Saturday, January 24, 2009

ಕಾಮಾಲೆ ಕವಿಗಳು.

ಚಿತ್ರಗೀತೆಗಳನ್ನು ಬರೆಯುವ ಬಹಳಷ್ಟು ಕವಿಗಳು ಕಾಮಾಲೆ ರೋಗದವರಂಬುದು ನನ್ನ ಅನಿಸಿಕೆ. ಕಾಮಾಲೆ ಕಣ್ಣಿಗೆ ಲೋಕವೆಲ್ಲ ಹಳದಿ ಅಂತಾರಲ್ಲಾ ಹಾಗೆ, ಇವರಿಗೆ ಎಲ್ಲಾ ಹಳದಿಯಾಗೆ ಕಾಣುತ್ತೆ ಅನಿಸುತ್ತೆ.

ಯಾರಾದರು ಮನೆಗೆ ವಿಅರ್ಎಲ್ ಬಸ್ಸಿನಂತೆ ಹಳದಿ ಬಣ್ಣ ಹಚ್ಚುತ್ತಾರೆಯೇ ? ಆದರೆ ಈ ಕಾಮಾಲೆ ಕವಿಗಳು ಜೋಗಿ ಸಿನೆಮಾಕ್ಕೆ ಬರದ ಹಾಡು ನೀವು ಕೇಳಿರಬೇಕಲ್ಲಾ - “yellow ಜೋಗಪ್ಪ ನಿನ್ನ ಅರಮನಿ , yellow ಜೋಗಪ್ಪ ನಿನ್ನ ತಳಮನಿ ?”. ಹೇಳಿ ಕೇಳಿ ಅದು ಜೋಗಪ್ಪನ ಮನಿ, ಭಂಡಾರದ ಧೂಳು ಬಿದ್ದೂ ಬಿದ್ದು , ಹಳದಿಯಾಗಿದೆ ಅಂದುಕೊಂಡು ಸುಮ್ಮನಿರೋಣ. ಆದರೆ ಇನ್ನೊಂದು ಗೀತೆ ಇದೆ ನೋಡಿ “ಮಾಮರ yellow, ಕೋಗಿಲೆ yellow, any ಸ್ನೇಹ , ಸಂಬಂಧ ? ” ಅಂತ. ಮಾವಿನ ಮರದ ಹಸಿರೆಲೆಗಳು ಹಣ್ಣಾಗಿ ಹಳದಿಯಾಗಿ ಕಾಣಬಹುದು, ಆದರೆ ಕೋಗಿಲೆ ಎಂದಾದರೂ ಹಳದಿಯಾಗಿರಲು ಸಾಧ್ಯವೇ ? ಕೋಗಿಲೆ ಅಷ್ಟೇ ಅಲ್ಲ, ನವಿಲು ಕೂಡ ಇನ್ನೊಂದು ಹಾಡಿನಲ್ಲಿ ಇವರಿಗೆ ಹಳದಿಯಾಗೆ ಕಾಣಿಸುತ್ತೆ - “ಗಿರಿನವಿಲು yellow, ಕರಿಮುಗಿಲು yellow, ಪ್ರೇಮವೆನಲು..” . ಸಂಗೀತದಂತಹ ಕಲೆ ಕೂಡ ಇವರಿಗೆ ಹಳದಿ ಬಣ್ಣದ್ದಾಗಿಯೇ ಕಾಣುತ್ತದೆ. ಕನಸುಗಾರ ಸಿನೆಮಾದ ಹಾಡನ್ನು ನೋಡಿ - “yellow, ಅದು yellow ಕಿವಿತುಂಬೋ ರಾಗ”.

ನಿಮ್ಮಗಿನ್ನೂ ಇವರ ರೋಗದ ಬಗ್ಗೆ ಸಂಶಯ ಉಳಿದಿದ್ದರೆ “ಗಗನವು yellow, ಭೂಮಿಯು yellow, ಒಂದೂ ಅರಿಯೇ ನಾ” ಅಂತಿರುವ ಗೆಜ್ಜೆಪೂಜೆ ಸಿನೆಮಾದ ಹಾಡನ್ನು ನೆನಪಿಸಿಕೊಳ್ಳಿ. ಈ ಕವಿಗಳಿಗೆ ಅಕಾಶ-ಭೂಮಿ ಎಲ್ಲಾ ಹಳದಿಯಾಗೆ ಕಾಣಿಸುತ್ತೆ ಅಂದಮೇಲೆ ಇವರಿಗೆ ಕಾಮಾಲೆ ಇದೆ ಅಂತೇ ಆಯ್ತು, ಅಲ್ವೇ ?

-PUNಡಿತ

1 comment:

Anonymous said...

"Yello(w) Yello(w) nodali.. Ninnanne kaanuve"

:)