ಲೋಕಾಯುಕ್ತ ಪೋಲಿಸರು ಇಷ್ಟು ಜನರನ್ನು ಒಳಗೆ ಹಾಕ್ತಾ ಇರೋದನ್ನ ನೋಡಿದರೆ, ಅವರನ್ನು lock ಆಯುಕ್ತ ಪೋಲಿಸರು ಎಂದು ಕರೀಬೇಕು ಎನಿಸುತ್ತೆ...
Showing posts with label ಪನ್ ಪ್ರpunಚ. Show all posts
Showing posts with label ಪನ್ ಪ್ರpunಚ. Show all posts
Sunday, October 16, 2011
Thursday, August 25, 2011
Saturday, July 9, 2011
punಚಾಮೃತ
ರಾಜಕಾರಣಿಗಳು ಉಪವಾಸ ಮಾಡದಿದ್ದರೂ ಸರಿ, ಆದ್ರೆ "ತಿನ್ನುವುದು" ಬಿಟ್ಟರೆ ಒಳ್ಳೆಯದು..
Tuesday, June 21, 2011
Saturday, October 23, 2010
ಕೀಪ್ ಇಟ್ ಅಪ್ !
ಕೀಪ್ ಶಬ್ದದ ಬಗ್ಗೆ ಕೆಲವರಿಗೆ ಆಕ್ಷೇಪವಿದೆ ಎಂದು ವರದಿಯಾಗಿದೆ : http://thatskannada.oneindia.in/news/2010/10/23/keep-in-sc-ruling-poor-taste-indira.html. ಇರಲಿ, ಆ ಪದವನ್ನು ಬಹಿಷ್ಕರಿಸುವ ಮುನ್ನ ಈ ಪೋಸ್ಟನ್ನು ಓದಿಕೊಂಡುಬಿಡಿ..
ಕೀಪ್ ಅಂದರೆ ಇಟ್ಟುಕೊಂಡವಳು, ಉಪಪತ್ನಿ, ಸಾಮಾನ್ಯ ಜನರ ಮಾತಿನಲ್ಲಿ "ಆಕಿ"..ಅದೇ ಅರ್ಥದಲ್ಲಿ ಕೆಳಗಿನ ಕೆಲ ಭಾಷಾಂತರಗಳನ್ನು ನೋಡಿ:
keep silence – ಆಕಿ ಶಾಂತಿ
keep distance- ಆಕಿ ಅಂತರಾ
keep change- ಆಕಿ ಚಿಲ್ಲರೆ (ಹೆಂಗಸು)
keep left -ಆಕಿ ಬಿಟ್ಟೋದ್ಳು..:-)

Saturday, October 16, 2010
punಚಾಮೃತ
ಈಗ ನಡೆಯುತ್ತಿರುವ ರಾಜಕೀಯ ಪ್ರಹಸನದ ಮಾಧ್ಯಮ ವರದಿಗಳ ಬಗ್ಗೆ ನನ್ನದೂ ಒಂದು ತಕರಾರಿದೆ. ಬರೀ ಆ ಹದಿನಾರು ಜನರಿಗೆ "ಅನರ್ಹ ಶಾಸಕರು" ಎಂದು ಕರೆದು ಉಳಿದವರ ಬಗ್ಗೆ ತಪ್ಪು ಕಲ್ಪನೆ ಮೂಡಿಸುತ್ತಿವೆ :-)
Friday, October 15, 2010
punಚಾಮೃತ
¿ Drunken brawl - ಕುಡಿದವರ ಹೊಡೆದಾಟಕ್ಕೆ ಇನ್ನೋಂದು ಪದ-
✔ ಅಲ್ ಕೋಲಾಹಲ..
✔ ಅಲ್ ಕೋಲಾಹಲ..
Friday, October 1, 2010
punಚಾಮೃತ
ಶೋಭಾ ಬುರುಡೆ ಬಿಡ್ತೀವಿ ಅಂತ ಹೇಳಿದ್ದನ್ನು ಪ್ರಜಾವಾಣಿ ವರದಿಮಾಡಿದೆ : http://www.prajavani.net/Content/Oct22010/state20101001206880.asp?section=updatenews
Sunday, January 31, 2010
punಚಾಮೃತ
¿ ’ನಿನ್ನ ಬುದ್ಧಿಗಷ್ಟು ಬೆಂಕಿ ಹಾಕ’ ಅಂತ ನೀವ್ಯಾರಿಗಾದರೂ ಅಂದರೆ ಅವರಿಗೆ ಏನಾಗುತ್ತೆ ?
✔ ಅವರು ಇಗ್ನೈಟೆಡ್ ಮೈಂಡ್ ಆಗುತ್ತಾರೆ..!!
✔ ಅವರು ಇಗ್ನೈಟೆಡ್ ಮೈಂಡ್ ಆಗುತ್ತಾರೆ..!!
Saturday, January 2, 2010
punಚಾಮೃತ
ಜಾರ್ಖಂಡದಲ್ಲಿ ಜೆಎಂಎಂ ಮತ್ತು ಭಾಜಪ ಸೇರಿ ಸರಕಾರ ರಚಿಸುತ್ತಾ ಇವೆ ಅಂತೆ..
ಇದಕ್ಕೆ ಇವೆರಡೂ ಪಕ್ಷಗಳ ನಾಯಕರುಗಳ ನಡುವಿನ ಗಡ್ಡ ಸಾಮರಸ್ಯವೇ ಕಾರಣ - ಒಬ್ಬರು ಗಡ್ಡಧಾರಿಯಾದರೆ, ಇನ್ನೊಬ್ಬರು ’ಗಡ್ಡ’ಕರಿ...
ಇದಕ್ಕೆ ಇವೆರಡೂ ಪಕ್ಷಗಳ ನಾಯಕರುಗಳ ನಡುವಿನ ಗಡ್ಡ ಸಾಮರಸ್ಯವೇ ಕಾರಣ - ಒಬ್ಬರು ಗಡ್ಡಧಾರಿಯಾದರೆ, ಇನ್ನೊಬ್ಬರು ’ಗಡ್ಡ’ಕರಿ...
Sunday, December 27, 2009
punಚಾಮೃತ
¿ ತೆಲಂಗಾಣದ ಬಗ್ಗೆ ಕೇಂದ್ರ ತನ್ನ ರಾಗ ಬದಲಿಸಿದೆ..
✔ ಇದು ತೆಲಂ’ಗಾಯನ’...
✔ ಇದು ತೆಲಂ’ಗಾಯನ’...
Saturday, December 26, 2009
punಚಾಮೃತ
¿ ಬಿಜೆಪಿ ಸರಕಾರ ರೇಣುಕಾಚಾರ್ಯರನ್ನು ಕ್ಯಾಬಿನೆಟ್ಟಿಗೆ ಸೇರಿಸಿಕೊಂಡಿದೆ...
✔ ಇದು ಈ ಸರಕಾರದ ಆಚಾರ್ಯ ಕೃತಿ - master piece..
✔ ಇದು ಈ ಸರಕಾರದ ಆಚಾರ್ಯ ಕೃತಿ - master piece..
Thursday, December 24, 2009
punಚಾಮೃತ
¿ ಗೌತಮ್ ಗಂಭೀರಗೆ ವಿಕೆಟ್ಟಿಗೆ ಅಂಟಿಕೊಂಡು ಇನ್ನಿಂಗ್ಸ್ ಕಟ್ಟುವುದು ಬಹಳ ಸರಳ ಕೆಲಸ, ಯಾಕೆ ?
✔ ಯಾಕಂದ್ರೆ ಅವರ ಹೆಸರಲ್ಲಿಯೇ ಅಂಟಿದೆ - gumಭೀರ !!
✔ ಯಾಕಂದ್ರೆ ಅವರ ಹೆಸರಲ್ಲಿಯೇ ಅಂಟಿದೆ - gumಭೀರ !!
Tuesday, December 1, 2009
punಚಾಮೃತ
ನಿಮ್ಮ ಲ್ಯಾಪ್ ಟಾಪ್ ಬಹಳ ಕಿರಿಕಿರಿ ಕೊಡುತ್ತಿದ್ದರೆ ಅದರ ಲೇಬಲ್ಲನ್ನು ಹೀಗೆ ಬದಲಾಯಿಸಿ :-)
Monday, November 30, 2009
punಚಾಮೃತ
ಅಂತೂ ಇಂತೂ ಪಾಪದ ಕೊಡ ತುಂಬಿತು..
Sunday, November 29, 2009
punಚಾಮೃತ
(potty ಅಂದರೆ ಆಡು-ಇಂಗ್ಲೀಷು ಭಾಷೆಯಲ್ಲಿ, ವಿಶೇಷವಾಗಿ ಪುಟ್ಟಮಕ್ಕಳ ಸಂದರ್ಭದಲ್ಲಿ, ಶೌಚ ಎಂದರ್ಥ)
¿ ಪುಟ್ಟಮಕ್ಕಳನ್ನು ಅವುಗಳ ಅಮ್ಮಂದಿರು "ಸಂಡಾಸ್ ಬಂತಾ ?" "ಒಂದಕ್ಕೆ ಹೋಗ್ಬೇಕಾ?" ಎಂದು ಕೇಳುವ ಪ್ರಶ್ನೆಗಳಿಗೆ..
✔ potty ಸವಾಲ್ ಎಂದು ಹೆಸರು !!
¿ ಮೇಲಿಂದ ಮೇಲೆ ಶೌಚಕ್ಕೆ ಹೋಗಬೇಕಾದ ಲೂಸ್ ಮೋಷನ್ ಇದ್ದಾಗ ಶಾಲೆಗೆ ಚಕ್ಕರ್ ಹೊಡೆದ ಪಾಪುಗಳು ಹಾಡುವ ಹಾಡು..
✔ "potty ಮ್ಯಾಲೆ potty, ನಮ್ ಸಾಲಿ ಸೂಟಿ !! "
¿ ದಿನಕ್ಕೆ ಮೂರು ಸಲ ಶೌಚಕ್ಕೆ ಹೋಗುವವರನ್ನು..
✔ ತ್ರಿ-potty ಎನ್ನಬಹುದು.

Wednesday, November 25, 2009
punಚಾಮೃತ
¿ ದೇವರು ಸುಡುಗಾಡು, ಕಗ್ಗಾಡು, ಬೆಂಗಾಡು ಎಲ್ಲೆಲ್ಲಿಯೂ ಇದ್ದಾನೆ..
✔ ಹೌದು ಮತ್ತೆ.. ನೀವೇ ನೋಡಿ ಸುಡು"ಗಾಡು", ಕಗ್"ಗಾಡು", ಬೆಂ"ಗಾಡು" !!
✔ ಹೌದು ಮತ್ತೆ.. ನೀವೇ ನೋಡಿ ಸುಡು"ಗಾಡು", ಕಗ್"ಗಾಡು", ಬೆಂ"ಗಾಡು" !!
Wednesday, October 7, 2009
punಚಾಮೃತ
¿ ಗಣೇಶನಿಗೆ ಏಕದಂತ ಎಂದು ಹೆಸರು ಹೇಗೆ ಬಂತು ?
✔ ಗಣೇಶ ಒಮ್ಮೆ ಚೌತಿಯ ವಿಸಿಟ್ ಮುಗಿಸಿಕೊಂಡು ಇಲಿಯ ಮೇಲೆ ಕೈಲಾಸಕ್ಕೆ ಹೊರಟಿದ್ದ. ದಾರಿಯಲ್ಲಿ ಒಂದು ಹಾವು ಕಂಡು ಇಲಿ ಗಣೇಶನನ್ನು ಬೀಳಿಸಿ ಓಡಿ ಹೋಯಿತು. ಬಿದ್ದ ಗಣೇಶನನ್ನು ನೋಡಿ ಮುಗಿಲಲ್ಲಿದ್ದ ಚಂದ್ರ ನಕ್ಕ. ಅದರಿಂದ ಸಿಟ್ಟಿಗೆದ್ದ ಗಣೇಶ ತನ್ನ ಬಲ ದಂತವನ್ನು ಮುರಿದು ಚಂದ್ರನಿಗೆ ಎಸೆದ. ಮುರಿದ ದಂತದಿಂದಾಗಿ ಗಣೇಶನಿಗೆ ache ಆಗ್ತಾ ಇದ್ದದ್ದರಿಂದ ಅವನಿಗೆ ’ache-ದಂತ’ ಎಂದು ಹೆಸರಾಯಿತು..

Thursday, September 17, 2009
punಚಾಮೃತ
¿ ಊರಿಗೆ ಬುದ್ಧಿ ಹೇಳುವ ವ್ಯಕ್ತಿಯೊಬ್ಬರು ಹಳ್ಳಿಯೊಂದರ ಗೋಮಾಳ ನುಂಗಿದ್ದಾರೆ..
✔ ಅವರಪ್ಪ- ಅಮ್ಮ ಅವರಿಗೆ 'ದನಕರನ್ ' ಎಂದು ಹೆಸರಿಡಬೇಕಿತ್ತು..
✔ ಅವರಪ್ಪ- ಅಮ್ಮ ಅವರಿಗೆ 'ದನಕರನ್ ' ಎಂದು ಹೆಸರಿಡಬೇಕಿತ್ತು..
Monday, September 14, 2009
punಚಾಮೃತ
ಈ ಪ್ರಕಾಶನ ಸಂಸ್ಥೆಯ ಚಿನ್ಹೆಯಲ್ಲಿ ಎಂಥ ವಿಪರ್ಯಾಸವಿದೆ ನೋಡಿ :
ಹೆಸರು "ಒಂಟಿ" ದನಿ, ಚಿತ್ರದಲ್ಲಿ ಇರೋದು ಮಾತ್ರ ನಾಯಿಯೋ, ನರಿಯೋ...
Subscribe to:
Posts (Atom)