ಬಸವ ಜಯಂತಿ – ಅಕ್ಷಯ
ತದಿಗೆಯ ಶುಭಾಶಯಗಳು.
ಈ ಬಸವ ಜಯಂತಿಯಂದು, ನಮ್ಮಲ್ಲಿ ಬಹುತೇಕರ ನೆನಪಿನಿಂದ ಮರೆಯಾದ ಬಸವ ಜಯಂತಿಯ ಬಗೆಗಿನ ಒಂದು ಮಾಹಿತಿಯನ್ನು ಹಂಚಿಕೊಳ್ಳುವುದು ಈ ಪುಟ್ಟ ಬರಹದ ಉದ್ದೇಶ. ಈ ಬರಹದಲ್ಲಿನ ಮಾಹಿತಿಯ ಆಧಾರ ವಿವಿಧ ತಜ್ಞರ ಪುಸ್ತಕಗಳು – ಅವುಗಳ ಪಟ್ಟಿಯನ್ನು ಬರಹದ ಕೊನೆಗೆ ಕೊಡಲಾಗಿದೆ.
ಭಕ್ತಿ ಭಂಡಾರಿ ಬಸವಣ್ಣನವರು ಹುಟ್ಟಿದ್ದು ನಿಜವಾಗಿಯೂ ಅಕ್ಷಯ ತದಿಗೆಯಂದೇಯೇ? ಅದಕ್ಕೆ ಯಾವುದಾದರೂ ಶಾಸನಗಳ/ಸಾಹಿತ್ಯ ಕೃತಿಗಳಲ್ಲಿ ಆಧಾರವಿದೆಯೇ?
ಶಾಸನಗಳಲ್ಲಿ ಬಸವಣ್ಣ
ಬಸವಣ್ಣನವರು ನಮ್ಮ ನಾಡಿನ, ನಮ್ಮ ಸಮಾಜದ ಮೇಲೆ ಮಾಡಿದ ಪ್ರಭಾವಕ್ಕೆ ಹೋಲಿಸಿದರೆ ಅವರ ಬಗೆಗೆ ಸಿಕ್ಕ ಶಾಸನಗಳು ಕಮ್ಮಿಯೇ ಎನ್ನಬೇಕು. “ಸ್ಥಾವರಕ್ಕಿಳಿವುಂಟು, ಜಂಗಕ್ಕಳಿವಿಲ್ಲ” ಎಂದ ಶರಣರು ತಮ್ಮ ಬಗೆಗೆ ಸ್ಥಾವರವಾದ ಕಲ್ಲುಗಳ ಮೇಲೆ ಶಾಸನಗಳನ್ನು ಬರೆಸುವುದು ಬಿಡಿ, ಉಳಿದವರೂ ಬರೆಯಲೂ ಬಿಟ್ಟಿರಲಿಲ್ಲ ಅನಿಸುತ್ತೆ. ಹೀಗಾಗಿಯೇ ಕರ್ನಾಟಕದ ಶಾಸನ ಶಾಸ್ತ್ರಜ್ಞರ ಮೊದಲ ಪೀಳಿಗೆಯವರಾದ ಡಾ. ಫ್ಲೀಟ್ “No epigraphic mention of Basava and Channabasava has been obtained, which is peculiar if they really held the high office that is alloted to them by tradition” ಎಂದು ಶರಣರು ಐತಿಹಾಸಿಕ ವ್ಯಕ್ತಿ ಅಲ್ಲ, ಪುರಾಣ ಪುರುಷರೇ ಎಂದು ಸಂದೇಹಿಸಿದ್ದರು. ನಂತರ ಶ್ರೀ ನಾ.ಶ್ರೀ. ರಾಜಪುರೋಹಿತರು ಕಂಡುಹಿಡಿದ ಅರ್ಜುನವಾಡದ ಶಾಸನ ತಜ್ಞರ ಸಂಶಯ ನಿವಾರಿಸಿದರೂ, ಅಣ್ಣನವರು ಐಕ್ಯವಾಗಿ ಹಲವಾರು ವರ್ಷಗಳ ನಂತರ ಕ್ರಿ.ಶ.1260ರಲ್ಲಿ ಬರೆಯಲ್ಪಟ್ಟ ಶಾಸನ, ಅವರ ಹುಟ್ಟು-ಸಮಯದ ಬಗ್ಗೆ ಏನು ಹೇಳುವುದಿಲ್ಲ. ಡಾ. ಕಲ್ಬುರ್ಗಿಯವರ “ಶಾಸನಗಳಲ್ಲಿ ಶಿವಶರಣರು” ಪುಸ್ತಕ ಬಸವಣ್ಣವರ ಉಲ್ಲೇಖವಿರುವ 13 ಶಾಸನಗಳನ್ನು ಪಟ್ಟಿ ಮಾಡುತ್ತದೆಯಾದರೂ ಅವು ಯಾವವೂ ಅವರ ಹುಟ್ಟು-ಸಮಯದ ಬಗ್ಗೆ ಹೇಳುವುದಿಲ್ಲ.
ಮುಖ್ಯವಾಗಿ ದಾನ, ಶೌರ್ಯ, ವೀರಮರಣ ಇತ್ಯಾದಿಗಳೇ ಶಾಸನದ ವಸ್ತುಗಳಾಗಿರುವಾಗ ಅವುಗಳಲ್ಲಿ ಬಸವಣ್ಣನವರ ಜನ್ಮ-ಕಾಲವನ್ನು ಹುಡುಕುವುದು ಫಲದಾಯಕವಲ್ಲ ಎನಿಸುತ್ತದೆ.
(ಅರ್ಜುನವಾಡದ ಶಾಸನ, ವಿಕಿಪಿಡಿಯಾದಿಂದ)
ಪುರಾತನ ಸಾಹಿತ್ಯದಲ್ಲಿ:
ಬಸವಣ್ಣನವರ ಬಗೆಗೆ ಹಲವಾರು ಸಾಹಿತ್ಯ ಕೃತಿಗಳು ರಚನೆಗೊಂಡಿವೆ.
ಹರಿಹರನ “ಬಸವರಾಜದೇವರ ರಗಳೆ” ಬಹುಶಃ ಬಸವಣ್ಣನವರ ಬಗೆಗಿನ ಕೃತಿಗಳಲ್ಲಿ ಅತೀ ಹಳೆಯದು. ಹರಿಹರ ಕವಿ ಬಸವಣ್ಣನವರ ಕಾಲಕ್ಕೆ ಅತೀ ಹತ್ತಿರವಾದ ಕವಿ. ಆತ ಬಸವಾವತಾರವಾದ ಬಗ್ಗೆ “ಶಿವನ ಶಿಶುವಲ್ಲಿ ಸುಮೂರ್ತವೇ ಗಂಡುರೂಪಾದ ತೆರೆನಾಗಿ “ ಎಂದು ಹೇಳಿ ನಿರ್ದಿಷ್ಟ ಕಾಲವನ್ನು ಹೇಳದೇ ಮುಂದುವರಿಯುತ್ತಾನೆ.
ನಂತರದ ಪಾಲ್ಕುರಿಕೆ ಸೋಮನಾಥ ತೆಲುಗಿನಲ್ಲಿ ಬರೆದ “ಬಸವ ಪುರಾಣಮು” ಬಹು ಜನಪ್ರಿಯ ಬಸವ ಚರಿತೆ. ಅದನ್ನು ಭೀಮಕವಿ ಕನ್ನಡಕ್ಕೆ “ಬಸವ ಪುರಾಣ” ಎಂದು ಅನುವಾದಿಸಿದ್ದಾನೆ. ಭೀಮಕವಿಯು ಬಸವ-ಜನ್ಮವು “ಅರ್ಧೋದಯ” ಮುಹೂರ್ತದಲ್ಲಿ ಆಯಿತು ಎಂದು ಹೇಳಿದ್ದಾನೆ. “ಅರ್ಧೋದಯ” ಅಂದರೆ ಮಾಘಮಾಸದ ಅಮವಾಸ್ಯೆಯ ದಿನ, ಅದು ರವಿವಾರವಿದ್ದು ಆ ದಿನ ಸೂರ್ಯೋದಯ ಕಾಲಕ್ಕೆ ವ್ಯತಿಪಾತಯೋಗ ಶ್ರವಣಾ ನಕ್ಷತ್ರ ಇರುವ ದಿನವಂತೆ. ಈ ಬರಹದಲ್ಲಿ ಅಂತಹ ದಿನ ಹನ್ನೆರಡನೇ ಶತಮಾನದಲ್ಲಿ ಯಾವತ್ತು ಬಂದಿತ್ತು ಎಂಬ ಚರ್ಚೆಗೆ ಹೋಗದೇ, ಸೋಮನಾಥ/ಭೀಮಕವಿಯ ಪ್ರಕಾರ ಬಸವೋದ್ಭವವಾದದ್ದು ಅಕ್ಷಯತದಿಗೆಯ ದಿನವಂತೂ ಅಲ್ಲ ಎಂದು ನಿರ್ಣಯಿಸಿ ಮುಂದುವರಿಯೋಣ.
ಅದರ ಮುಂದಿನ 15ನೇ ಶತಮಾನದ ಚಾಮರಸ ತನ್ನ “ಪ್ರಭುಲಿಂಗ ಲೀಲೆ”ಯಲ್ಲಿ ಬಸವಣ್ಣನವರ ಜನನೋತ್ಸವದ ಉಲ್ಲೇಖ ಮಾಡುತ್ತಾನಾದರೂ “ಗುರುಶಿಷ್ಯ ಸಂಗ ನಿರಾಕುಳಕ್ಕೆ ಸುಜ್ಞಾನ ಉದಯಿಸುವಂತೆ” ಜನನವಾಯಿತು ಎಂದು ಹೇಳಿ ಕಾಲದ ಬಗ್ಗೆ ಏನನ್ನೂ ಹೇಳುವುದಿಲ್ಲ. ಅವನ ಸಮಕಾಲೀನನಾದ ಲಕ್ಕಣ್ಣ ದಂಡೇಶ “ಶಿವತತ್ವಚಿಂತಾಮಣಿ”ಯಲ್ಲಿ “ಸಿದ್ದಾರ್ಥಿ ಸಂವತ್ಸರದ ಕಾರ್ತಿಕಶುದ್ಧ ಪೌರ್ಣಮಿಯ ಸೋಮವಾರದ ಮಧ್ಯರಾತ್ರಿಯ ಕೃತಿಕಾ ಶಿವಯೋಗದ ವೃಷಭಲಗ್ನದಲ್ಲಿ” ಬಸವೋದಯವಾಯ್ತು ಎಂದಿದೆ. ಕ್ರಿ.ಶ 1500ರಲ್ಲಿ ಸಿಂಗಿರಾಜ ಬರೆದ ಸಿಂಗಿರಾಜ ಪುರಾಣದ ಪ್ರಕಾರ ಬಸವಾಗಮನವಾದದ್ದು “ಶುಚಿರ್ಮಾಸದ ಶುದ್ಧಚತುರ್ದಶಿಯ ಸೋಮವಾರ”.
ಒಟ್ಟಿನಲ್ಲಿ 12ನೇ ಶತಮಾನದಿಂದ 15ನೇ ಶತಮಾನದ ವರೆಗೆ ಬಂದ ಹಲವಾರು ಸಾಹಿತ್ಯ ಕೃತಿಗಳಲ್ಲಿ ಬಸವ ಹುಟ್ಟಿದ ದಿನ ಅಕ್ಷಯತದಿಗೆ ಎಂಬ ಬಗ್ಗೆ ಒಮ್ಮತ ಹೊಂದಿಲ್ಲ.
ಆಧುನಿಕಯುಗದಲ್ಲಿ ಬಸವಜಯಂತಿ ಆಚರಣೆ:
“ಹಾಗಾದರೆ ಇಂದು ನಾವು ಅಕ್ಷಯತದಿಗೆಯಂದು ಬಸವಜಯಂತಿಯನ್ನು ಆಚರಿಸುತ್ತಿರುವ ಸಂಪ್ರದಾಯವನ್ನು ಶುರುಮಾಡಿದ್ದು ಯಾರು?” ಎನ್ನುವುದನ್ನು ನೆನಪುಮಾಡಿಕೊಳ್ಳುವುದು ಈ ಬರಹದ ಮುಖ್ಯ ಉದ್ದೇಶ. ಕರ್ನಾಟಕದ ಗಾಂಧಿಯಂದು ಪ್ರಸಿದ್ಧರಾದ ಶ್ರೀ ಹರ್ಡೇಕರ ಮಂಜಪ್ಪನವರೇ 1913ರಲ್ಲಿ ಸಾರ್ವಜನಿಕವಾಗಿ ಬಸವ ಜಯಂತಿಯ ಆಚರಣೆ ಶುರುಮಾಡಿದ ಮಹಾಪುರುಷ.
ವೀರಶೈವ/ಲಿಂಗಾಯತ ಸಮಾಜದ ಜಾಗೃತಿ-ಸಂಘಟನೆಗಾಗಿ ಬಸವ-ಜಯಂತಿಯನ್ನು ಆಚರಿಸುವುದು ಆವಶ್ಯಕವೆಂದು ಆಗಿನ ಸಮಾಜದ ಹಿರಿಯರು ಬಗೆದಿದ್ದರು. ಆದರೆ ಯಾವ ದಿನದಂದು ಆಚರಿಸಬೇಕೆಂದು ನಿರ್ವಿವಾದವಾಗಿ ನಿರ್ಧಾರಮಾಡುವುದು ಶಕ್ಯವಿರಲಿಲ್ಲವಾದದ್ದರಿಂದ ಶ್ರೀ ಮಂಜಪ್ಪನವರು ಮುರುಘಾಮಠದ ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳ ಮಾರ್ಗದರ್ಶನದಲ್ಲಿ ಅಕ್ಷಯತದಿಗೆಯಂದು ಬಸವಜಯಂತಿಯನ್ನು ಆಚರಿಸಬೇಕೆಂದು ನಿರ್ಧರಿಸಿ, ದಾವಣಗೆರೆಯಲ್ಲಿ 1913ರಲ್ಲಿ ಮೊದಲ ಬಸವ ಜಯಂತಿಯ ಸಾರ್ವಜನಿಕ ಆಚರಣೆಮಾಡಿದರು. ಅದಾದ ಮೇಲೆ ಪ್ರತಿ ವರ್ಷ ಅದೇ ದಿನದಂದು ಬಸವ ಜಯಂತಿಯನ್ನು ಆಚರಿಸುವ ಪರಂಪರೆ ನಡೆದುಕೊಂಡು ಬಂದಿದೆ.
18ನೇ ಎಪ್ರೀಲ್ 1886ರಂದು ಬನವಾಸಿಯಲ್ಲಿ ಹುಟ್ಟಿದ್ದ ಶ್ರೀ ಮಂಜಪ್ಪನವರು ತಾವು ಮಾಡುತ್ತಿದ್ದ ಶಿಕ್ಷಕ ವೃತ್ತಿಯನ್ನು ತೊರೆದು “ಧನುರ್ಧಾರಿ” ಎಂಬ ಪತ್ರಿಕೆ ಶುರುಮಾಡುವುದರೊಂದಿಗೆ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ್ದರು. ಮೊದಲು ಶ್ರೀ ತಿಲಕರು ಮತ್ತು ನಂತರ ಮಹಾತ್ಮಾ ಗಾಂಧಿಯವರಿಂದ ಪ್ರಭಾವಿತರಾಗಿದ್ದ ಮಂಜಪ್ಪನವರು ಸ್ವಾತಂತ್ರ್ಯ ಸಂಗ್ರಾಮದ ಜೊತೆಗೆ ಸಮಾಜದ ಜಾಗೃತಿಗಾಗಿ ಕೆಲಸ ಮಾಡಿದವರು. ಅಲ್ಲಿಯವರೆಗೆ ಸ್ವಾತಂತ್ರ್ಯ ಹೋರಾಟದಿಂದ ದೂರವೇ ಉಳಿದಿದ್ದ ಕರ್ನಾಟಕದ ಬಹುಸಂಖ್ಯಾತ ವೀರಶೈವರನ್ನು ಹೋರಾಟಕ್ಕೆ ಸೇರಲು ಪ್ರೇರೇಪಿಸಿದ ಕೀರ್ತಿ ಶ್ರೀ ಮಂಜಪ್ಪನವರದು. ಸುಮಾರು 40 ಕೃತಿಗಳನ್ನು ರಚಿಸಿದ್ದ ಅವರು ’ಬಸವ ಚರಿತ್ರೆ’, ’ಬಸವ ಭೋಧಾಮೃತ’, ’ವಚನಕಾರರ ಸಮಾಜ ರಚನೆ’ ಇತ್ಯಾದಿ ಪುಸ್ತಕಗಳ ಮೂಲಕವೂ, “ಶರಣ ಸಂದೇಶ” ಪತ್ರಿಕೆ ಮೂಲಕವೂ ಬಸವಾದಿ ಶರಣರ ಆದರ್ಶವನ್ನು ಜನರಿಗೆ ತಲುಪಿಸಲು ಶ್ರಮಿಸಿದ್ದರು.
ಈ ಬಸವ ಜಯಂತಿಯಂದು ಭಕ್ತಿ ಭಂಡಾರಿ ಬಸವಣ್ಣನವರಿಗೆ ನಮಿಸಿ, ಅವರು ತೋರಿದ ಹಾದಿಯಲ್ಲಿ ನಡೆಯುವ ಸಂಕಲ್ಪ ಮಾಡುವದರ ಜೊತೆಗೆ ಬಸವ ಜಯಂತಿಯ ಪರಂಪರೆ ಹಾಕಿದ ಶ್ರೀ ಹರ್ಡೇಕರ ಮಂಜಪ್ಪನವರನ್ನು ನೆನೆಸಿಕೊಳ್ಳೋಣ.
ಬಾಲಂಗೂಚಿ: ಈ ಬರಹ ಬರೆದ ಮೇಲೆ “ಧರ್ಮಪಿತ ಬಸವಣ್ಣನವರ ಕಾಲನಿರ್ಣಯ” ಎಂಬ ಪೂಜ್ಯ ಮಾತೆ ಮಹಾದೇವಿಯವರು ಬರೆದ ಚಿಕ್ಕ, ಆದರೆ ಆಸಕ್ತಿಕರ ಪುಸ್ತಕ ನನ್ನ ಗಮನಕ್ಕೆ ಬಂತು.:
ಆಧಾರ:

1.
ಅದರ
ಪ್ರಕಾರ ಶಂಕರಾರಾಧ್ಯ ಸಂಸ್ಕೃತದಲ್ಲಿ ಬರೆದ “ಬಸವ ಪುರಾಣ”ದಲ್ಲಿ ಕೊಟ್ಟ ಜನ್ಮಕುಂಡಲಿಯ ಪ್ರಕಾರ ಬಸವ
ಜಯಂತಿಯನ್ನು ಅಕ್ಷಯ ತದಿಗೆಯಂದೋ, ಅಥವಾ ಒಂದು ದಿನ
ಹಿಂದೆ ಅಥವಾ ಮುಂದೆ ರೇವತಿ ನಕ್ಷತ್ರ ಇದ್ದ ದಿನದಂದು ಆಚರಿಸುವುದು ಶಾಸ್ತ್ರಯೋಗ್ಯ.
a.
ಸಂಸ್ಕೃತದ
ಬಗ್ಗೆಯೂ, ಜ್ಯೋತಿಶ್ಯಾಸ್ತ್ರದ ಬಗ್ಗೆ ನನ್ನ ತಿಳುವಳಿಕೆ ಕಡಿಮೆ ಇರುವುದರಿಂದ ಈ ವಿಷಯದ ಬಗ್ಗೆ ಹೆಚ್ಚಿಗೆ
ವಿಚಾರ ಮಾಡಲಾಗಲಿಲ್ಲ. ನನ್ನ ತಿಳುವಳಿಕೆಯ ಪ್ರಕಾರ ಶಂಕರಾರಾಧ್ಯನಿಗೂ ಪಾಲ್ಕುರಿಕೆ ಸೋಮನಾಥ ತೆಲುಗಿನಲ್ಲಿ
ಬರೆದ “ಬಸವ ಪುರಾಣಮು”ವೇ ಆಧಾರ. ಹೀಗಾಗಿ ಈ ಜನ್ಮ ಕುಂಡಲಿಯ ವಿಷಯದ ಬಗ್ಗೆ ನನಗೆ ಅನುಮಾನಗಳಿವೆ.
2.
ಅದರ
ಪ್ರಕಾರ ಸಾರ್ವಜನಿಕ ಬಸವ ಜಯಂತಿಯನ್ನು ಶ್ರೀ ಹರ್ಡೇಕರ ಮಂಜಪ್ಪನವರು ಶುರುಮಾಡಿದ್ದು 1911ರಲ್ಲಿ.
ಆದರೆ ನೀಲಗಿರಿಯಲ್ಲಿರುವ ಬಡಗ ಲಿಂಗಾಯತರು ಬಹುಹಿಂದಿನಿಂದಲೇ ಅಕ್ಷಯತದಿಗೆಯ ದಿನದಂದೇ ಸಂಪ್ರದಾಯಿಕವಾಗಿ
ಬಸವ ಜಯಂತಿ ಆಚರಿಸುತ್ತಿದಾರೆ.
ಆಧಾರ:
1.
“ಶಾಸನಗಳಲ್ಲಿ
ಶಿವಶರಣರು”, ಲೇಖಕರು: ಡಾ. ಎಮ್.ಎಮ್.ಕಲಬುರ್ಗಿ (1978ರ ಎರಡನೇ ಆವೃತ್ತಿ)
2.
“ಮಹಾಕವಿ
ಷಡಕ್ಷರಿದೇವ ವಿರಚಿತ ಬಸವರಾಜ ವಿಜಯಂ” ಸಂ: ಡಾ. ಆರ್.ಸಿ.ಹಿರೇಮಠ (1968 ಮೊದಲ ಆವೃತ್ತಿ)
3.
“ಇತಿಹಾಸದ
ಆಚೀಚೆ” ಲೇಖಕರು: ಡಾ.ಸೂರ್ಯನಾಥ ಕಾಮತ್ (2012ರ ಮೊದಲ ಆವೃತ್ತಿ)
4.
“ಧರ್ಮಪಿತ
ಬಸವಣ್ಣನವರ ಕಾಲನಿರ್ಣಯ” ಲೇ: ಪೂಜ್ಯ ಮಾತೆ ಮಹಾದೇವಿಯವರು. (2006ರ ಎರಡನೇ ಆವೃತ್ತಿ)
(https://vijaykarnataka.com/news/vk-special/the-history-and-historical-background-of-basava-jayanti/articleshow/75388272.cmsರಲ್ಲಿ ಪ್ರಕಟಿತ)
No comments:
Post a Comment