ಹಿಂದೆ ಒಮ್ಮೆ ಟಿವಿಯಲ್ಲಿ ಲೋಕಾಯುಕ್ತರು ಯಾವುದೋ ಕಂದಾಯ ಇಲಾಖೆಯ ಅಧಿಕಾರಿಯ ಮನೆಯ ಮೇಲೆ ದಾಳಿ ಮಾಡಿದ್ದನ್ನು ತೋರಿಸುತ್ತಿದ್ದರು. ಆ ಅಧಿಕಾರಿಯು ಅಕ್ರಮವಾಗಿ ಎಷ್ಟೊಂದು ಕಿಲೋ ಬೆಳ್ಳಿ ಬಂಗಾರ, ಎಷ್ಟು ಸೈಟು, ತೋಟ-ಪಟ್ಟಿ ಸಂಪಾದಿಸಿದ್ದ ಎಂಬುದನ್ನು ವರದಿಗಾರ ಹೇಳುತ್ತಿದ್ದ. ಆ ಅಧಿಕಾರಿಯು ಕಟ್ಟಿಕೊಂಡಿದ್ದ ಅಂಥ ಅಲೀಶಾನ್ ಬಂಗಲೆಯನ್ನು ತೋರಿಸುತ್ತ, ಅದರ ಈಗಿನ ಮಾರುಕಟ್ಟೆ ಬೆಲೆ ಎಷ್ಟು ಎಂದು ವಿವರಿಸುತ್ತಿದ್ದ. ಅಧಿಕಾರಿಯ ಅಕ್ರಮ ಗಳಿಕೆ ನನಗೆ ಆಶ್ಚರ್ಯ ತರಿಸಲಿಲ್ಲ. ನಮ್ಮ ಸರಕಾರಿ ಅಧಿಕಾರಿಗಳು ‘ಸರಕಾರದ ಕೆಲಸ-ದೇವರ ಕೆಲಸ’ ಎಂದುಕೊಂಡು ದುಡಿದಿದ್ದರೆ, ನಮ್ಮದ್ಯಾವಗಲೋ ರಾಮರಾಜ್ಯವಾಗ ಬೇಕಿತ್ತು. ಅದು ಬಿಡಿ. ನನ್ನ ಕಣ್ಸೆಳೆದದ್ದು ಆ ಅಧಿಕಾರಿ ತನ್ನ ಅರಮನೆಯಂತಹ ಮನೆಗೆ ಇಟ್ಟ ಹೆಸರು ‘ಸುಮ್ಮನೆ’. ಇಂತಹ ಹೆಸರಿಟ್ಟವನು ವಿಕ್ಷಿಪ್ತನಾ ? ಅಥವಾ ‘ಇಲ್ಲಿರುವುದು ಸುಮ್ಮನೆ. ಅಲ್ಲಿರುವುದು ನಮ್ಮನೆ’ ಎಂದು ಹೇಳಿಕೊಳ್ಳಬಯಸುವ ದಾರ್ಶನಿಕನಾ ? ಇಲ್ಲವೇ ‘ಸುಮ್ಮನೆ ಅಂತ ಈ ಮನೆ ಕಟ್ಟೀದಿನಿ. ನಾನು ಮನಸು ಮಾಡಿದ್ರೆ ರಾಷ್ಟ್ರಪತಿ ಭವನಾನೆ ಕಟ್ತಿದ್ದೆ’ ಎಂದು ಹೇಳುವ ಮಹಾಗರ್ವಿಯಾ? ನನಗೆ ಬಗೆಹರಿದಿರಲಿಲ್ಲ.
ಇದಾಗಿ ಎಷ್ಟೋ ದಿನಗಳಾದರೂ ‘ಸುಮ್ಮನೆ’ ಎಂಬ ಹೆಸರು ಸುಮ್ಮನಿರದೇ ನನ್ನನ್ನು ಕೊರೀತಾ ಇತ್ತು. ಮನೆಗೆ ಹೀಗೆ ಏನಾದರೂ ಹೆಸರು ಇಡಬಹುದಾ? ಹೆಸರು ಇಡಲೇ ಬೇಕಾ ? ನಗರಸಭೆಯವರು ಕೊಟ್ಟ ಬಾಗಿಲ ಸಂಖ್ಯೆ ಸಾಕಾಗಲ್ವ ? ಇಷ್ಟಾಗಿ ಮನೆಗೆ ಹೆಸರಿಡುವ ಸಂಪ್ರದಾಯ ಯಾವಾಗಿನಿಂದ ಶುರುವಾಯ್ತು ? ವೇದಕಾಲದಲ್ಲಿ ಹೀಗೆ ಹೆಸರಿಡ್ತಾ ಇದ್ರಾ ? ಪ್ರಾಚೀನ ಇಜಿಪ್ಷಿಯನ್ನರು, ಗ್ರೀಕರು, ರೋಮನ್ನರು ಮನೆಗೆ ಹೆಸರಿಡ್ತಾ ಇದ್ರಾ ? ಆದಿಮಾನವ ತನ್ನ ಗುಹೆಗೆ ಹೆಸರಿಡ್ತಾ ಇದ್ನಾ ? ಏನಪ್ಪ ಇವನು ಇದ್ಯಾವುದೋ ಸಮಾಜೋ-ಐತಿಹಾಸಿಕ ಸಂಗತಿಗಳನ್ನು ಇಲ್ಲಿ ಚರ್ಚಿಸುತ್ತಿದ್ದಾನೆ ಅಂತ ನೀವೆಂದುಕೊಂಡಿದ್ರೆ, ಅದರಿಂದ ಉದ್ವೇಗಗೊಂಡಿದ್ದರೆ, ರಿಲಾಕ್ಸ್!! ಪಿಎಚ್ಡಿ ಮಾಡಿಕೊಳ್ಳುವವರು ಯಾರಾದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿ, ನಾನು ಈ ಲೇಖನದಲ್ಲಿ ಮನೆಬರಹ - ಅಂದ್ರೆ ಮನೆಯ ಹಣೆಬರಹ , ಅಂದ್ರೆ ಮನೆಯ ಹೆಸರು - ಅದರ ಬಗ್ಗೆ ಸ್ವಲ್ಪ ಲಘು ಚರ್ಚೆ ಮಾಡ್ತಾಇದ್ದೇನೆ.
ನಾನು ಸಣ್ಣವನಿದ್ದಾಗ, ಯಾವುದೇ ಮನೆಯನ್ನು ಗುರುತಿಸ ಬೇಕೆಂದರೆ ಅದಕ್ಕೆ ಹೆಸರು ಬೇಕಾಗುತ್ತಿರಲಿಲ್ಲ- ಬರೀ ಅದರ ಲಕ್ಷಣಗಳಿಂದಲೇ ಗುರುತಿಸುತ್ತಿದ್ದೆವು. ಬಂಕದ ಮನೆ, ಅಟ್ಟದ ಮನೆ, ಕಟ್ಟಿಯ ಮನೆ, ಮೆಟ್ಟಿಲ ಮನೆ, ಹಂಚಿನ ಮನೆ ಹೀಗೆ. ಒಂದೊಂದು ಸಲ ಆ ಮನೆಯಲ್ಲಿರುವವರಿಂದ ಮನೆಯನ್ನು ಗುರುತಿಸುತ್ತಿದ್ದೆವು - ಉದಾಹರಣೆಗೆ ಮೀಸೆಗೌಡರ ಮನೆ, ಹಾಲಿನ ಶಾಂತವ್ವನ ಮನೆ, ಸೈಕಲ್ ಅಂಗಡಿ ಮೈಬುಸಾಬನ ಮನೆ ಹೀಗೆ. ಬಹುಶಃ ನಾನು ಕನ್ನಡಶಾಲೆಯಲ್ಲಿ ಕಲಿಯುತ್ತಿರುವ ಸಮಯದಲ್ಲಿ ನಮ್ಮೂರಿಗೂ ಸಿಮೆಂಟಿನ ಕಟ್ಟಡಗಳು ಬಂದವು. ಆಗ ಮನೆ ಕಟ್ಟಿದವರೆಲ್ಲ ತಮ್ಮ ಮನೆಯ ಮೇಲೆ ಸಿಮೆಂಟಿನಿಂದ ತಮ್ಮ ಇಷ್ಟದೇವತಾ ಹೆಸರುಗಳನ್ನೂ ಮತ್ತು ಕಟ್ಟಿಸಿದ ಇಸ್ವಿಯನ್ನು ಬರೆಸುತ್ತಿದ್ದರು. ‘ಶ್ರೀ ಗೊಡಚಿ ವೀರಭದ್ರೇಶ್ವರ ಪ್ರಸನ್ನ - ೧೯೮೩’, ‘ಎಡೆಯೂರು ಸಿದ್ದಲಿಂಗೇಶ್ವರ ಕೃಪಾ ೧೯೮೫’ ಹೀಗೆ ಬರೆದಿರುತ್ತಿದ್ದರು. ಹೋಳಿ ಹುಣ್ಣಿಮೆಯ ಸಮಯದಲ್ಲಿ ನಾವು ಹುಡುಗರು ‘ಎಚ್ಚರೇಶ್ವರ’ ಮನೆಮುಂದ ಎರಡು ಹೊರಿ ಕಟಗಿ ಹಾಕ್ಸ್ಯಾರ.. ‘ಮಾಲತೇಶ’ ಮನಿಯವರು ಹಿತ್ತಲದಾಗ ಕುಳ್ಳು ಹಚ್ಚ್ಯಾರ.. ಎಂದು ಇನ್ಫಾರ್ಮೇಶನ್ ಕೂಡಿಸಿ ಕಾಮದಹನಕ್ಕಾಗಿ ಉರುವಲನ್ನು ಎಲ್ಲೆಲ್ಲಿಂದ ಕದ್ದು ತರಬೇಕೆಂದು ಪ್ಲಾನು ಮಾಡುತ್ತಿದ್ದೆವು. ಬಹುಶಃ ಆವಾಗಲೇ ನನಗೆ ಮೊದಲ ಬಾರಿಗೆ ಮನೆಗಳನ್ನು ಅಕ್ಷರಗಳಿಂದ ಗುರುತಿಸಬಹುದೆಂದು ತಿಳಿದಿದ್ದು.
ನಾನು ಕಾಲೇಜು ಓದಲು ಧಾರವಾಡಕ್ಕೆ ಬಂದಾಗ, ಅಲ್ಲಿಯ ಬಹುತೇಕ ಮನೆಗಳಿಗೆ ಅದಾಗಲೇ ಹೆಸರುಗಳು ಬಂದಿದ್ದವು. ಆ ಹೆಸರುಗಳನ್ನು ಇಡುವುದರಲ್ಲಿ ವಿವಿಧ ನಿರ್ದಿಷ್ಟ ಕ್ರಮಗಳನ್ನು ಗುರುತಿಸಬಹುದಿತ್ತು. ಸ್ವಲ್ಪ ದೈವಭಕ್ತಿ ಇದ್ದವರು ‘ಬನಶಂಕರಿ ನಿಲಯ’, ‘ಮಲ್ಹಾರ ಕೃಪಾ’,’ದುರ್ಗಾ ನಿಲಯ’, ‘ಲಕ್ಷ್ಮಿ ನಿವಾಸ’ ಎಂದು ಇಟ್ಟಿರುತಿದ್ದರು. ದೇವರ ಮೇಲಿನ ಭಕ್ತಿಗಿಂತ ಮಕ್ಕಳ, ಹೆಂಡತಿಯ ಮೇಲೆ ಪ್ರೀತಿಹೊಂದಿರುವವರು ಅವರ ಹೆಸರುಗಳನ್ನೇ - ಸಂತೋಷ, ಸಂಭ್ರಮ, ಪ್ರತಿಮಾ, ಕುಸುಮಾ- ಇತ್ಯಾದಿಗಳನ್ನೇ ಮನೆಗೂ ಇಟ್ಟಿರುತ್ತಿದ್ದರು. ಇರುವಷ್ಟು ದಿನ ಅತ್ತೆ-ಮಾವಂದಿರನ್ನು ನಿಗ್ಗರಿಸಿ-ನೀರುಹೊಯ್ಸಿದವರು, ಅತ್ತೆ-ಮಾವ ಓಂ ನಮಃ ಶಿವಾಯಃ ಅಂದಮೇಲೆ ಅವರ ಹೆಸರುಗಳನ್ನೇ ತಮ್ಮ ಮನೆಗಳಿಗೆ ಇಟ್ಟು ಕೃತಾರ್ಥರಾಗಿರುತ್ತಿದ್ದರು. ಕಲಾವಿದರು, ಸಾಹಿತಿಗಳು ತಮಗೆ ಹೆಸರು-ದುಡ್ಡು ತಂದುಕೊಟ್ಟ ಕೃತಿಗಳ ಹೆಸರನ್ನೇ - ಹಸಿರು ಹಾವು, ಹಳದಿ ಚೇಳು, ಕಾಳಿಂಗ ಸರ್ಪ, ಜ್ವಾಲಾಮುಖಿ ಇತ್ಯಾದಿ- ತಮ್ಮ ಮನೆಗಳಿಗೂ ಇಟ್ಟಿರುತ್ತಿದ್ದರು. ಧಾರವಾಡದಲ್ಲಿ ಕವಿಗಳ ಸಂಖ್ಯೆ ಗಣನೀಯ. ಆದುದರಿಂದಲೇ ಅಲ್ಲಲ್ಲಿ ಬೆಳದಿಂಗಳು, ಚಂದ್ರಿಕೆ, ಚಕೋರ, ತಂಗಾಳಿ, ಮಂದಾನಿಲ ಇತ್ಯಾದಿ ** ಆದ ಮನೆ ಹೆಸರುಗಳು ಕಾಣಿಸ್ತಿದ್ದವು. ನಮ್ಮ ಪ್ರಾಧ್ಯಾಪಕರೊಬ್ಬರ ಮನೆಯ ಹೆಸರು ಸ್ವಲ್ಪ ಭಿನ್ನವಾಗಿತ್ತು. ಅವರು ಬಹಳ ಓದಿಕೊಂಡವರು, ಬುದ್ಧಿವಂತರು. ಚೆನ್ನಾಗಿ ಪಾಠವನ್ನೂ ಮಾಡುತ್ತಿದ್ದರು, ಖಾಸಗಿ ಟ್ಯೂಶನಲ್ಲಿ!! ಇಂಜನೀಯರಿಂಗ್ ಡ್ರಾಯಿಂಗ್(ED) ಮತ್ತು ಇಂಜನೀಯರಿಂಗ್ ಮೆಕ್ಯಾನಿಕ್ಸ್ (EM) ವಿಷಯಗಳಿಗೆ ಇಂಜನೀಯರಿಂಗ್, ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಮನೆಪಾಠ ಹೇಳಿ, ಆ ದುಡ್ಡಿನಿಂದ ಭವ್ಯವಾದ ಮನೆಕಟ್ಟಿದ್ದರು. ತಮಗೆ ಅಷ್ಟೈಶ್ವರ್ಯ ನೀಡಿದ ಆ ಎರಡು ವಿಷಯಗಳಿಗೆ ಕೃತಜ್ಞತೆ ಎಂಬಂತೆ ಮನೆಗೆ ಎಡೆಮ್ (EDEM) ಎಂದು ಹೆಸರಿಟ್ಟಿದ್ದರು. ಧಾರವಾಡದಲ್ಲಿದ್ದ ಇನ್ನೊಂದು ಮನೆಹೆಸರೂ ನನಗೆ ಬಹಳ ದಿನಗಳವರೆಗೆ ಸೊಜಿಗವನ್ನುಂಟು ಮಾಡಿತ್ತು. ‘ಗರಗಸ’ ಎನ್ನುವ ಆ ಮನೆಯ ಮುಂದಿನಿಂದ ನಾನು ಪ್ರತಿದಿನ ಹೋಗುವಾಗ-ಬರುವಾಗ ‘ಮನೆಗೆ ಹೀಗೆಲ್ಲ ಹೆಸರಿಡಬಹುದಾ ? ಇಂಥ ಹೆಸರಿಡುವುದೇ ಒಂದು ಫಾಶನ್ನಾದರೆ ಜನ ನಾಳೆ ತಮ್ಮ ಮನೆಗಳಿಗೆ ಸುತ್ತಿಗೆ, ಸ್ಕ್ರೂಡ್ರೈವರು, ಪಕ್ಕಡು, ಸಲಿಕೆ, ಗುದ್ದಲಿ ಎಂದು ಹೆಸರಿಡಬಹುದಲ್ಲವೇ ?’ ಎಂದು ವಿಸ್ಮಯಿಸುತ್ತಿದ್ದೆ. ಒಂದಿನ ‘ಗರಗಸ’ದ ಮುಂದೆ ಸೈಕಲ್ಲಿನಲ್ಲಿ ಹೋಗುತ್ತಿದ್ದಾಗ, ಮನೆಯ ಮಾಲಿಕರು ಗೇಟಿನ ಹತ್ತಿರ ನಿಂತಿರುವುದು ಕಾಣಿಸಿತು. ಮನೆಗೆ ಹಾಗೇಕೆ ಹೆಸರಿಟ್ಟಿದ್ದೇರೆಂದು ಕೇಳಿದೆ. ಒಳ್ಳೆ ಪೈಲ್ವಾನರಂತಿದ್ದ ಅವರು ‘ನೋಡು ತಮ್ಮ್ಯಾ, ನನ್ನ ಹೆಸರು ಗಣಪತಸಾ, ಹೆಣತಿದು ರಜನಿ, ಮಗಂದು ಗಜಾನನ ಮತ್ತ* ಮಗಳದ್ದು ಸರಿತಾ. ಎಲ್ಲಾರ ಹೆಸರಿನ ಮೊದ್ಲೆ ಅಕ್ಷರದಲೇ ಮನಿಹೆಸರಿಟ್ಟೇವಿ. ನಿನ್ನದೇನಾರ ತಕರಾರ ಐತೇನು ?’ ಎಂದು ಉಟ್ಟ ಲುಂಗಿಯನ್ನು ಮೇಲೆ ಕಟ್ಟುತ್ತ ನನ್ನೆಡೆಗೆ ಬರತೊಡಗಿದ್ದರು. ಯಾಕೆ ಬೇಕು ಗರಗಸದ ಸಹವಾಸ ಎಂದುಕೊಂಡು ಸೈಕಲ್ಲಿನ ಮೇಲೆ ಹಾರಿ ಕುಳಿತು ನಾನು ಓಟಕಿತ್ತಿದ್ದೆ.
ಮನೆಮಾಲಿಕರು ತಮ್ಮಮನೆಗೆ ಏನೇ ಹೆಸರಿಟ್ಟರೂ, ಆ ಹೆಸರನ್ನು ಎಷ್ಟೇ ದೊಡ್ಡದಾಗಿ, ಕನ್ನಡ-ಇಂಗ್ಲೀಷ್ ಎರಡರಲ್ಲಿಯೂ ಬರೆದು ಹಾಕಿದರೂ ಜನ ಮನೆಗಳನ್ನು ತಮ್ಮದೇ ರೀತಿಯಿಂದ ಗುರುತಿಸತಿದ್ದರು. ಬಹಳಷ್ಟು ಸಲ ಮನೆ ಮಾಲಿಕರ ಹೆಸರು-ವೃತ್ತಿಗಳಿಂದಲೇ ಗುರುತಿಸುತ್ತಿದ್ದರು. ‘ಕಲಘಟಗಿ ಕಂಟ್ರಾಕ್ಟರರ ಮನಿ’, ‘ರೋಣದ ವಕೀಲರ ಮನಿ’, ‘ಜೋಷಿ ಡಾಕ್ಟರ್ ಮನಿ’, ‘ದೇಶಪಾಂಡೆ ಮಾಸ್ತರ ಮನಿ’ ಹೀಗೆ. ನನ್ನಂತಹ ಪಡ್ಡೆಗಳು ಮಾತ್ರ ಇತರ ಆಸಕ್ತಿಕರ ವಿಷಯಗಳನ್ನು ಪಾಯಿಂಟ್ ಆಫ ರೆಫರೆನ್ಸ್ ಮಾಡಿಕೊಂಡಿರುತ್ತಿದ್ದೆವು. ‘ಟಿವಿಎಸ್ ಚಂಪಿ ಮನಿ’, ‘ ಕನೈಟಿಕ್ ಕಮಲಿ ಮನಿ’, ‘ಲೂನಾ ಲಲತಿ ಮನಿ’ ಹೀಗೆ.
ಧಾರವಾಡವನ್ನು ಬಿಟ್ಟು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ಈಗ ಬಹಳ ದಿನಗಳೇ ಆಗಿವೆ. ಇಂದಿರಾನಗರ - ಕೋರಮಂಗಲದ ರಸ್ತೆಗಳು, ಓಣಿಗಳೂ ಅಂಗೈಯೊಳಗಿನ ಗೆರೆಗಳಷ್ಟೇ ಪರಿಚಯವಾದರೂ, ಇಲ್ಲಿಯ ಮನೆಗಳ ಹೆಸರುಗಳು ಇನ್ನೂ ನನಗೆ ಆತ್ಮೀಯವಾಗಿಲ್ಲ. ಇಲ್ಲಿ ‘ಲಾ-ಡೆ-ಪರ್ಲೆ’, ‘ಮಂಜಿಲ್-ಎ-ಆಸಮಾ’, ‘ಬೆಹನೋಯಿಯಾ ಆಶಿಯಾನಾ’ ಹೀಗೆ ಏನೇನೋ ಹೆಸರಿರುವ ಮನೆಗಳಿವೆ. ಆ ಹೆಸರುಗಳು ಯಾವ ಭಾಷೆಯವೋ ಏನೋ ? ಆಯಾ ಭಾಷೆಗಳಲ್ಲಿ ಒಳ್ಳೆಯ ಅರ್ಥವಿದೆಯೋ ಅಥವಾ ಅವು ಬೈಗುಳಗಳೋ ದೇವರಿಗೇ ಗೊತ್ತು. ಇದು ಅರ್ಥಗೊತ್ತಾಗದಂತಹ ಹೆಸರುಗಳ ಕತೆಯಾದರೆ, ಅರ್ಥಗೊತ್ತಾಗುವಂತಹ ಹೆಸರುಗಳ ಗೋಳು ಇನ್ನೊಂದು. ‘ಸುಖವಿಲ್ಲಾ’, ‘ಧನವಿಲ್ಲಾ’, ‘ಜ್ಞಾನವಿಲ್ಲಾ’ ಎಂದೆಲ್ಲಾ ಮನೆಗೆ ಹೆಸರಿಟ್ಟುಕೊಂಡವರ ಮಾನಸಿಕ ಸ್ಥಿತಿ ಬಗ್ಗೆ ನನಗೆ ಮರುಕ ಬರುತ್ತದೆ. ಅದಿಲ್ಲ, ಇದಿಲ್ಲ ಎಂದು ಕೊರಗಿ, ಆ ಕೊರಗನ್ನೇ ಮನೆಗೆ ಹೆಸರಿಡುವ ಈ ಮನೆಮಾಲಿಕರುಗಳಿಗೆ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಮನೆಹೊಂದಿರುವ ತೃಪ್ತಿಯಾದರೂ ಇರಬಾರದೇ? ಇನ್ನೊಂದಿಷ್ಟು ಮನೆ ಹೆಸರುಗಳಿವೆ - ಶುದ್ಧಾಂಗ ಶಾಪಗಳು. ಸಾಯಿ ರಕ್ಷಿತಾ, ಸಾಯಿ ದರ್ಶನ್, ಸಾಯಿ ಪ್ರಭಾ, ಸಾಯಿ ನಯನಾ ಇತ್ಯಾದಿ. ರಕ್ಷಿತಾನೋ ದರ್ಶನನೋ ಸಾಯಲಿ ಎನ್ನುವ ಕೀಳು ಆಸೆ ಮನದಲ್ಲಿದ್ದರೆ, ಮನೆಹೆಸರಲ್ಲಿಯೂ ಬರಬೇಕಾ? ಸಕಲ ಜೀವಜಾತಕೂ ಲೇಸನ್ನೇ ಬಯಸಿದ ಮಹಾನುಭಾವರ ಈ ನಾಡಿನಲ್ಲಿ ಇದೇನಿದು ಅಮಂಗಳಕರ ಹೆಸರುಗಳ ಹಾವಳಿ ?
ಬೆಂಗಳೂರಿನ ಈ ಭಾಗದ ಜನರು ಸ್ವಲ್ಪ ಮಾನಗೆಟ್ಟವರೇ ಎಂದು ಅನುಮಾನ ಬರುವಂತೆ ತಮ್ಮ ಮನೆಗಳಿಗೆ ಶಾಂತಿ’ಸ್ ಅಥವಾ ಅನ್ಸಿ’ಸ್ ಎಂದು ಬೋರ್ಡು ಹಾಕಿಕೊಂಡಿರುತ್ತಾರೆ. ನಮ್ಮೂರಲ್ಲಿ ಶಾಂತಾ ಅಥವಾ ಅನಸೂಯ ಎಂದು ಹೆಸರಿಟ್ಟುಕೊಂಡವರಿಗೆ ಅವರೊಂದಿಗೆ ದ್ವೇಷವಿದ್ದವರು ಮಾತ್ರ ಅವರನ್ನು ಹಿಂದಿನಿಂದ ಶಾಂತಿ, ಅನಿಸಿ ಎಂದು ಕರೆಯುತ್ತಾರೆ. ಉಳಿದವರೆಲ್ಲ ಅವರನ್ನು ಶಾಂತಕ್ಕಾ, ಶಾಂತವ್ವ, ಶಾಂತಾಬಾಯಿ ಎಂತಲೋ ಅನಸಕ್ಕಾ, ಅನಸವ್ವ, ಅನಸಾ ಎಂತಲೋ ಕರೆಯುತ್ತಾರೆ. ಯಾರಾದರೋ ಅವರ ಮನೆಯ ಮುಂದೆ ನಿಂತು ‘ಇದು ಅನಿಸಿ ಮನಿ, ಇದು ಶಾಂತಿ ಮನಿ’ ಎಂದರೆ ಮಚ್ಚೆ-ಮೂರುಪಾಲು ಜಗಳಗಳಾಗುತ್ತವೆ. ಆದರೆ ಈ ಜನ ‘ಇದು ಶಾಂತಿ ಮನೆ’ ‘ಇದು ಅನಿಸಿ ಮನೆ’ ಎಂದು ಬೋರ್ಡು ಬರೆದು ಹಾಕಿಕೊಳ್ಳುತ್ತಾರಲ್ಲ, ಇವರಿಗೆ ಮಹಿಳೆಯರ ಬಗ್ಗೆ ಗೌರವ ಇದೆ ಎಂದು ಹೇಗೆ ಹೇಳುವುದು ?
ಮುಗಿಸುವ ಮುನ್ನ:
ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಹೊಂದಬೇಕೆಂಬ ಕನಸು ಎಲ್ಲರಂತೆ ನನಗೂ ಇತ್ತು. ಹಾಗೆ ಹೊಂದಬಹುದಾದ ಮನೆಗೆ ಒಂದು ಒಳ್ಳೆಯ ಹೆಸರನ್ನೂ ನಿರ್ಧರಿಸಿಟ್ಟಿದ್ದೆ. ಆದರೆ ನನ್ನ ಆರ್ಥಿಕ ಮಿತಿಯಲ್ಲಿ ನನಗೆ ಬೇಕಾದಂತಹ ಮನೆ ಸಿಕ್ಕಿರಲಿಲ್ಲ. ಒಂದು ದಿನ ಬ್ಯಾಂಕಿನಲ್ಲಿ ಕೆಲಸ ಮಾಡುವ ನನ್ನ ಸ್ನೇಹಿತರೊಬ್ಬರು ಫೊನು ಮಾಡಿ ‘ನಮ್ಮ ಸುಸ್ತಿದಾರರೊಬ್ಬರ ಮನೆ ಲಿಲಾವಿಗೆ ಬಂದಿದೆ. ನೀವು ಪ್ರಯತ್ನಿಸಬಹುದು’ ಎಂದರು. ಅವರು ಹೇಳಿದ ಮನೆಯ ವಿಳಾಸವನ್ನು ಹುಡುಕಿಕೊಂಡು ಹೋದೆ. ಮನೆಯೇನೋ ಬಹಳ ಚೆನ್ನಾಗಿತ್ತು, ಆದರೆ ಮನೆಯ ಹೆಸರೇನು ಗೊತ್ತೇ? ‘ಕೃಷ್ಣಾರ್ಪಣ’!!
ಈ ಹೆಸರಿನಿಂದಲೇ ಮನೆ ಬ್ಯಾಂಕಾರ್ಪಣವಾಗುವ ಸನ್ನಿವೇಶ ಬಂದಿದೆ ಏನೋ ಎಂದು ಅಂದುಕೊಂಡೆ. ಅಂದೇ ಲಿಲಾವು ಶುರುವಾಯ್ತು. ಮೊದಲೆರಡು ಕೂಗಿನಲ್ಲಿಯೇ ಮನೆ ನನ್ನ ಮಿತಿಯನ್ನು ಮೀರಿದೆ ಎಂದು ಅನಿಸಿತು. ಆದರೂ ಇದು ಎಷ್ಟಕ್ಕೆ ಏರುತ್ತದೆ ಎಂಬುದನ್ನು ನೋಡಿಯೇ ಬಿಡೋಣವೆಂದು ನಿಂತುಕೊಂಡೆ. ಮನೆಯ ಬೆಲೆ ನನ್ನ ಕಲ್ಪನೆಯ ಪರಿಧಿಯನ್ನು ದಾಟಿ ಹೋಗುತ್ತಿರುವುದನ್ನು ಅಸಹಾಯಕತೆಯಿಂದ ನೋಡುತ್ತಾ ಬೆಂದಕಾಳೂರಿನಲ್ಲಿ ಸ್ವಂತ ಮನೆಯನ್ನು ಹೊಂದುವ ಮತ್ತು ಅದಕ್ಕೊಂದು ಸಾರ್ಥಕ ಹೆಸರಿಡುವ ಆಶೆಯನ್ನು ‘ಕೃಷ್ಣಾರ್ಪಣ’ ಮಾಡಿದೆ.

1 comment:
nice one anna.
Post a Comment