Monday, April 20, 2020

ಬೆಂಗಳೂರು ಕರಗಕ್ಕೆ ದನಿಪಯಣ



"ಬೆಂಗಳೂರ ಪರಂಪರೆಯ ಮುಖ್ಯ ಭಾಗ
ಇಲ್ಲಿ ನಡೆಯುವ ಪುರಾತನ ಕರಗ
ಒಮ್ಮೆಯಾದರೂ ಕಣ್ಣಿಂದ ನೋಡ
ಇದರ ವೈಭವ ಕಂಡು ಕೊಂಡಾಡ
ಯಾತಕ್ಕವ್ವ ಹುಬ್ಬಳ್ಳಿ ಧಾರವಾಡ
ನಮ್ಮ ಬೆಂಗಳೂರ್ ಊರ ನಮಗ ಪಾಡ"
ಎಂದು ಹಾಡುತ್ತ ನಾವು ನಿಮ್ಮನ್ನು "ಬೆಂಗಳೂರು ಕರಗ"ಕ್ಕೆ ಕರೆದುಕೊಂಡು ಹೊರಟಿದ್ದೇವೆ.




ಈ ದನಿಪಯಣದಲ್ಲಿ ನಾವು ತುಳಿದ ಹಾದಿ








👉 ದವನದ ಹುಣ್ಣಿಮೆಗಿಂತ ೯ ದಿನ ಮೊದಲು ಧ್ವಜಾರೋಹಣದಿಂದ ಕರಗದ ಹಬ್ಬ ಶುರುವಾಗಿ, ಹುಣ್ಣಿಮೆ ದಿನ ಹೂವಿನ ಕರಗವಾಗಿ, ಅದಾದಮೇಲೆ ಎರಡನೆ ದಿನ ರಥೋತ್ಸವದವರೆಗೆ ಒಟ್ಟು ಹನ್ನೊಂದು ದಿನ ನಡೆಯುತ್ತದೆ.





👉 ಭೀಮನನ್ನು ಸೆರೆ ಹಿಡಿದು ಹಾಕಿದ್ದ ಪೋತರಾಜನು ಕೊನೆಗೆ ಪಾಂಡವರ ತಂಗಿ ಶಂಕೋದರಿಯನ್ನು ಮದುವೆಯಾದ ಕತೆ ನಿಮಗೆ ಗೊತ್ತೇ?



ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.


ನಿಮಗೆ ಗೊತ್ತಿರೊ ಹಾಗೆ : *ದನಿಪಯಣ* ಪಾಡ್‌ಕಾಸ್ಟ್‌ ಕಾರ್ಯಕ್ರಮದ ಉದ್ದೇಶ ಶಾಲೆಯಲ್ಲಿ ಕಲಿಸದ, ಪಠ್ಯ ಪುಸ್ತಕಗಳಲ್ಲಿ ಇರದ ನಮ್ಮ ಊರು-ನಾಡುಗಳ ಕತೆ-ಇತಿಹಾಸ ತಿಳಿದುಕೊಳ್ಳೋದು ಮತ್ತು ಮಕ್ಕಳಿಗೆ ತಿಳಿಸುವುದು.
ಈ ಪಾಡ್‌ಕಾಸ್ಟ್‌ ಸಂಚಿಕೆಗಳು ರೇಡಿಯೋ-ಗಿರ್ಮಿಟ್ನಲ್ಲಿ (radiogirmit.com) ವಾರ-ಬಿಟ್ಟು-ವಾರ ಗುರುವಾರ ಪ್ರಸಾರ ಆಗುತ್ತವೆ.

ದನಿಪಯಣ ದ ಹಿಂದಿನ ಸಂಚಿಕೆಗಳು ಗೂಗಲ್‌ಪಾಡ್‌ಕಾಸ್ಟ್ ನಲ್ಲಿ ಲಭ್ಯವಿವೆ: https://www.google.com/podcasts?feed=aHR0cHM6Ly9hbmNob3IuZm0vcy8xMTAwMTAyMC9wb2RjYXN0L3Jzcw== 




No comments: