ್ರಾವಿಡನ ಕೊಂಡಿತ್ತು !
ಸೇಂದಿಕಾಸಿನ ಗಮ್ಮತ್ತು
ಮಾಡಿತ್ತು ಭಾಳ ಕಸರತ್ತು !!
ಇಪ್ಪತ್ತು ಇಪ್ಪತ್ತು ಇಪ್ಪತ್ತು
ಮಲ್ಯನ ಟೀಂ ಹಳ್ಳಕ್ಕೆ ಬಿತ್ತು !!
ಭಾಳ ಫೆವರೇಟು ಆವತ್ತು,
ಹಾಡಲ್ಲಿ ತೋರಿಸಿತ್ತು ತಾಕತ್ತು !
ಹಾಡಂತೂ ತುಂಬಾ ಸಕತ್ತು ,
ಆದ್ರೆ ಆಟದಲ್ಲಿ ನೆಗೆದು ಬಿತ್ತು !!
ಇಪ್ಪತ್ತು ಇಪ್ಪತ್ತು ಇಪ್ಪತ್ತು
ಮಲ್ಯನ ಟೀಂ ಹಳ್ಳಕ್ಕೆ ಬಿತ್ತು !!
ಚಾರುವಿನದು ಹೋಗಿದೆ ಕತ್ತು!
ದ್ರಾವಿಡನಿಗೂ ಬಂದಿದೆ ಆಪತ್ತು!
ಮಲ್ಯನ ಮುಖದಲಿ ಸುಸ್ತು ,
ಯಾಕಂತ ನಿಮಗೂ ಗೊತ್ತು !!
ಇಪ್ಪತ್ತು ಇಪ್ಪತ್ತು ಇಪ್ಪತ್ತು
ಮಲ್ಯನ ಟೀಂ ಹಳ್ಳಕ್ಕೆ ಬಿತ್ತು !!
( ದಯವಿಟ್ಟು "ಕಲ್ಯಾಣಮಂಟಪ" ಸಿನೇಮಾದ "ಒಂಭತ್ತು, ಒಂಭತ್ತು, ತೋಳ ಹಳ್ಳಕ್ಕೆ ಬಿತ್ತು" ಧಾಟಿಯಲ್ಲಿ ಹಾಡಿಕೊಳ್ಳಿ )
1 comment:
ಇಪ್ಪತ್ತು ಇಪ್ಪತ್ತು ಇಪ್ಪತ್ತು
ಕಿಂಗ್ ಫಿಶರ್ ಸೋತಿತ್ತು.
’ನಂಗಾ ನಾಚ್’ ಓಕೇ!
ರಾಹುಲ್ ದ್ರಾವಿಡ್ ಯಾಕೆ?
Post a Comment