ಇದು
ಒಂದು ರೀತಿಯ #99yearChallenge.
ಈ
ಹಿಂದಿನ ನೂರು ವರ್ಷಗಳಲ್ಲಿ #ಕನ್ನಡಿಗ ರಿಗೆ 'ರೂಪಾಯಿ'ಯಲ್ಲಿ ಒಂದು ಪೈಸೆಯೂ ಬದಲಾಗಿಲ್ಲ..
(ಮೊದಲನೆಯದು 1918
ರ ಬಾಂಬೆ ಟಂಕಸಾಲೆಯ ಬ್ರಿಟೀಷ್ ಭಾರತದ 1 ರೂಪಾಯಿ
ನಾಣ್ಯ, ಬಲಗಡೆ ಇರೋವು 2017ರ ಮುಂಬಯಿ ಟಂಕಸಾಲೆಯ ಒಂದು ರೂಪಾಯಿ
ನಾಣ್ಯಗಳು)
ನೂರು
ವರ್ಷಗಳ ಹಿಂದೆ ಉರ್ದು ಇತ್ತು,
ಇಂದು ಹಿಂದಿ ಇದೆ. ಅಂದಂಗೆ ಹಿಂದಿಗೆ
ಉರ್ದುಗೆ ಲಿಪಿಯ ಬಿಟ್ಟು ಏನು ವ್ಯತ್ಯಾಸ? ರೂಪಾಯಿಗೆ
ಬದಲು ಹದಿನಾರಾಣೆ ಅಂದಂಗೆ ತಾನೆ ?!!
ಸ್ವಾತಂತ್ರ್ಯ
ಬಂದ ನಂತರವಾದರೂ #ಕನ್ನಡ ಕ್ಕೆ ಕಾಸಿನಲ್ಲಿ ಕಿಮ್ಮತ್ತು
ಸಿಕ್ಕೀತು ಎಂದರೆ ಉರ್ದು ಹೋಗಿ ಹಿಂದಿ ಬಂದು, 'ಊದೋದು ಹೋಗಿ ಬಾರಿಸೋದು ಬಂದಿದೆ', ಡುಂ ಡುಂಮ್‌ಕ್..
ನಾಣ್ಯದ
ಒಂದು ಬದಿ ಸಾಮಾನ್ಯವಾಗಿದ್ದು,
ಇನ್ನೊಂದು ಬದಿಯಲ್ಲಿ ದೇಶದ ಆಯಾ ಭಾಗದಲ್ಲಿ, ಅಲ್ಲಿನ ಭಾಷೆ ಇರುವ ನಾಣ್ಯಗಳನ್ನು @rbi ಬಿಡುಗಡೆ ಮಾಡಬಹುದಲ್ಲ?
ಯುರೋ
ರಾಷ್ಟ್ರಗಳು ಮಾಡಿಕೊಂಡ ಇಂತಹ ವ್ಯವಸ್ಥೆ ನಮಗೆ ಮಾದರಿಯಾಗ ಬೇಕಲ್ಲವೇ ?
(ಎಡಗಡೆಯದು 2010ರ ಫ್ರಾನ್ಸ್
ದೇಶದ ನಾಣ್ಯ, ಬಲಗಡೆಯದು 2002ರ ಗ್ರೀಸ್ ದೇಶದ ನಾಣ್ಯ. ಕೆಳಗಡೆ ಸಾಲಿನಲ್ಲಿ ಎರಡೂ ನಾಣ್ಯಗಳ ಸಾಮಾನ್ಯ
ಬದಿ.)
ಇದರಿಂದ
ಆಯಾ ಪ್ರದೇಶದ ಬಹು ಜನರಿಗೆ ಅನುಕೂಲ. ಅಕಸ್ಮಾತ್ತಾಗಿ ಒಂದು ಪ್ರದೇಶದ ನಾಣ್ಯ ಇನ್ನೊಂದು
ಪ್ರದೇಶಕ್ಕೆ ಹೋದರೆ, ಅದನ್ನು ನೋಡಿದವರಿಗೆ ನಮ್ಮ ದೇಶದ
ವೈವಿಧ್ಯತೆಯ ಪರಿಚಯವೂ ಆಗುತ್ತದೆ. ಮುಖ್ಯವಾಗಿ ಜನರಿಗೆ ಇಂಡಿಯಾ ಎಂದರೆ ಹಿಂದಿಯಾ ಅಷ್ಟೇ ಅಲ್ಲ
ಎಂಬ ಪಾಠವಾಗುತ್ತದೆ.
@rbi ತನ್ನ ಪ್ರಾದೇಶಿಕ ಕಚೇರಿಗಳ ಜಾಲದಿಂದ ಈ
ವ್ಯವಸ್ಥೆಯನ್ನು ಸುಲಭವಾಗಿ ಮಾಡಬಹುದು. ಆಯಾ ಪ್ರದೇಶಕ್ಕೆ 'ಸಂಬಂಧಿಸಿದ' ನಾಣ್ಯಗಳ ವಿಲೇವಾರಿಯನ್ನು @rbi ಈಗಾಗಲೇ ಮಾಡುತ್ತಿದೆ.. ಹೀಗಾಗಿಯೇ ನಿಮಗೆ
ಶ್ರೀ ಬಸವೇಶ್ವರರಿರುವ ೫ ರೂಪಾಯಿ ಕರ್ನಾಟಕದಲ್ಲಿ ಸಿಕ್ಕಷ್ಟು ಬೇರೆ ರಾಜ್ಯಗಳಲ್ಲಿ ಸಿಗುವುದಿಲ್ಲ, ಮಾತಾ ವೈಷ್ಣೋದೇವಿ ನಾಣ್ಯ ಕರ್ನಾಟಕದಲ್ಲಿ
ಅಪರೂಪ.
ಹಾಗೆಯೇ
ಪ್ರತಿ ಮೌಲ್ಯದ ಹಲವಾರು ವಿಧದ ನಾಣ್ಯಗಳನ್ನು ಏಕಕಾಲದಲ್ಲಿ @rbi ಈಗಲೂ ಪೂರೈಸುತ್ತಿದೆ, ಹೀಗಾಗಿ ವಿವಿಧ ಭಾಷೆಗಳ ನಾಣ್ಯಗಳನ್ನು
ಪೂರೈಸುವುದು ಕಷ್ಟದ ಕೆಲಸವಲ್ಲ.
ದೃಷ್ಟಿಹೀನರಿಗೆ
ಅನುಕೂಲವಾಗಲಿ ಎಂದು ನಾಣ್ಯಗಳಲ್ಲಿ ಹೊಸತು ತರುವ ನಮ್ಮ ಸರಕಾರ ಭಾರತದ ಭಾಷಾ ವೈವಿಧ್ಯತೆಗೆ ಯಾಕೆ
ಕುರುಡಾಗಿದೆಯೋ?
#
In the presence of young Divyang friends, a new series of visually impaired friendly coins were launched.
These coins will help the visually impaired greatly. pic.twitter.com/zKKLb2zXAf— Narendra Modi (@narendramodi) ಮಾರ್ಚ್ 7, 2019
ತನ್ನ
#ಹಿಂದಿಹೇರಿಕೆ
ಯ ಜಿಹಾದಿ ಉತ್ಸಾಹದಿಂದ
ಕಾನೂನಿಗೆ ವಿರುದ್ಧವಾಗಿ ದೇವನಾಗರಿ ಅಂಕೆಗಳನ್ನು ಹೊಸ ನೋಟುಗಳಲ್ಲಿ ಉಪಯೋಗಿಸಿ, ನಂತರ 'ಅವು ಅಂಕೆಗಳಲ್ಲ ಚಿತ್ರಗಳು' ಎಂದು
ಭಂಡತನ ತೋರಿಸುವ ನಮ್ಮ ಸರಕಾರ,
ಏನಾದರಾಗಲಿ-ಎಂತಾದರಾಗಲಿ, ಭಾರತದ ಭಾಷಾ ವೈವಿಧ್ಯತೆ ನಾಶಮಾಡಲು
ಪಣತೊಟ್ಟಿದೆ.
Even they added more Devanagari Numerals on new Currency Notes in the name of design https://t.co/NgAjQEko9f#stopHindiImposition— ಕಿಶೋರ್ ಕುಮಾರ್ (@KishorGavdaKK) ಮೇ 15, 2018
- ಸುರಕ್ಷಾ ಸೂಚನೆಗಳು-ರೈಲಿನಲ್ಲಿ, ವಿಮಾನದಲ್ಲಿ, ಪೆಟ್ರೋಲ್ ಬಂಕ್‌ಗಳಲ್ಲಿ, ಕೊನೆಗೆ ಅಡುಗೆ ಸಿಲೆಂಡರಿನ ಮೇಲೆ ಕೂಡ #ಕನ್ನಡದಲ್ಲಿ ಇಲ್ಲ.
- #ಕನ್ನಡ ಗ್ರಾಹಕರಿಗೆ ಅವರು ಕಾಸು ಕೊಟ್ಟು ಕೊಳ್ಳುವ - ಔಷಧಿ ಸಹಿತ - ಯಾವುದೇ ವಸ್ತುವಿನ ಮಾಹಿತಿ #ಕನ್ನಡದಲ್ಲಿ ಇಲ್ಲ.
- #ಕನ್ನಡ ಗ್ರಾಹಕರಿಗೆ ಬ್ಯಾಂಕ್, ಉಗ್ರಾಣ ಇತ್ಯಾದಿಗಳಲ್ಲಿ #ಕನ್ನಡ ದಲ್ಲಿ ಸೇವೆ ಇಲ್ಲ, #ಕನ್ನಡ ವಷ್ಟೇ ಗೊತ್ತಿರುವವರಿಗೆ ಅಲ್ಲಿ ನೌಕರಿಯೂ ಇಲ್ಲ..
ಇಂತಹ
ಪರಿಸ್ಥಿತಿಯಲ್ಲಿ #ಕನ್ನಡಿಗರು ಕಾಸಿನಲ್ಲಿ #ಕನ್ನಡ ಕೇಳುವುದು ಜುಟ್ಟಿಗೆ ಮಲ್ಲಿಗೆ
ಕೇಳಿದಂತಲ್ಲವೇ ?
ಹೌದು, ಆದರೆ ಬಹು ವೈವಿಧ್ಯತೆಯ ನಮ್ಮ ಈ ಪ್ರೀತಿಯ
ದೇಶದಲ್ಲಿ ಪ್ರತಿ ವಿಷಯದಲ್ಲಿಯೂ ನುಡಿ ಸಮಾನತೆಗಾಗಿ ಹಕ್ಕಿನಿಂದ ಕೇಳುವುದು ನಮ್ಮ ಕರ್ತವ್ಯ, ಅದನ್ನು ಬಿಟ್ಟು ಕುರಿಗಳಂತೆ ಅಸಮಾನತೆಯನ್ನು
ಒಪ್ಪಿಕೊಳ್ಳುವುದು ನಾವು ಈ ದೇಶಕ್ಕೆ ಮಾಡುವ ದ್ರೋಹ. ಹಾಗಾಗಿಯೇ ಇಂದು ನಾವು ಹೇಳಬೇಕು -#ServeInMyLanguage
#ಜೈ_ಭಾರತ_ಜನನಿಯ_ತನುಜಾತೆ
#ಜೈ_ಭಾರತ_ಜನನಿಯ_ತನುಜಾತೆ
(ಈ ಚಿತ್ರಗಳಲ್ಲಿ ಇರುವ ನಾಣ್ಯಗಳು ನನ್ನ ಸಂಗ್ರಹದಿಂದ)
No comments:
Post a Comment