ಧಾರವಾಡದ ಬಗ್ಗೆ ನಾವು ಈಗಾಗಲೇ ಎರಡು #ದನಿಪಯಣ ಸಂಚಿಕೆ ಮಾಡಿದ್ದೇವೆ.
೧. ಕವಿದಿನದಂದು "ಗಾರುಡಿಗನ ಧಾರವಾಡ" ಎಂಬ ಬೇಂದ್ರೆ ಅಜ್ಜನ ಕವನಗಳೊಳಗೆ ಬರುವ ಧಾರವಾಡದ ಜಾಗಗಳ ಬಗೆಗೆ ಮಾಡಿದ ಪಾಡ್‌ಕಾಸ್ಟ್ - https://anchor.fm/gururaj-kulkarni/episodes/--ean3ea
೨. ಧಾರವಾಡ ಸಮ್ಮೇಳನದ ಸಂದರ್ಭದಲ್ಲಿ ಮಾಡಿದ "ಧಾರವಾಡ ದರ್ಶನ" - https://anchor.fm/gururaj-kulkarni/episodes/--e99sfb
ಈ ಸಲದ #ದನಿಪಯಣ ಪಾಡ್‌ಕಾಸ್ಟ್ ಸಂಚಿಕೆ ಶಾಲೆಯಲ್ಲಿ ಕಲಿಸದ, ಶಾಲೆಯ ಇತಿಹಾಸದ ಬಗೆಗೆ ಇರಲಿದೆ. ಹೌದು, ಈ ಸಲ ನಾವು ನಮ್ಮ ಧಾರವಾಡದ "ರ್‍ಯಾಂಕುಗಳ ಬ್ಯಾಂಕು" ಕೆಇಬೋರ್ಡ ಸಂಸ್ಥೆಯ ಶಾಲೆಗಳಿಗೆ ಪಯಣ ಹೊರಟಿದ್ದೇವೆ.
ಕೆಲ ತಿಂಗಳ ಹಿಂದೆಯೇ ಈ ಸಂಸ್ಥೆ ಶತಮಾನ ಆಚರಿಸಿದೆ:
ಈ ಪಯಣದ ಹಾದಿ:
ಈಗ ಕೆಇಬೋರ್ಡ ಅಡಿ ಇರುವ ವಿದ್ಯಾರಣ್ಯ ಶಾಲೆ, ೧೮೮೨ರಲ್ಲಿ ಶುರುವಾಗಿದ್ದು, ಶಾಲೆಗೆ ಶ್ರೀ ವಿಷ್ಣು ಕಾಶಿನಾಥ್ ಲೀಲೆಯವರು ಮೊದಲ ಮುಖ್ಯಸ್ಥರು.
ಈ ಶಾಲೆಯ ಹಳೆಯ ವಿದ್ಯಾರ್ಥಿ ಶ್ರೀ ಶ್ರೀನಿವಾಸ ದಲಾಲರು ಗಣೀತಶಾಸ್ತ್ರದ ವಿದ್ವಾಂಸರು, ಅಮೇರಿಕೆಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ತಮ್ಮ ಜೀವವಿಮೆಗೆ ಶಾಲೆಯನ್ನು ನಾಮನಿರ್ದೇಶನ ಮಾಡಿದ್ದರು. ಅವರ ನಿಧನದ ನಂತರ ಬಂದ ಮೊತ್ತದಿಂದ ಈ ಶಾಲೆಯ ಒಂದು ಭವನವನ್ನು ಕಟ್ಟಲಾಗಿದೆ.
ಈಗ ಜೆಎಸ್‌ಎಸ್ ಕಾಲೇಜೆಂದು ಪ್ರಸಿದ್ಧವಾಗಿರುವ ಕಾಲೇಜು, ಈಗ ವಿದ್ಯಾರಣ್ಯ ಶಾಲೆ ಇರುವ ಜಾಗದಲ್ಲೇ ಶುರುವಾಗಿತ್ತು. ಖ್ಯಾತ #ಕನ್ನಡ ಕವಿ, #ಕನ್ನಡದ ಕಣ್ವ ಶ್ರೀ ಯವರು ಅದರ ಮೊದಲ ಪ್ರಾಂಶುಪಾಲರು.
ಹಾಗೆಯೇ, ನಿಮಗೊತ್ತಾ ?
ಧಾರವಾಡದ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾಗಿ, ಕರ್ನಾಟಕ ಕಾಲೇಜಿನ ಸ್ಥಾಪಕರಾಗಿ, ಧಾರವಾಡವನ್ನು ವಿದ್ಯಾಕಾಶಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ರಾವ್ ಬಹಾದ್ದೂರ್ ಶ್ರೀ ರೊದ್ಧ ಶ್ರೀನಿವಾಸರಾಯರೇ ಕರ್ನಾಟಕ ಪ್ರೌಢಶಾಲೆಯ, ಕೆಇಬೋರ್ಡ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು.
ಈ ಸಂಸ್ಥೆಯ ಶಾಲೆಗಳು ಶ್ರೀ ಸಾಲಿ ರಾಮಚಂದ್ರ ರಾಯರು ಸಾಲಿ ಕಲಿಸಿದ, ಸಾಲಿಗೆ ಪ್ರಾರ್ಥನಾ ಪದ್ಯ ಬರೆದ ಸಾಲಿಗಳು.
"ರ್‍ಯಾಂಕುಗಳ ಬ್ಯಾಂಕು" ಎಂದೇ ಪ್ರಸಿದ್ಧ ಈ ಸಂಸ್ಥೆಯ ಶಾಲೆಗಳು.
ಕೆಇಬೋರ್ಡ ಸಂಸ್ಥೆ ಸ್ವಾತಂತ್ರ್ಯ ಹೋರಾಟಗಾರರ ತವರು ಇದ್ದಂತೆ.
ಇಲ್ಲಿಯ ಡಾ.ಕಬ್ಬೂರ, ಶ್ರೀ ಕರಮರಕರ, ಶ್ರೀ ಕೆ.ಜಿ. ಜೋಷಿ ಕರನಿರಾಕರಣೆ/ಕಾನೂನು ಭಂಗ ಚಳುವಳಿಗಳಲ್ಲಿ ಮುಂದಾಳತ್ವ ವಹಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಚಳುವಳಿಯ ಬಗೆಗಿನ ನಮ್ಮ #ದನಿಪಯಣ ಸಂಚಿಕೆಯಲ್ಲಿ ಆ ಬಗ್ಗೆ ಮಾತಾಡಿದ್ದೆವು :https://anchor.fm/gururaj-kulkarni/episodes/ep-e9due2
ಕರ್ನಾಟಕ ಫ್ರೌಢಶಾಲೆಯ ಮುಖ್ಯೋಪಾಧ್ಯಯರಾಗಿದ್ದ ಶ್ರೀ ಶನೋಲಕರರು ಶ್ರೀ ಎಸ್‌ಜಿ ನಾಡಗೇರರು ಭೂಗತ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
ಈ ಸಂಸ್ಥೆಯ ಶ್ರೀ ಮುಧೋಳಕರ, ಶ್ರೀ ಶೆಟ್ಟಿ ಶ್ರೀ ಬಡಿಗೇರರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ್ದರು.
ಕಾಂಗ್ರೆಸ್ ಕರಪತ್ರಗಳು ಆಗಾಗ ಕರ್ನಾಟಕ ಹೈಸ್ಕೂಲಿನಲ್ಲಿ ಅಚ್ಚಾಗುತ್ತಿದ್ದವು.
ಅವರು ಕರ್ನಾಟಕ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾಯಕತ್ವ ವಹಿಸಿ ಜೈಲು ಅನುಭವಿಸಿದವರು. ಆದರೆ ವೃತ್ತಿಯಿಂದ ವೈದ್ಯರು, ಹೀಗಾಗಿ ಜೈಲಿನಲ್ಲಿ ಸೋಂಕುರೋಗ ಕಾಲಿಟ್ಟಾಗ, ತಾವೇ ಸ್ವತಃ ರೋಗಿ ಕೈದಿಗಳ ಶುಶ್ರೂಷೆ ಮಾಡಿದವರು.
ಕೆ.ಇ. ಬೋರ್ಡ್ ಸಂಸ್ಥೆಗಾಗಿ ಅರ್ಧಶತಮಾನ ದುಡಿದ ಡಾ. ನಾ.ಭೀ.ಕಬ್ಬೂರರಿಗೆ ನಮ್ಮ #ದನಿಪಯಣ ಸಂಚಿಕೆಯಲ್ಲಿ ನಮನ ಸಲ್ಲಿಸಲಿದ್ದೇವೆ.
No comments:
Post a Comment