೧. ಮೊನ್ನೆ ೧೮ನೇ ತಾರೀಕಿನಂದು ವಿಕದ ಮುಖಪುಟದಲ್ಲಿ ಬಂದಿದ್ದ ಭಾರತೀಯ ಸ್ಟೇಟ್ ಬ್ಯಾಂಕಿನವರ ಜಾಹೀರಾತಲ್ಲಿ ದೊಡ್ಡ ಅಕ್ಷರಗಳಲ್ಲಿ ಬರೆದ ತಲೆಬರಹದಲ್ಲಿಯೇ ತಪ್ಪು:
೨. ’ಮಿನಿಸ್ಟ್ರಿ ಆಫ್ ಓವರ‍್ಸೀಸ್ ಇಂಡಿಯನ್ ಅಫೇರ್ಸ್’ ಅವರು ೦೪.೦೩.೨೦೧೦ರ ಕನ್ನಡಪ್ರಭದಲ್ಲಿ ಕೊಟ್ಟಿರೋದು. ಈ ಜಾಹಿರಾತು ಯಾವ ಭಾಷೆಯಲ್ಲಿದೆ ಎಂದು ಹೇಳಿದರೆ ಅವರಿಗೊಂದು ಬಹುಮಾನ. ಇದು ಕನ್ನಡವಲ್ಲ, ಯಾಕೆಂದರೆ ಇದನ್ನು ಕನ್ನಡಿಗರು ಓದಿದರೆ ಅರ್ಥವಾಗುವುದಿಲ್ಲ. ಇದು ಹಿಂದಿಯೂ ಅಲ್ಲ, ಯಾಕಂದ್ರೆ ಇದನ್ನು ಕನ್ನಡ ಲಿಪಿಯಲ್ಲಿ ಬರೆದಿದ್ದಾರೆ. ಇದು ಹಿಂದಿಯನ್ನು ಕನ್ನಡಲಿಪಿಯಲ್ಲಿ ಬರೆದದ್ದು ಎಂದುಕೊಂಡರೆ ಅದೂ ಕೂಡ ತಪ್ಪು - ’ಜಾಯೆಇನ್’, ’ಕಮಾಯೆಇನ್’ ಇತ್ಯಾದಿ ಶಬ್ದಗಳು ಹಿಂದಿಯಲ್ಲಿಯೂ ಇಲ್ಲ!
೩. ಮೂರನೇ ಜಾಹಿರಾತಿನ ಮುಂದೆ ಮೊದಲೆರಡು ಏನೇನು ಅಲ್ಲ. ಅದು ಪ್ರಕಟವಾದದ್ದು ೩೦ನೇ ಡಿಸೆಂಬರ್ ೨೦೦೬ರಂದು, ವಿಕದಲ್ಲಿ. ಇಂದಿಗೂ ಅದನ್ನು ಸಮಗಟ್ಟುವ ಜಾಹಿರಾ"ಥೂ" ನಾನು ನೋಡಿಲ್ಲ. ಅದು ವಿಕದ ಅರ್ಧಪುಟಕ್ಕೂ ಹೆಚ್ಚಿನ ಜಾಗವನ್ನು ಮಲೀನ ಗೊಳಿಸಿತ್ತು.
ಈಗ ಮೀಡಿಯಾ ಮೈಂಡ್ ಗಳಿಗೆ ಎರಡು ಪ್ರಶ್ನೆ:
೧. ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹಿರಾತುಗಳ ಹುರುಳು -semantics-ಗೆ ನೀವು ಜವಾಬ್ದಾರರಲ್ಲ, ಒಪ್ಪತಕ್ಕದ್ದೆ. ಆದರೆ ಅದರ ಬರಹ - syntax-ಗೂ ನೀವು ಜವಾಬ್ದಾರರಲ್ಲವೇ? ನಾನು ಮೇಲೆ ತೋರಿಸಿದಂತಹ ತಪ್ಪುಗಳಿಂದ ನಿಮ್ಮ ಪತ್ರಿಕೆಯ ಚಂದಕ್ಕೆ ಕುಂದು ಉಂಟಾಗುವುದಿಲ್ಲವೇ ?
೨. ನಿಮಗೆ ಕಾಸುಕೊಟ್ಟಬಿಟ್ಟರೆ ಜಾಹಿರಾತುದಾರ ಕೊಟ್ಟದ್ದನು ಕಣ್ಣು ಮುಚ್ಚಿ ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ಬಿಡುತ್ತೀರಾ ? ನಾನು "ಈ ಪತ್ರಿಕೆಯಲ್ಲಿನ ಜಾಹಿರಾತುಗಳು ದರಿದ್ರವಾಗಿರುತ್ತವೆ" ಎಂದು ಬರೆದು ಕೊಟ್ಟರೆ, ನೀವು ’ಇಂಚಿಗೆ ಇಷ್ಟು’ ಎಂದು ಲೆಕ್ಕಹಾಕಿ ರೊಕ್ಕ ತೆಗೆದುಕೊಂಡು ಪ್ರಕಟಿಸಿಬಿಡುತ್ತೀರಾ ? ಹಾಗೆ ಸುಮ್ಮನೆ ಕೇಳಿದೆ, ನಾನ್ಯಾಕೆ ಜಾಹಿರಾತು ಕೊಟ್ಟು ಕಾಸು ಕಳೆದುಕೊಳ್ಳಲಿ, ಪತ್ರಿಕೆಗಳಲ್ಲಿನ ಜಾಹಿರಾತು ನೋಡಿದವರಿಗೆ ಅದು ಗೊತ್ತಾಗಿಯೇ ಬಿಡುತ್ತದೆ.. :-)
No comments:
Post a Comment