ಇವತ್ತು ವಿಶ್ವ ಪರಂಪರೆ ದಿನ. ಹೀಗಾಗಿ ನಾನು ಕೂಡ ದಿನ #ಹನುಮನುದಿಸಿದ_ನಾಡು ಸರಣಿಯಲ್ಲಿ ನಮ್ಮ ಇತಿಹಾಸ ಪರಂಪರೆಯ ಬಗಗೆ ಬಹುಮೂಲ್ಯ ಮಾಹಿತಿಕೊಡುವ ನಾಣ್ಯಗಳ ಲೋಕಕ್ಕೆ ಹನುಮನನ್ನು ಹುಡುಕಿ ಹೊರಟಿದ್ದೇನೆ.
ಹಾನಗಲ್ಲಿನ ಕದಂಬರು ಗೋವೆಯ ಕದಂಬರ ಸಮಕಾಲೀನರು, ಆದರೆ ಅವರಷ್ಟು ಪ್ರಸಿದ್ಧರಲ್ಲ. ಈ ಕದಂಬರ ಲಾಂಛನ ಹನುಮ. ಹೀಗಾಗಿ ಅವರದೆಂದು ಹೇಳಲಾಗುವ ೧೧ನೇ ಶತಮಾನದ ನಾಣ್ಯದಲ್ಲಿ ಹನುಮನಿದ್ದಾನೆ. ಒಂದು ವರಾಹ ಬೆಲೆಯುಳ್ಳದ್ದಾಗಿದ್ದ ಇದು ೬೩ ಗ್ರೇನ್ ಬಂಗಾರದ ನಾಣ್ಯ. ಇದರ ಒಂದು ಬದಿಯಲಿ ಕುಳಿತಿರುವ ಹನುಮನ ಚಿತ್ರವಿದೆ. ಕೆಳಗೆ “ನಕರ” ಎಂದು ಕನ್ನಡ ಬರಹವಿದೆ. ಇದು ಬಂಕಾಪುರದ ದೈವವಾದ “ನಗ(ಕ)ರೇಶ್ವರ”ನನ್ನು ಸೂಚಿಸುತ್ತದೆಯಂದು ತಜ್ಞರ ಅಭಿಮತ.
ಇದೇ ರೀತಿಯ ಕಡಿಮೆ ತೂಕದ, ಒಂದು ʼಪಣʼ ಮೂಲ್ಯದ ನಾಣ್ಯಗಳೂ ಸಿಕ್ಕಿವೆಯಂತೆ
ಇದೇ ರೀತಿಯ ಬೆಳ್ಳಿಯ/ತಾಮ್ರದ ನಾಣ್ಯಗಳೂ ಸಿಕ್ಕಿವೆಯಂತೆ.
ಹರಿಹರನ ನಂತರ ವಿಜಯನಗರದ ಚುಕ್ಕಾಣಿ ಹಿಡಿದಿದ್ದ ಒಂದನೇ ಬುಕ್ಕರಾಯನೂ ಇದೇ ರೀತಿಯ ಬಂಗಾರದ ನಾಣ್ಯಗಳನ್ನು ಚಲಾವಣೆಯಲ್ಲಿ ತಂದಿದ್ದ. ಆ ನಾಣ್ಯದ ಹಿಂಬದಿಯಲ್ಲಿ ಕನ್ನಡ ಲಿಪಿಯಲ್ಲಿ ೩ ಸಾಲುಗಳಲ್ಲಿ “ಶ್ರೀ ವೀ” “ರ ಬುಕ” “ರಾಯ” ಎಂದು ಬರೆದಿದೆ.
ಹನುಮನಿರುವ ಈ ಬಂಗಾರದ ನಾಣ್ಯಗಳಿಗೆ “ಹನುಮಂತರಾಯಿ ವರಾಹ” ಎಂದೇ ಹೆಸರು.
ವಿಜಯನಗರದ ನಂತರದ ಅರಸುಗಳಾದ ಅರವೀಡು ವಂಶದ ಒಂದನೇ ಶ್ರೀರಂಗರಾಯ ಮತ್ತು ಎರಡನೇ ವೆಂಕಟಪತಿರಾಯ ಕೂಡ ಹನುಮನಿರುವ ನಾಣ್ಯಗಳನ್ನು ಜಾರಿಗೆ ತಂದಿದ್ದರಂತೆ. ಕೆಲ ಶತಮಾನಗಳ ನಂತರದ ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದ ತಾಮ್ರದ ನಾಣ್ಯಗಳಲ್ಲಿಯೂ ಹನುಮನ ಚಿತ್ರವಿತ್ತು.
ಗ್ರಂಥ ಋಣ : Coins and Currency system in Karnataka
ಚಿತ್ರ ಋಣ : http://coinindia.com/home.html
No comments:
Post a Comment