ಸ್ವಾತಂತ್ರ್ಯ ದಿನದ ತಡವಾದ ಶುಭಾಶಯಗಳು. ಅಗಸ್ಟ್ ೧೬ರ ಈ #ದನಿಪಯಣ ಸಂಚಿಕೆಯಲ್ಲಿ ಗಂಡುಮೆಟ್ಟಿನ ನೆಲ ಹುಬ್ಬಳ್ಳಿಯಲ್ಲಿ ಸ್ವಾತಂತ್ರ್ಯ ಸಮರದ ನೆನಪುಗಳ ಬಗ್ಗೆ ಮಾತನಾಡುತ್ತ ನಡೆಯಲಿದ್ದೇವೆ.
#ದನಿಪಯಣ ದ ಈ ಸಂಚಿಕೆಯನ್ನು ಇಲ್ಲಿ ಕೇಳಿ:
https://anchor.fm/gururaj-kulkarni/episodes/ep-ej76km
🔶 ಹುಬ್ಬಳ್ಳಿಯನ್ನು ಕರ್ಮಭೂಮಿಯಾಗಿಸಿಕೊಂಡಿದ್ದ ಧೈರ್ಯಶಾಲಿ ಮಹಿಳೆ ಶ್ರೀಮತಿ ಉಮಾಬಾಯಿ ಕುಂದಾಪುರರು ಭಗಿನಿ ಮಂಡಳದ ಮೂಲಕ ಸ್ವಾತಂತ್ರ್ಯದ ಸ್ವಯಂಸೇವಕಿಯರನ್ನು ಸಜ್ಜುಗೊಳಿಸುತಿದ್ದರು.
🔷 ನಿಮಗೆ ಗೊತ್ತಾ ? ಈಗ ಹುಬ್ಬಳ್ಳಿ-ಬೆಂಗಳೂರಿನಲ್ಲಿ ಮುಖ್ಯ ನೆಲೆ ಕಂಡುಕೊಂಡಿರುವ 'ಸಂಯುಕ್ತ ಕರ್ನಾಟಕ' ಶುರುವಾಗಿದ್ದು ಬೆಳಗಾವಿಯಲ್ಲಿ, ಅದೂ ವಾರಪತ್ರಿಕೆಯಾಗಿ..
🔶 ಧಾರವಾಡದ ವಿದ್ಯಾರಣ್ಯ ಶಾಲೆಯಲ್ಲಿ ಸಹೋದ್ಯೋಗಿಗಳಾಗಿದ್ದ ಸರ್ವಶ್ರೀ ರಂಗನಾಥ ದಿವಾಕರ, ಮಧ್ವರಾವ್ ಕಬ್ಬೂರ ಮತ್ತು ರಾಮರಾವ ಹುಕ್ಕೇರಿಕರರು ಶುರುಮಾಡಿದ್ದ "ಕರ್ಮವೀರ" ಪತ್ರಿಕೆಗೆ ಆ ಹೆಸರು ಕೊಡಲು ಕಾರಣವೇನು ಗೊತ್ತಾ?
🔷 ಬಡತನದಲ್ಲಿಯೇ ಹುಟ್ಟಿ, ಕಷ್ಟ ಪಟ್ಟು ಬೆಳದ ಸರ್ ಸಿದ್ದಪ್ಪ ಕಂಬಳಿಯವರು ಅಂದಿನ ಬಾಂಬೆ ಸರಕಾರದಲ್ಲಿ ಶಿಕ್ಷಣ, ಕೃಷಿ, ಅಬಕಾರಿ ಸಚಿವರಾಗಿ ದುಡಿದವರು. ಅಂದಿನ ಬಹುತೇಕ ನಾಯಕರಂತೆ ಗಾಂಧಿ ಬೆಂಬಲಿಗರಾಗದೇ , ಕಾಂಗ್ರೆಸ್‌ಗೆ ಸ್ಪರ್ಧಿಯಾಗಿದ್ದವರು.
🔶 ಹಿಂದುಸ್ಥಾನ ಸೇವಾದಳವನ್ನು ಸ್ಥಾಪಿಸಿದ ಡಾ.ನಾ.ಸು.ಹರ್ಡಿಕರರು ಹುಬ್ಬಳ್ಳಿಯವರು. ದಳದ ಕೇಂದ್ರ ಕಚೇರಿ ಹುಬ್ಬಳ್ಳಿಯೇ ಆಗಿತ್ತು.
🔷 ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಹದಿಮೂರು ವರ್ಷದ ಬಾಲಕ ನಾರಾಯಣ ಡೋಣಿ ಹುಬ್ಬಳ್ಳಿಯಲ್ಲಿ ಹುತಾತ್ಮನಾಗಿದ್ದ.
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
ಇದನ್ನು ಗೂಗಲ್ ಪಾಡಕಾಸ್ಟ್‌ನಲ್ಲಿ ಕೇಳಲು ಇಲ್ಲಿ ಕ್ಲಿಕ್ಕಿಸಿ
ಈ ಪಯಣಕ್ಕೆ ನಾವು ಸವೆಸಿದ ಹಾದಿ:
ಮೊದಲು ಕಿತ್ತೂರು ರಾಣಿ ಚನ್ನಮನಿಗೆ ನಮಿಸಿ,
ಆಮೇಲೆ ಕಿತ್ತೂರಿನ ಕಲಿ ರಾಯಣ್ಣನಿಗೆ ವಂದಿಸಿ ಪಯಣ ಶುರುಮಾಡಿದೆವು.
ಮೊದಲು ನೆನಪಿಸಿಕೊಂಡಿದ್ದು ಮಹಾ ಧೈರ್ಯವಂತ ಹೆಣ್ಣು ಮಗಳು ಶ್ರೀಮತಿ ಉಮಾಬಾಯಿ ಕುಂದಾಪುರರನ್ನು:
ಆಮೇಲೆ ಸರ್ ಸಿದ್ದಪ್ಪ ಕಂಬಳಿಯವರ ಮೂರ್ತಿಗೆ ನಮಿಸಿ, ಅವರು ತುಳಿದ ಭಿನ್ನ ಹಾದಿಯ ಬಗ್ಗೆ ಮಾತನಾಡಿದ್ದೇವೆ.
೧೯೪೨ರ ಹುತಾತ್ಮರ ವೀರಗಲ್ಲಿಗೆ ನಮಿಸಿ ಪಯಣ ಮುಂದುವರಿಸಿದ್ದೆವು.
ಸಂಯುಕ್ತ ಕರ್ನಾಟಕ ಕಟ್ಟಡ ನೋಡಿ, ಶ್ರೀ ದಿವಾಕರರನ್ನು ನೆನೆಸಿಕೊಂಡು, ಲೋಕಶಿಕ್ಷಣ ಟ್ರಸ್ಟ್‌ನ ಪತ್ರಿಕೆಗಳ ಇತಿಹಾಸ ಚರ್ಚಿಸಿದ್ದೇವೆ:
ಆಮೇಲೆ ಡಾ. ನ.ಸು.ಹರ್ಡಿಕರರನ್ನು ನೆನೆಸಿಕೊಂಡು, ಅವರ ಹಿಂದುಸ್ಥಾನ ಸೇವಾದಳದ ಬಗ್ಗೆ ಮಾತನಾಡಿದ್ದೇವೆ.
ಕೊನೆಗೆ ೧೯೪೨ರ ಬಾಲ-ಹುತಾತ್ಮ ನಾರಾಯಣನ ಮೂರ್ತಿಗೆ ನಮಿಸಿ ನಮ್ಮ ದನಿಪಯಣ ಮುಗಿಸಿದ್ದೇವೆ.
No comments:
Post a Comment