Saturday, May 17, 2008

ಇಪ್ಪತ್ತು ಇಪ್ಪತ್ತು ..

ಇಪ್ಪತ್ತು ಇಪ್ಪತ್ತು ಇಪ್ಪತ್ತು
ಮಲ್ಯನ ಟೀಂ ಹಳ್ಳಕ್ಕೆ ಬಿತ್ತು
!!


ಚಾರುವನ್ನೇ ನಂಬಿತ್ತು,
ದ್ರಾವಿಡನ ಕೊಂಡಿತ್ತು
!
ಸೇಂದಿಕಾಸಿನ ಗಮ್ಮತ್ತು
ಮಾಡಿತ್ತು ಭಾಳ ಕಸರತ್ತು
!!


ಇಪ್ಪತ್ತು ಇಪ್ಪತ್ತು ಇಪ್ಪತ್ತು
ಮಲ್ಯನ ಟೀಂ ಹಳ್ಳಕ್ಕೆ ಬಿತ್ತು
!!


ಭಾಳ ಫೆವರೇಟು ಆವತ್ತು,
ಹಾಡಲ್ಲಿ ತೋರಿಸಿತ್ತು ತಾಕತ್ತು
!
ಹಾಡಂತೂ ತುಂಬಾ ಸಕತ್ತು
,
ಆದ್ರೆ ಆಟದಲ್ಲಿ ನೆಗೆದು ಬಿತ್ತು
!!


ಇಪ್ಪತ್ತು ಇಪ್ಪತ್ತು ಇಪ್ಪತ್ತು
ಮಲ್ಯನ ಟೀಂ ಹಳ್ಳಕ್ಕೆ ಬಿತ್ತು
!!


ಚಾರುವಿನದು ಹೋಗಿದೆ ಕತ್ತು!
ದ್ರಾವಿಡನಿಗೂ ಬಂದಿದೆ ಆಪತ್ತು
!
ಮಲ್ಯನ ಮುಖದಲಿ ಸುಸ್ತು
,
ಯಾಕಂತ ನಿಮಗೂ ಗೊತ್ತು
!!


ಇಪ್ಪತ್ತು ಇಪ್ಪತ್ತು ಇಪ್ಪತ್ತು
ಮಲ್ಯನ ಟೀಂ ಹಳ್ಳಕ್ಕೆ ಬಿತ್ತು
!!


( ದಯವಿಟ್ಟು "ಕಲ್ಯಾಣಮಂಟಪ" ಸಿನೇಮಾದ "ಒಂಭತ್ತು, ಒಂಭತ್ತು, ತೋಳ ಹಳ್ಳಕ್ಕೆ ಬಿತ್ತು" ಧಾಟಿಯಲ್ಲಿ ಹಾಡಿಕೊಳ್ಳಿ )


1 comment:

sunaath said...

ಇಪ್ಪತ್ತು ಇಪ್ಪತ್ತು ಇಪ್ಪತ್ತು
ಕಿಂಗ್ ಫಿಶರ್ ಸೋತಿತ್ತು.
’ನಂಗಾ ನಾಚ್’ ಓಕೇ!
ರಾಹುಲ್ ದ್ರಾವಿಡ್ ಯಾಕೆ?