Friday, April 1, 2011

ಸಮಾಪ್ti

ಟೆಕ್ಸಾಸ್ ಇನ್ಸ್ ಟ್ರುಮೆಂಟ್ಸ್ (ಟಿಆಯ್) ಕಂಪನಿಯಲ್ಲಿ ವಿವಿಧ ವಿಭಾಗಗಳಿಗೆ, ಪ್ರಾಜೆಕ್ಟುಗಳಿಗೆ ti ಅಕ್ಷರಗಳಿಂದ ಅಂತ್ಯಗೊಳ್ಳುವ ಭಾರತೀಯ ಭಾಷಾ ಮೂಲದ ಹೆಸರುಗಳನ್ನು ಕೊಡುವುದು ಸಂಪ್ರದಾಯ. ಉದಾಹರಣೆಗೆ ಪ್ರಗti ಎನ್ನುವುದು ಕಲಿಕೆಯ ಕಾರ್ಯಕ್ರಮವಾದರೆ, ಯುಕ್ti ಎನ್ನುವುದು ಪ್ರಾಜೆಕ್ಟಿನ ಹೆಸರು.

ಅದೇ ಸಂಪ್ರದಾಯ ಪಾಲಿಸಿ ಇನ್ನಷ್ಟು ಹೆಸರು ಬದಲಿಸಲು ಅವರು ಬಯಸಿದರೆ, ನನ್ನ ಕಡೆಯಿಂದ ಅವರಿಗೆ ಕೆಲವು ಹೆಸರುಗಳ ಸಲಹೆಗಳು:
  • Ethics office: ನೀti
  • payroll office: ಪ್ರಾಪ್ti
  • job openings system : ನಿಯುಕ್ti
  • IT Department: ಮಾಹಿti
ಇನ್ನು ತಮ್ಮ ಉದ್ಯೋಗಿಗಳಿಗೆ ಕೆಲ ಪದವಿಕೊಡಬೇಕೆಂದು ಅವರು ಬಯಸಿದರೆ, ಇವುಗಳನ್ನು ಉಪಯೋಗಿಸಬಹುದು
  • ಅತೀ ಜಾಣ ಪುರುಷ ಉದ್ಯೋಗಿಗೆ: ಬ್ರಹಸ್ಪti
  • ಅತೀ ಜಾಣ ಸ್ತ್ರೀ ಉದ್ಯೋಗಿಗೆ: ಸರಸ್ವti
  • ಅತೀ ಸುಂದರ ಸ್ತ್ರೀ ಉದ್ಯೋಗಿಗೆ: ರti
  • ಅತೀ ಕಿಡಿಗೇಡಿ ಪುರುಷ ಉದ್ಯೋಗಿಗೆ: ಕೋti

"ಟೆಕ್ಸಾಸ್ ಇನ್ಸ್ ಟ್ರುಮೆಂಟ್ಸನಲ್ಲಿ  ಕೆಲಸಮಾಡುವ ನೀನೆ ಅವರಿಗೆ ನೇರವಾಗಿ ಸಲಹೆ ಕೊಡಬಹುದಲ್ಲಾ ?  ಬ್ಲಾಗಿನಲ್ಲಿ ಯಾಕೆ ಬರೆಯಬೇಕು?" ಎಂದಿರಾ ? ಹಾಗಾದರೆ ನಿಮಗೆ ವಿಷಯ ಗೊತ್ತಿಲ್ಲ ಅನಿಸುತ್ತೆ, ನಾನು ಈಗ ಟಿಆಯ್ ಉದ್ಯೋಗಿಯಲ್ಲ. ನಿನ್ನೆಯೇ ಆಗಿದೆ ನನ್ನ ಟಿಆಯಿನ ಇನ್ನಿಂಗ್ಸ್ ಸಮಾಪ್ti.

ಇಂti ನಿಮ್ಮ,
ಗುರು

1 comment:

Unknown said...

ಈಗಾ ಯಾವ ಕಂಪನಿ ಹೊಂti ಗುರು ?